'ಜ್ಯ ಕಂಡ ಉತ್ತರಾರ್ಧ. ತಂದೆಯು ಮೃತನಾದ ಮೇಲಾದರೂ ಭರತಾದಿಗಳನ್ನು ನಿಧೀನಮಾಡಿಕೊಂಡು, ರಾಜ್ಯವನ್ನು ಹೊಂದಬಹುದಾಗಿತ್ತು, ಆದರೆ ರಾಜ್ಯಾಸಕ್ತನಾದ ಪುರುಷನಿಗೆ ಸುಖವಿಲ್ಲವೆಂಬುವ ಮಾತಿನ ಅನುಭವ ನನಗೆ ಚನ್ನಾಗಿದ್ದುದರಿಂದ ನಾನು ಹಾಗೆ ಮಾಡಲಿಲ್ಲ. ಹಾಗೆಯೇ, ತಾಯಿ, ತಂದೆ, ತಮ್ಮ, ಬಂಧುಗಳು ಇತ್ಯಾದಿ ಮೋ ಹಗಳಲ್ಲಿ ಮನುಷ್ಯನು ತಡಕಿಕೊಳ್ಳಬಾರದು ಎಂಬ ಈ ವಿಷಯವನ್ನು ಜನರಿಗೆ ಆ ಕಾಲದಲ್ಲಿ ಚನ್ನಾಗಿ ನಡೆದು ತೋರಿಸಿರುವೆನು, ಸುಖದುಃಖಗಳ ಕಾಲದಲ್ಲಿ ಧೀರನು ಸಮಸ್ಥಿತಿಯಲ್ಲಿರಬೇಕೆಂಬ ವಿಷಯವನ್ನು ನಾನು ವನವಾಸಮಾಡಿ ಕಷ್ಟ ಗಳನ್ನು ಸಹಿಸಿ, ಜನರಿಗೆ ಬೋಧಿಸಿರುವೆನು. ನಾನು ಈ ಜನ್ಮದಲ್ಲಿ ಅನೇಕ ಉಪ ದೇಶಗಳನ್ನು ಬಾಯಿಂದ ಹೇಳದ ನಡತೆಯಿಂದ ಮಾತ್ರ ತೋರಿಸಿರುವೆನು, ಅದ ನೆಲ್ಲು ಗುಣಶಾಲಿಯಾದ ಇರುಷನು ತನ್ನ ಬುದ್ಧಿಶಕ್ತಿಯನ್ನನುಸರಿಸಿ ತಿಳಿದು ಕೊ ಇವನು ಈ ರಮವತುರದ ನನ್ನ ಕೃತ್ಯಗಳೆಲ್ಲು ಅನುಕರಣೀಯವಾಗಿರು ಇವೆ, ಅಂದರೆ ನಡವಳಿಕೆಯಿಂದಲೇ ಫಲವನ್ನು ಕೊಡುವವು. ನನ್ನ ಚರಿತ್ರೆಯನ್ನು ಕೇಳುವದರಿಂದ ನನ್ನ ಭಕ್ತರಿಗೆ ನನ್ನಲ್ಲಿ ದೃಢಭಕ್ತಿಯುಂಟಾಗುವದು ಎಂದು ಹೇಳಿ ಗುರುಗಳ ಪಾದಗಳಿಗೆ ನಮಸ್ಕರಿಸಿದನು, ಶ್ರೀರಾಮನು ಬಸಿಗೆ ವರಕೊಡುವದು ಒಂದಾನೊಂದು ಕಾಲದಲ್ಲಿ (ಸಪ್ತದ್ವೀಪ) ಏಳು ದ್ವೀಪಗಳಲ್ಲಿರುವ ಸ್ತ್ರೀಯ ರೆಲ್ಲಾ, ಸೀತಾದೇವಿಯನ್ನು ನೋಡಬೇಕೆಂಬ ಇಚ್ಛೆಯಿಂದ ಚಿತ್ರಕ್ಕನದನಿಮಿ ಇಂಗಿ ಅಯೋಧ್ಯೆಗೆ ಬಂದರು. ಸೀತಾದೇವಿಯು ಅವರನ್ನು ಎದುರುಗೊಂಡು ಅಂತಃಪುರಕ್ಕೆ ಕರೆತಂದು ಯೋಗ್ಯವಾದ ಆಸನಗಳಲ್ಲಿ ಕುಳ್ಳಿರಿಸಿದಳು. ಮತ್ತು ವಸ್ತ್ರಾಲಂಕಾರಗಳಿಂದ ಅವರೆಲ್ಲರಿಗೂ ಸೀತೆಯು ಸುರದಡಿದಳು. ಆಕರುಣೆ ಯರೂ ತಮ್ಮದೇಶಗಳಿಂದ ತಂದ ನೂತನವಾದ ಪದಾರ್ಥಗಳನ್ನು ಸೀತೆಗೆ ಒಪ್ಪಿಸಿ ಹರ್ಷಗೊಂಡರು. ಸೀತೆಯು ಅವರೆಲ್ಲರಿಗೂ ಶ್ರೀರಾಮನ ಅದ್ಭುತವಾದ ಅನೇಕ ಚಿತ್ರಗಳನ್ನು ಹೇಳಿದಳು, ಆ ಸ್ತ್ರೀಯರು ಅದೆಲ್ಲವನ್ನೂ ಕೇಳಿ ಬಹಳ ಸಂತೋ ಸದಂಡು ಈ ಜಾನಕಿ, ನಿನ್ನ ವಿವಾಹದ ಸಮಾರಂಭವನ್ನು ವರ್ಣಿಸು, ಈ ಕೋಣ ಎಂದು ಕೇಳಿದರು. ಆಗ ಸೀತೆಯು ನಾಚಿಕೆಯಿಂದ ತಲೆತಗ್ಗಿಸಿದಳು ಬಳಿಕ ಸೀತಯ ಹತ್ರ ಸಂಜ್ಞೆಯನ್ನು ತಿಳಿದು, ಸಖಿಯಾದ ತುಳಸಿಯು ಸೀತಾಳ ಅಣದ ವೃತ್ತಾಂತವನ್ನು ವಿಸ್ತಾರವಾಗಿ ತಿಳುಹಿದಳು. ಅದನ್ನೆಲ್ಲ ಕೇಳಿ ಕೂತುಪ್ಪದ ಆಕರುಳಯರು ಸೀತಾದೇವಿಯು ಅಪ್ಪಣೆಯನ್ನು ಪಡೆದು ಸರ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.