ಸರಕಾಂಡ ಯು ರಾಜನರ್ಯನೇ, ನಾನು ಸ್ವತಂತ್ರಳಲ್ಲ ವಿಷ್ಣುವಿನ ಅಪ್ಪಣೆಯಾದರೆ, ನಾನು ನಿನ್ನ ಮಗಳಾಗುವೆನು. ಆದ್ದರಿಂದ ವಿಷ್ಣುವನ್ನು ಕುರಿತು ತಪಸ್ಸು ಮಾ ಡ, ಎಂದು ಹೇಳಿ ಅಂರ್ಹಿತಳಾದಳು. ಮುಂದೆ ಪದ್ಮಾಕನೂ ದೃಢಭಕ್ತಿಯಿಂದ ನಾರಾಯಣನನ್ನು ಕುರಿತು ತಸ ಸು ವಣವಿದನು ಕಲವುಕಾಲದಮೇಲೆ ನಾರಾಯಣನೂ ಪ್ರಸನ್ನನಾದನು. ಆಗ ಪದಕ, ಮಹಾವಿಷ್ಣುವೇ, ನನಗೆ ಲಕ್ಷ್ಮಿಯು ಮಗಳಾಗಬೇಕೆಂದು ಬಹಳ ಅಶ ಇದೆ. ಆದುಮಾತ್ರ ನಿನ್ನ ದಯದಿಂದ ಪೂರ್ಣವಾಗಬೇಕು, ಭಕ್ತಾಭಿಮಾನಿಯಾ ದ ನೀನು ನನ್ನನ್ನು ಮುಸೀನಮಾಡಬಾರದು ಎಂದು ಬೇಡಿಕೊಂಡನು. ನಾ ರಾಯಣನಾದರೂ ಆತನ ತಪಸ್ಸಿಗೆ ಮೆಚ್ಚಿ, ಮಾದಳದಹಣ್ಣನ್ನು ಕೊಟ್ಟು ಅದೃ ಶ್ಯನಾದನು. ಆಥಲವು ಕೈಗೆ ಬಂದೊಡನೆ ಸಾಕನಿಗೆ ಬಹು ಸಂತೋವಾ ಯಿತು, ಮತ್ತು ಆ ಹಣ್ಣಿನಲ್ಲಿರದೆ, ನೋಡಬೇಕೆಂಬ ಕುತೂಹಲದಿಂ ದ ಫಲವನ್ನು ಒಡೆದನು, ಅದರಲ್ಲಿ ದಿವ್ಯಾವಣ್ಯವತಿಯಾದ ಕನ್ಯಾರತ್ನವು ಕಾಗೆ ಸಿತು. ಬಳಿಕ ರಾಜನು ಪರಮಸಂತೋಷಗೊಂಡು, ಲಕ್ಷ್ಮಿಯೇ ನನಗೆ ಮಗಳಾದ ಳೆಂದು ಭಾವಿಸಿ ಬಹುವಿಶ್ವಾಸದಿಂದ ಕಾಪಾಡುತ್ತಿದ್ದನು. ಆಕಸ್ಯೆಯಾದರೂ ಶುಕ್ಲಪಕ್ಷದ ಚಂದ್ರನಂತೆ ಅಭಿವೃದ್ಧಿ ಹೊಂದುತ್ತಿದ್ದಳು. ಮುಂದೆ ಮಗಳು ಪ್ರಬು Qಳಾದದ್ದನ್ನು ನೋಡಿ ಪದ್ಮಾಕನು ಸ್ವಯಂವರ ನಿಧಿಯಿಂದ ಮಗಳಿಗೆ ವಿವಾಹ ಮಾಡಬೇಕೆಂದು ನಿಶ್ಚಯಿಸಿದನು, ಮತ್ತು ಸ್ವಯಂವರ ಕಾಲದಲ್ಲಿ ಮಹಾಕ್ರತುವ ನ್ನು ನಡೆಸಲಪೇಕ್ಷಿಸಿದನು. ಈ ಎರಡು ಕಾರ್ಯಗಳಿಗೊಸ್ಕರ ಭೂಮಂಡಲದ ಸಮಸ್ತ ರಾಜರನ್ನೂ ಕರೆಸಿದನು. ಆತನ ವಚನದಂತ ಸಮಸ್ತ ರಾಜರೂ, ಬ್ರಾ ಹಣದೂ, ದೇವತೆಗಳೂ ಅಲ್ಲಿಗೆ ದಯಮಾಡಿಸಿದರು. ಆ ಸ್ವಯಂವರ ಮಂಟಪ ದಲ್ಲಿ ಸಮಗೂ ರಾಜರೂ ನರೆದಿರಲು, ಪದ್ಮಾಕನು ಸಭೆಯಕಡೆಗೆ ನೋಡಿ-ಯುವ ಮಹಾತ್ಮನು ತನ್ನ ದೇವರನ್ನು ಆಕಾಶದ ನೀಲವರ್ಣದಿಂದ ಲಿಪ್ತವಾದದ್ದನಾಗಿ ಪ್ರಕಟಮಾಡುವನೋ, ಆತನಿಗೆ ಈ ನನ್ನ ಕುಮಾರಿಯನ್ನು ಪಾಣಿಗ್ರಹಣ ಮಾಡಿ ಕೊಡುವನು.” ಎಂದು ಪ್ರತಿಜ್ಞೆ ಮಾಡಿದನು. ಈ ಅಸಾಧ್ಯವಾದ ಪಣವು ಯಾರಿಂದಲೂ ಸಾಧಿಸದಾಯಿತು. ಮುಂದೆ ಸಮಸ್ತ ರಾಜರೂ ಆ ಕನ್ಯಯ ಸೌಂದರ್ಯಕ್ಕೆ ಬೆರಗಾಗಿ ಆಕೆಯನ್ನು ಅಪಹರಿಸಿ ಒಯ್ಯಬೇಕೆಂದು ನಿಶ್ಚಯ ಮಾಡಿದರು. ಇದನ್ನು ಕೇಳಿ ಪದ್ಮಾಕ್ಷಿಗೆ ಕೋಪ ಬಂತು. ಆ ಮಹಾವೀರನು ಸಮಸ್ಥ ರಾಜರೊಡನೆ ಭಯಂಕರವಾದ ಯುದ್ಧ
ಪುಟ:ಶ್ರೀ ಮದಾನಂದ ರಾಮಾಯಣ.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.