ಶಗdಡ. ಮಾಡಿದನು. ಶ್ರೀ ರಾಮಚಂದ್ರನು ಧನುಸ್ಸನ್ನು ಭಂಗವಾಡಿದುದರಿಂದ ಸೀತಾ ದೇವಿಯು ಹೃದಯದಲ್ಲುಂಟಾಗ ಆನಂದಕ್ಕೆ ಯಾವದೂ ಸರಿಬಾರದು, ಅಂತಃ ಸರದ ವನಿತೆಯರು ಶ್ರೀ ರಾಮನ ಮೇಲೆ ಹೂ ಮಳೆ ಸುರಿಸಿದರು. ಬಂದ ಜನ ಗಳ ಸೂತ್ರ ಮಾಡಿದರು. ಶ್ರೇಷ್ಠರಾದ ಬ್ರಹರ್ಷಿಗಳು ಆ ರಾಜಕುಮಾರನಾದ ರಾಘಸಿಗೆ ಆಶೀರ್ವಾದ ಮಾಡಿದರು. ಶ್ರೀ ರಾಮಚಂದ್ರನ ಅಸದೃಶವಾದ ಈ ಪರಾಕ್ರಮವನ್ನು ನೋಡಿ, ಜನಕ ಭೂಪತಿ ಯು ಆನಂದಯುಕ್ತನಾಗಿ ತನ್ನ ಮಗಳಾದ ಸೀತಾದೇವಿಯನ್ನು ಸರ್ವಜ್ಞ ರಣಗಳಿಂದ ಭೂಷಿತಳಾದ ಆನೆಯ ಮೇಲೆ ಕುಳ್ಳಿರಿಸಿಕೊಂಡು, ಶೀಘ್ರವಾಗಿ ಸಭಾ ಮಂಟಪಕ್ಕೆ ಕರೆತರುವಂತೆ ಮಂತ್ರಿಗಳಿಗೆ ಅಪ್ಪಣೆಮಾಡಿದನು. ಬಳಿಕ ಮಂತ್ರಿಯು ಅಂತಃಪುರವನ್ನು ಪ್ರವೇಶಿಸಿ, ಸೀತಾದೇವಿಗೆ ನಮಸ್ಕರಿಸಿ, ೮೯ ಹೇ ಸೀತೆ, ನೀನೇ ಧನ್ಯಳು. ನೀನೇ ಜಗದ್ವಂದಳು , ಹೇ ಜನಕಕುಮಾರಿಕೆ, ಈ ದಿವಸ ಪ್ರೀತಿಯ ಅರಗಿಳಿಯಾದ ನಿನ್ನನ್ನು ದಶರಥ ಕುಮಾರನಾದ ಶ್ರೀ ರಾಮಚಂದ್ರನಿಗೆ ಸವ'ರ್ಪಿಸಿ, ನಿನ್ನ ತಂದೆಯು ಕೃತಾರ್ಥನಾಗಬೇಕೆಂದಿರುವನು. ಆದ ಕಾರಣ ನೀನು ಇಲ್ಲಿ ನಿಂತಿರುವ ಆನೆಯ ಮೇಲೆ ಕುಳಿತು, ತಡಮಾಡದೆ ಸಭಾಮಂಟಪ ವನ್ನು ಪ್ರವೇಶಿಸು , ನಾನು ಜನಕಮಹಾರಾಜರ ಆಜ್ಞೆಯಂತೆ ನಿನ್ನ ಸನ್ನಿಧಿಗೆ ಬಂದಿರುವೆನು” ಎಂದು ವಿಜ್ಞಾಸಿಸಿದನು. ಆಗ ಸೀತಾದೇವಿಯು ಸಭಗೆ ಹೊರ ಡಲು ಸಿದ್ಧಳಾದಳು. ತಾಯಿ ಗುರುಹಿರಿಯರಿಗೂ ನಮಸ್ಕರಿಸಿ, ಬಾಗಿಲಲ್ಲಿ ನಿಂತಿರುವ ಆನೆಯ ಬಳಿಗೆ ಬಂದಳು. ಆಗ ಅನೇಕ ಸಖಿಯರು ಜೊತೆಗೆ ಬಂದರು. ಅವರಲ್ಲಿ ಒಬ್ಬ ಸಬಿಯನ್ನು ಜೊತೆಗೆ ಕರೆದುಕೊಂಡು, ಜನಕನಿಂದನೆಯು ಅಂಬಾ ರಯನ್ನು ಹತ್ತಿದಳು. ಅಷ್ಟರಲ್ಲಿ ಆ ಆನೆಯ ಸುತ್ತಲೂ ಸೇನಾಜಿನಗಳು ಕಾವಲಿ ಗಾಗಿ ಸಿದ್ಧರಾದರು. ಸೀತಾದೇವಿಯನ್ನು ನೋಡಬೇಕೆಂದು ಜನಗಳ ತರಂಗಗಳು ನೆರೆದಿದ್ದವು. ಅರಮನೆಯಿಂದ ಸಭಾಮಂಟಪದ ವರೆಗೂ ಸೀತೆಯ ಮೇಲೆ ಹೂಗಳನ್ನು ಪ್ರಜೆ ಗಳು ಎಡೆಬಿಡದೆ ವರ್ತಿಸಿದರು. ಆ ಕಾಲದಲ್ಲಿ ಅಂಬಾರಿಯಲ್ಲಿದ್ದ ಸಖಿಗೆ ಸೀತಾ ದೇವಿಯ ಮೇಲೆ ಬೀಳುವ ಹೂಗಳನ್ನು ತಡೆಯುವದೊಂದೇ ಕಲಸವಾಗಿತ್ತು, ಆ ಸಖಿಯು ಸೀತೆಯ ಕೈಗೆ ನವರತ್ನಗಳ ಮಾಲಿಕೆಯನ್ನು ಕೊಟ್ಟು, ಸ್ವಯವರ ಕಾಲದಲ್ಲಿ ಶ್ರೀ ರಾಮಚಂದ್ರನಿಗೆ ಕೊರಳೊಳಗೆ ಹಾಕುವ ರೀತಿಯ ನ್ನು ತಿಳಿಸುತ್ತಿದ್ದಳು, ಸಭಾಮಂಟಪದ ಬಾಗಿಲಲ್ಲಿ ಆನೆಯು ನಿಂತ ಕೂಡಲೆ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.