ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕುಂಡ ೧೫ ಡೋಣ?' ಎಂದು ಹೇಳಿದನು ಆ ಮಂತ್ರಿಯು ರಘಾರಾಢನಾಗಿಮುನಿಗಳ ಆಶ್ರ ಮಕ್ಕೆ ಪ್ರಯಾಣ ಮಾಡಿದನು, ಮತ್ತು ವಾಲ್ಮೀಕಿ ಮಹರ್ಷಿಗಳಿಗೆ ವಂದಿಸಿ, ಶ್ರೀ ರಾಮನು ತಮ್ಮ ಶಿಷ್ಯರ ಪೂರ್ವ ವೃತ್ತಾಂತವನ್ನು ಕೇಳಿಕೊಂಡು ಬರುವಂತೆ ಅಪ್ಪಣೆ ಮಾಡಿರುವನು ಎಂದು ವಿಜ್ಞಾಪಿಸಿದನು. ಆಗ ಮಹರ್ಷಿಗಳು ಎಲೈ ಮಂತ್ರಿವರ್ಯನೇ, ನಾಳಿನ ದಿವಸ ಬೆಳಿಗ್ಗೆ ಗಾಯನ ಕಾಲದಲ್ಲಿ ಈ ಸಮಾಚಾ ರವು ಸ್ಪಷ್ಟವಾಗಿ ತಿಳಿಯುವದೆಂದು ಶ್ರೀ ರಾಮನಿಗೆ ಹೇಳು' ಎಂದು ಆಜ್ಞಾಪಿಸಿ ದರು. ಶ್ರೀ ರಾಮನು ಮಂತ್ರಿಯ ವಚನವನ್ನು ಕೇಳಿ ಸ್ವಲ್ಪ ಸಮಾಧಾನ ಹೊಂ ದಿ, ಆ ಕುಶ-ಲವರನ್ನು ಗುರುಗಳ ಬಳಿಗೆ ಕಳುಹಿಸಿ ಕೊಟ್ಟನು, ವಾಲ್ಮೀಕಿಮಹ ರ್ಷಿಗಳು ಆ ಕುಮಾರರ ಪರಾಕ್ರಮಕ್ಕೆ ಸಂತೋಷಪಟ್ಟು, ಅವರೊಡನೆ ನಾನಾ ವಿಧವಾದ ಸರಸವಚನಗಳನ್ನಾಡುತ್ತ ಆ ರಾತ್ರಿಯನ್ನು ಕಳೆದರು. - - ೩ನೆಯ ಪ್ರಕರಣ-ಲಕ್ಷಣಾದಿಗಳ ಸಂತತಿ. --:0:- ಪಾತಃಕಾಲದಲ್ಲಿ ಯಜ್ಞಾಂಗಗಳೆಲ್ಲ ಮುಗಿದ ಬಳಿಕ ಶ್ರೀ ರಾಮನು ಆ ಮುನಿಸಿ 0 ಪೈರನ್ನು ಕರೆಸಿದನು ತಾಯಿ, ಗುರುಗಳು ಇವರೆಲ್ಲರಿಗೂ ನಮಸ್ಕರಿಸಿ, * ಆ ಲವ-ಕುಶರು ಶ್ರೀರಾಮನ ಸಭೆಗೆ ಬಂದರು. ಮತ್ತು ವಾಲ್ಮೀಕಿ ಮಹರ್ಷಿಗಳ ಆಜ್ಞೆಯಂತೆ ಶ್ರೀರಾಮಚಂದ್ರನ ಸಭೆಯಲ್ಲಿ ಜನ್ಮಕಾಂಡವನ್ನು ಗಾನ ಪದ್ದತಿಯಿರಿ ದ ಅತಿ ಮನೋಹರವಾಗಿ ಹೇಳಿದರು. ಅದನ್ನು ಕೇಳಿ ಸಮಸ್ತರೂ-ಇವರು ರಾಮನ ಮಕ್ಕಳೇ ಎಂದು ತಿಳಿದರು. ಅಷ್ಟರಲ್ಲಿ ಭರತ-ಶತ್ರುಘ್ನ-ಲಕ್ಷ್ಮಣರು ಅಲ್ಲಿಗೆ ಬಂದರು. ಶ್ರೀರಾಮನು ಲವ-ಕುಶರಿಗೆ ಆಶ್ರಮಕ್ಕೆ ಪ್ರಯಾಣಮೂಡಲು ಅಪ್ಪನನೂಡಿ, ಗಂಗಾತೀರದಲ್ಲಿ ಒಂದು ವಿಸ್ತ್ರತವಾದ ಸಭೆಯನ್ನು ನಿರ್ಮೂಣ ಮೂಡಿಸುವಂತ ಲಕ್ಷಣನಿಗೆ ಆಜ್ಞಾಪಿಸಿದನು. ಮತ್ತು ಅಲ್ಲಿಗೆ, ಸೀತಾದೇವಿ, ಲವ, ಕುಶ ಇವರೊಡನೆ ವಾಲ್ಮೀಕಿ ಮಹರ್ಷಿಗಳು ಬರಬೇಕೆಂದು ಹೇಳಿಕಳುಹಿದನು. ಮಹರ್ಷಿಗಳು ಶ್ರೀರಾಮನ ಅಭಿಪ್ರಾಯವನ್ನು ತಿಳಿದು, ನಾಳೆ ಸೀತಾದೇವಿ ಯು ಸಭೆಯಲ್ಲಿ ಪ್ರಮಣಮಾಡುವಳು. ಪತಿವ್ರತೆಯರಿಗೆ ಪತಿಗಿಂತಲೂ ದೇವರು ಯಾರಿರುವರು?' ಎಂದು ಶ್ರೀರಾಮನಿಗೆ ವಿಜ್ಞಾಪಿಸುವಂತ ದಾತರಿಗೆ ಹೇಳಿದರು