F ಶ್ರೀಮದಾನಂದ ರಾಮಾಯಣ, ಗಳಿಂದ ಸಮಸ್ತರಿಗೂ ಉಪದೇಶ ಮಾಡುತ್ತ ಅನೇಕ ಕಾಲದ ವರೆಗೆ ರಾಜ್ಯವನ್ನು ಪಾಲಿಸಿದನು. ಅನಂತರ ಸೀತಾದೇವಿಯ ತಂಗಿಯರಾದ ಊರ್ಮಿಳೆ, ಮಾಂಡವಿ, ಶ್ರುತ ಕೀತಿ, ಈ ರಾಜಕನ್ಯಯರೂ ಗರ್ಭಿಣಿಯಾದರು. ಆಗ ಸೀತಾದೇವಿಯು ಬ ಹಳ ಉತ್ಸವ ಮಾಡಿದಳು ಪುಂಸವನವೇ ಮೊದಲಾದ ಶಾಸ್ಪೋಕ್ತ ಕಾರ್ಯರ ಳು ನೆರವೇರಿದವು. ಎಲ್ಲಾ ಉತ್ಸವಕಾಲಗಳಲ್ಲ. ಜನಕಮಹಾರಾಜನು ಬರುತ್ತಿ ದ್ದನು. ಅವರೆಲ್ಲರನ್ನೂ ಶ್ರೀ ರಾಮನು ವಸ್ತಾ-ಭರಣಗಳಿಂದ ಆನಂದಗೊಳಿಸಿ ದನು. ಸೀತೆಯು ಕಾಲಕಾಲಗಳಲ್ಲಿ ತಂಗಿಯರ ಬಯಕೆಗಳನ್ನು ಪೂರ್ತಿಯಾಡು ತ್ತಿದ್ದಳು, ನವಮಾಸಗಳು ತುಂಬಿದ ಬಳಿಕ ಯೋಗ್ಯಕಾಲದಲ್ಲಿ ಆ ಮೂವರೂ ರಾಜಪುತ್ರಿಯರು ಪುತ್ರರತ್ನಗಳನ್ನು ಪಡೆದರು. ಶ್ರುತಕೀರ್ತಿಗೆ ಮಾತ್ರ ಇಬ್ಬರು ಮಕ್ಕಳು ಜನಿಸಿದರು. ಕೆಲವು ಕಾಲದ ಮೇಲೆ ಪಾಂಡವಿ, ಊರ್ಮಿಳೆ, ಇವರು ಮತ್ತೆ ಒಬ್ಬೊಬ್ಬ ಪುತ್ರ ಶ್ರೇಷ್ಠ ರನ್ನು ಪಡೆದರು. ವಸಿಷ್ಠರು ಲಕ್ಷ್ಮಣನ ಹಿರಿಯ ಮಗನಿಗೆ ಅಂಗದನೆಂತಲೂ, ಕನಿಷ್ಠನಿಗೆ ಚಿತ್ರಕೇತುವೆಂತಲೂ, ಭರತನ ಜೈಷ್ಣವ ತನಿಗೆ ಪುಷ್ಕರನೆಂತಲೂ, ಚಿಕ್ಕವನಿಗೆ ತಕ್ಷನೆಂತಲೂ, ಶತ್ರುಘ್ನನ ಹಿರಿಯ ಮ ಗನಿಗೆ ಸುಬಾಹುವೆಂತಲೂ, ಕಿರಿಯನಿಗೆ ಯೂಪಕೇತುವೆಂತಲೂ ನಾಮಕರಣ ಮಾಡಿದರು. ಶ್ರೀ ರಾಮನು ಆ ಮಕ್ಕಳ ಜಾತಕರ್ಮ-ನಾಮಕರಣಾದಿ ಸಮಸ್ತ ಕಾರ್ಯಗಳನ್ನೂ ಬಹು ವಿಜೃಂಭಣೆಯಿಂದ ನಡೆಸಿದನು. ಜನಕಮಹಾರಾಜನು ತನ್ನ ಮಕ್ಕಳಿಗೆ ಇಬ್ಬಿಬ್ಬರು ಮಕ್ಕಳಾಗಿರುವದನ್ನು ನೋಡಿ ಸಂತುಷ್ಟನಾದನು.
- ಆ ಎಂಟು ಹುಡುಗರೂ ಒಬ್ಬರಿಗಿಂತ ಒಬ್ಬರು ವಯಸ್ಸಿನಲ್ಲಿ ಚಿಕ್ಕವರಿದ್ದರು. ಶ್ರೀ ರಾಮನ ಕೃಪೆಯಿಂದ ಅವರೆಲ್ಲರೂ ಪ್ರಬುದ್ಧರಾದಂತ ಸಮಸ್ತರಿಗೂ ಸಂ ತೋಷವು ಹೆಚ್ಚಿತು. ಶ್ರೀರಾಮನು ಅವರೆಲ್ಲರಿಗೂ , ಭೂಷಣ, ಕವಚ ಇವೇ
ಮೊದಲಾದ ವಸ್ತುಗಳನ್ನು ಸಮುದೃಷ್ಟಿಯಿಂದ ಮಾಡಿಸುತ್ತಿದ್ದನು. ಆ ಪುಕ್ಕಳ ಬಲಲೀಲೆಗಳನ್ನು ನೋಡಿ ಲಕ್ಷಣಾದಿಗಳು ಪರಮಸಂತೋಷವನ್ನು ಹೊಂದಿ ದರು. ಆ ಹುಡುಗರ ರೂಪಲಾವಣ್ಯಗಳಂತೂ ವರ್ಣಿಸಲಸದಳವಾಗಿದ್ದವು. ಇರಲಿ, ಶ್ರೀರಾಮನು ಒಂದು ದಿವಸ ವಸಿಷ್ಠರನ್ನು ಮಕ್ಕಳ ಲಕ್ಷಣಗಳನ್ನು ನೋ ಡಬೇಕೆಂದು ಪ್ರಾರ್ಥಿಸಿದರು. ಅವರು ಎಲ್ಲಾ ಲಕ್ಷಣಗಳನ್ನೂ ಸಾವಧಾನದಿಂದ ತಿಳಿದು ಶ್ರೀರಾಮನಿಗೆ ವಿಶದವಾಗಿ ತಿಳಿಯಹೇಳಿದರು, ನೀತಿ-0ಮರು ಆ ಮ ಕ್ಕಳ ಬಲಕ್ರೀಡೆಗಳನ್ನು ನೋಡುತ್ತ ಡಿವಸಗಳನ್ನು ಕ್ಷಣದಂತ ಕಳೆದರು. ಅನಂ