ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ-ಪೂರ್ವಾರ್ಧ, ೧ನೆಯ ಪ್ರಕರಣ. ದೂರ್ವಾಸರ ತೃಪ್ತಿಯೂ, ನಿದ್ರಾದೇವಿಯ ಸಮಾಧಾನವೂ, ಶ್ರೀರಾಮನು ವತ್ರಮಿತ್ರರೊಡನೆ ಸುಖದಿಂದ ಪ್ರಜಾರಕ್ಷಣೆಮಾಡುತ್ತಿರಲು, ದೂರ್ವಾಸರು ಆತನ ಮಹಿಮೆಯನ್ನು ಭೂಲೋಕದಲ್ಲಿ ಪ್ರಸಿದ್ಧ ಗಾಳಿಸುವದಕಖ್ಯ ಗಿ ಆತನ ಮಂದಿರಕ್ಕೆ ದಯಮಾಡಿಸಿದರು. ಆ ಮಹರ್ಷಿಗಳನ್ನು ನೋಡಿ ದೂತ ರು ಏಕಾಂತ ಗೃಹದಲ್ಲಿ ವಾಸಮಾಡಿದ್ದ ಶ್ರೀರಾಮನಿಗೆ ಈ ವೃತ್ತಾಂತವನ್ನು ತಿಳು ಹಿದರು, ಶ್ರೀರಾಮನು ಈ ಮಾತುಗಳನ್ನು ಕೇಳಿದೊಡನೆ ಸಿಂಹಾಸನದಿಂದ ಎದ್ದು ಸಮಸ್ತ ಪೂಜಾದ್ರವ್ಯಗಳನ್ನೂ ಕುಸಿ, ದೂರ್ವಾಸರು ನಿಂತಿರುವಲ್ಲಿಗೆ ಪಾದ ಚಾರಿಯಾಗಿ ನಡೆದನು, ಮತ್ತು ವಿಧ್ಯುಕ್ತರೀತಿಯಿಂದ ಆಮುನಿಗಳ ಪಾದಗಳ ನ್ನು ಪೂಜಿಸಿ ಒಳಕ್ಕೆ ಕರೆತಂದನು, ದೂರ್ವಾಸರು ತಮ್ಮ ಅರವತ್ತು ಸಾವಿರ ಮಂದಿ ಶಿಷ್ಯರೊಡನೆ ರಾಜಭವನವನ್ನು ಪ್ರವೇಶಿಸಿ ಉಚಿತವಾದ ಆಸನದ ಮೇಲೆ ಕುಳಿತರು. ಬಳಿಕ ಶ್ರೀರಾಮನು ಸೀತಾಸಮೇತನಾಗಿ ಜೋಡಶೋಪಚಾರಗ ಳಿಂದ ಅಮುನಿಯನ್ನು ಪೂಜಿಸಿದನು. ದೂರ್ವಾಸರೂ ಕೈಜೋಡಿಸಿಕೊಂಡು ನಿಂತಿರುವ ಶ್ರೀರಾಮನನ್ನು ನೋಡಿ ಹೇ ರಾಮಚಂದ್ರನೇ, ನಾನು ಒಂದು ಸಾವಿ ರ ವರ್ಷಗಳಿಂದ ಉಪವಾಸ ಮಾಡಿರುವೆನು, ಈ ದಿವಸ ಪಾರಣೆ ಮಾಡಬೇಕು. ನನ್ನ ಶಿಷ್ಯರೂ ಬಹಳ ಬಳಲಿರುವರು. ಆದ್ದರಿಂದ ಧೇನು, ಮಣಿ, ಅಗ್ನಿ ಇವುಗ ಳ ಸಂಬಂಧವಿಲ್ಲದ ಷಡ್ರಸಗಳಿಂದ ಯುಕ್ತವಾದ ಅನ್ನವನ್ನು ನಮಗೆ ಸಿದ್ಧ ಪಡಿಸು. ನಮ್ಮ ಶಿವಪೂಜೆಗೆ ಅಲೌಕಿಕವಾದ ಪುಷಗಳು ಬೇಕಾಗುವವು. ನಿನ್ನಲ್ಲಿ ಈ ಎ ಲ್ಲ ಅನುಕೂಲಗಳು ದೊರೆಯಬಹುದೆಂದು ನಾವು ಇಲ್ಲಿಗೆ ಬಂದಿರುವೆವು. ಯೋಗ್ಯತೆ ಇಲ್ಲವಾದರೆ, ಈಗಲೆ ಖಂಡಿತವಾಗಿ ಹೇಳು ಮುಂದೆ ಇನ್ನೇನಾದ ರೂ ಪ್ರಯತ್ನ ಮಾಡಬೇಕಾಗುವದು” ಎಂದು ಮಾತನಾಡಿದರು. ಮಹರ್ಷಿಗೆ ಆ ಈ ವಚನಗಳನ್ನು ಕೇಳಿ ಶ್ರೀರಾಮನು (ಮಹಾನು ಭಾವರೇ, ತಮ್ಮ ಅನುಗ್ರ ಹದಿಂದ ಯಾವ ಪದಾರ್ಥಗಳಿಗೂ ಸಂಕೋಚವಿಲ್ಲ. ತಮ್ಮ ನಿತ್ಯಕೃತ್ಯಗಳೆಲ್ಲ ನೆರವೇರಲಿ' ಎಂದು ವಿಜ್ಞಾಪಿಸಿದನು. ಅನಂರ ದೂರ್ವಾಸರು ಸಮಸ್ತ ಪa