ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, ಆತನಿಗೆ ೯೯೯೯ ವರ್ಷಗಳು, ೧೧ ತಿಂಗಳುಗಳು, ೨೧ ದಿವಸಗಳು ಆಯುಸ್ಸು ಕಳಿ ದಂತ ತಿಳಿಯಿತು. ಆಗ ಶ್ರೀರಾಮನು ಗುರುಗಳನ್ನು ಕುರಿತು 'ಮಿ, ಕೃತ ಯುಗದಲ್ಲಿ ಮನುಷ್ಯನಿಗೆ ಒಂದು ಲಕ್ಷ ವರ್ಷಗಳು ಆಯುಸ್ಸು ಇರತಕ್ಕದ್ದು, ತ್ರೇತಾಯುಗದಲ್ಲಿ ಹತ್ತು ಸಾವಿರ ವರ್ಷಗಳು, ಹೈಪರದಲ್ಲಿ ಒಂದು ಸಾವಿರ ವರ್ಷಗಳು, ಕಲಿಯುಗದಲ್ಲಿ ನೂರುವರ್ಷಗಳು ಎಂದು ಶಾಸ್ತ್ರ ಪ್ರಸಿದ್ದಿಯಿರುವದು. ಹೀಗಿರಲು, ನನ್ನನ್ನೂ, ಶಸ್ತ್ರವನ್ನೂ ತಿರಸ್ಕರಿಸಿ, ನನ್ನ ಮಂತ್ರಿಯಾದ ಈ ಸುಮಂತ್ರನನ್ನು ಯಮನು ಒಂಭತ್ತು ದಿವಸಗಳಿಗೆ ಮುಂಚೆ ಹ್ಯಾಗೆ ತಗೆದುಕೊಂಡು ಹೋದನುಯಮನಿಗೆ ಬಹಳ ಸೊಕ್ಕುಬಂದಿರಬಹುದು. ಈಗಲೇ ಅವನನ್ನು anಸನ ಮರಿ, ಸುಮಂತ್ರನನ್ನು ಹಿಂದಕ್ಕೆ ಕರೆತರುವೆನು ಎಂದು ಪತ್ನಕವಿಯಾನ ದಲ್ಲಿ ಕುಳಿತು ಯಮಲೋಕಕ್ಕೆ ಹೋದನು, ಹಾದಿಯಲ್ಲಿ ಸುಮಂತ್ರನನ್ನು ಪಾಶ ಗಳಿಂದ ಕಟ್ಟಿ ಎಳೆದುಕೊಂಡು ಹೋಗುವ ಯಮದೂತರನ್ನು ನೋಡಿ, ಶ್ರೀ ಮನು ಆ ದೂತರನ್ನು ಹೊರದು, ಸುಮಂತ್ರನನ್ನು ಬಂಧನದಿಂದ ತಪ್ಪಿಸಿದನು. ಮತ್ತು 'ಎಲೈ ದೂತರೆ, ಅವನಿಗೆ ಹತ್ತು ಸಾವಿರ ವರ್ಷಗಳು ಮುಗಿಯುವದಕ್ಕೆ ಮುಂಚೆ ಅವನನ್ನು ನೀವು ಹ್ಯಾಗೆ ಮುಟ್ಟಿದಿರಿ?' ಎಂದು ಪ್ರಶ್ನೆ ಮಾಡಿದನು. ಅಗ ಯಮದೂತರು •ooಆರೇ, ಈತನು ಮುಖ, ಹಸ್ತಗಳು ಇವು ಹೊರಗೆ ಬಂದ ಮೇಲೆ ತಾಯಿಯ ಉದರದಲ್ಲಿ ಒಂಭತ್ತು ದಿವಸಗಳು ವಾಸವಾಗಿದ್ದನು ಯಾಗ ಮುಖವು ಹೊರಗೆ ಬಂತೋ ಅಲ್ಲಿಂದ ಈ ದಿವಸಕ್ಕೆ ಈತನ ಆಯುಷ್ಯವು ಮುಗಿ ಯಿತು' ಎಂದರು. ಆಗ ಶ್ರೀರಾಮನು, “ಎಲೈ ದೂತರೆ, ದೇಹವೆಲ್ಲಾ ಹೊರಗೆ ಬಂದ ಕಾಲದಿಂದ ಆಯುಷ್ಯವನ್ನು ಎಣಿಸಿರಿ, ಜೋಯಿಸರು ಪತ್ರಿಕೆಯಲ್ಲಿ ಅದೇ ರೀತಿಯಿಂದ ಬರದಿರುವರುಆದ್ದರಿಂದ ನೀವು ಈ ದಿವಸ ಅವನನ್ನು ಬಿಟ್ಟು ಹಿಂದಕ್ಕೆ ಹೋಗಿರಿ, ಒಂಭತ್ತು ದಿವಸಗಳು ಮುಗಿದ ಕೂಡಲೆ ಬಂದು ನಿಮ್ಮ ಕೆಲಸವನ್ನು ಮಾಡಿರಿ, ಆಗ ನಾನು ಅಡ್ಡಿಮಾಡುವದಿಲ್ಲ, ” ಎಂದು ಹೇಳಿ ಶ್ರೀ ಕಾಮನು ಸುಮಂತ್ರನೂಡನೆ ಅಯೋಧ್ಯೆಗೆ ಬಂದನು. ಶ್ರೀರಾಮನು ಮಂತ್ರಿ ಯ ಮನೆಗೆ ಹೋದಕೂಡಲೆ ಸುಮಂತ್ರನು ಸಚೇತನನಾದನು, ಸುಮಂತ್ರನು ಎದ್ದು ಶ್ರೀರಾಮನಿಗೆ ನಮಸ್ಕರಿಸಿ, ಅನೇಕ ದನ-ಧರ್ಮಗಳನ್ನು ಮಾಡಿದನು. ಅyಲ ಯಮದೂತರು ಯದುನ ಬಳಿಗೆ ಹೋಗಿ, ಸ್ಕವಿ, ನಾವು ನೀರಿನ ಲ್ಲಿ ಬಿದ್ದು ಪ್ರಾಣಬಿಡುವೆವು ನಮ್ಮನ್ನು ಭೂಲೋಕದ ರಾಜನು ಶಸನ ಮಾ ಕುವದು ಯೋಗ್ಯವಾದದ್ದಲ್ಲ' ಎಂದು ಹೇಳಿದರು. ಈ ಮಾತುಗಳನ್ನು ಕೇಳಿ,