M ಶ್ರೀಮದಾನಂದ ರಾಮಯಣ, ಯದ ಮೇಲೆ ಇರುವ ಬ್ರಹ್ಮಸಭೆಯನ್ನು ನೋಡಿ, ಸೀತಾಸಮೇತನಾಗಿ ಹಿಂತಿರು ಗಿದನು, ಇಂದ್ರಾದಿ ದೇವತೆಗಳು ವಿನಾರೂಢನಾದ ಪರಿಜನಗಳಿಂದ ಯು ಕನಾದ ಶ್ರೀರಾಮನನ್ನು ನಮಸ್ಕರಿಸಿದರು. ಬ್ರಹ್ಮದೇವನು ಶ್ರೀರಾಮನನ್ನು ಆ ಲಿಂಗಿಸಿದನು, ಇಂದ್ರನೇ ಮೊದಲಾದ ದೇವತೆಗಳು ಶ್ರೀರಾಮನನ್ನು ಪೂಜಿಸಿ ದರು. ಬ್ರಹ್ಮನು ಸೀತಾ-ರಾಮರ ಪೂಜೆಗೂಡಿ ಆತನಿಗೆ ಸರ್ವಾರ್ಥಸ್ಪದವಾದ ಕಾಮಧೇನುವನ್ನು ಸಮರ್ಪಿಸಿದನು. ಶ್ರೀರಾಮನು ಆ ಕಾಮಧೇನುವನ್ನು ವಿವನ ದಲ್ಲಿ ಕುಳ್ಳಿರಿಸಿಕೊಂಡು, ದೇವತೆಗಳೊಡನೆ ಕೈಲಾಸಕ್ಕೆ ಪ್ರಯಾಣಮೂಡಿದನು. ಶ್ರೀರಾಮನು ಬ್ರಹ್ಮಾದಿಗಳೊಡನೆ ಬರುತ್ತಿರುವನೆಂದು ವರ್ತಮಾನವನ್ನು ಕೇಳಿ ಶಂಕರನು, ಪಾರ್ವತೀಸಹಿತ ನಂದಿಯನ್ನೇರಿ ಶ್ರೀರಾಮನಿಗೆ ಎದುರಾಗಿ ಬಂದನು, ಶಂಕರನು ಬರುತ್ತಿರುವದನ್ನು ನಾಡಿ, ಶ್ರೀರಾಮನು ವಿರೂಪದಿಂದ ಇಳಿದು ಆತನ ನ್ನು ನಮಸ್ಕರಿಸಿದನು. ಬಳಿಕ ಪರಶಿವನು ಶ್ರೀ ರಾಮನನ್ನು ಆಲಿಂಗನ ದೂಡಿ, ತನ್ನ ಮಂದಿರಕ್ಕೆ ಕರೆದುಕೊಂಡು ಹೋದನು ಪಾರ್ವತಿಯ ಸೀತಾದೇವಿಯನ್ನು ಅಭಿ ನಂದಿಸಿದಳು. ಸೀತಾದೇವಿಗೆ ನಾನಾ ವಿಧವಾದ ವಸ್ತ್ರಗಳು, ಅಭರಣಗಳು, ಇವುಗಳ ನ್ನು ಪಾರ್ವತಿಯು ಉಡುಗರೆಯಾಗಿ ಕೊಟ್ಟಳು, ಕರ್ಣಕುಂಡಲಗಳನ್ನೂ, ಚಂ ಪ್ರಹಾರವನ್ನೂ ಅತ್ಯಾದರದಿಂದ ಸಮರ್ಪಿಸಿದಳು ಬಳಿಕ ಶಂಕರನು-ಎಕ್ಕೆ ನಾಂಶಯಣನೇ, ನಿನ್ನ ನಾಭಿಕಮಲದಿಂದ ಬ್ರಹ್ಮನು ಹುಟ್ಟಿದನು. ಆತನಿಂದ ನಾನು ಉತ್ಪನ್ನ ನಾದನು ಆದಕಾರಣ ನಾನು ನಿನಗೆ ಮೊಮ್ಮಗನಾಗಬೇಕು. ನಿನ್ನ ಸಹಾಯದಿಂದಲೇ ನಾನು ಸೃಷ್ಟಿಯನ್ನು ನಾಶಮಡುವೆನು, ಎಲೆ ಪರಮಾ ತನೇ, ಇಂಧು ನೀನು ರಾವಣನ ವಧೆಯ ಭೀತಿಯಿಂದ ರ್ತೀಟನೆ ಮಾಡುವ ದನ್ನು ನೋಡಿದರೆ, ಆಶ್ಚರ್ಯವಾಗುವದು. ಆದರೆ ನೀನು ಲೋಕದ ಜನರಿಗೆ ನ ಡವಳಿಕೆಗಳನ್ನು ಉಪದೇಶಿಸಲು, ಈ ರೀತಿ ನಟಿಸುವ ಎಂದು ನಾನು ತಿಳಿಯುವನು, ಈ ರೀತಿಯಿಂದ ಶ್ರೀರಾಮನನ್ನು ಹೊಗಳಿ, ಪರಮೇಶ್ವರನು ಅವಮೌಲ್ಯವಾದ ವ ಸಾಭರಣಗಳನ್ನೂ ನಾನಾವಿಧವಾದ ಭೋಜ್ಯ ಪದಾರ್ಥಗಳನ್ನೂ ಆತನಿಗೆ ಸಮ ರ್ಪಿಸಿದನು, ಮತ್ತು ಶ್ರೀರಾಮನ ಹೃದಯದಲ್ಲಿ ಚಿಂತಾಮಣಿಯೆಂಬ ಅಪಮೌಲ್ಯ ಕಾದ ರತ್ನವನ್ನು ಧಾರಣ ಮೂಡಿಸಿ ಅಯೋಧ್ಯೆಗೆ ಪ್ರಯಾಣಮೂಡಲು ಅಪ್ಪಣೆಯ ನಿತ್ತನು. ಶ್ರೀರಾಮನ ಹೃದಯದಲ್ಲಿರುವ ದಿವ್ಯರತ್ಯವನ್ನು ನೋಡಿ, ಸ್ವಲ್ಪ ಸ್ವಲ್ಪ ನಾಚಿಕೆಪಡುತ್ತಾ ಸೀತಾದೇವಿಯು-'ಎಲೈ ಪ್ರಾಣವಲ್ಲಭನೇ, ಈ ಕಾಮಧೇನು ಕಸದಿರಲಿ, ಈಚಿಂತಿರುಚುತರುಗಿರಲಿಎಂದು ಮನೆ ಮಾತನಾಡಿದಳು.
ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.