ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾರಕಾಂಡ, ನ್ನು ಹತ್ತುತಳೆಗಳ ಹುಳದಂತ ತಿಳಿದು ಕೆರೆಯಲ್ಲಿಟ್ಟಿದ್ದ ಕಾರ್ತಿವೀರ್ಯಾರ್ಜು ನನನ್ನು ಯಾವ ಪರಶುರಾಮನು ಸಂಹಾರಮಾಡಿದನೂ, ಅಂಥ ಪರಶುರಾಮನು ಶ್ರೀ ರಾಮನಿಂದ ಅಪಜಯ ಹೊಂದಿದನು, ಇಂಥ ಶ್ರೀ ರಾಮಚಂದ್ರನ ಭಜಿ ಬಲವು ಈ ಪ್ರಸಂಗದಿಂದ ಊಹಿಸಿದರೆ ತಿಳಿಯಬಹುದಾಗಿರುವದು, ಈ ಮಹಾ ವಿಪತ್ತಿನಿಂದ ಮುಕ್ತನಾದ ದಶರಥನು ಮುಂದೆ ಅಯೋಧ್ಯಯ ಕಡೆಗೆ ತೀವ್ರವಾಗಿ ಪ್ರಯಾಣ ಮಡಿದನು , ದಶರಥಮಹಾರಾಜನು ಅಯೋಧ್ಯಯ ಸಮೀಪಕ್ಕೆ ಹೋದೊಡನೆ, ಮುಖ್ಯ ಕಾದ ಕೆಲವರು ಮೊದಲು ಪುರಪ್ರವೇಶ ಮಾಡಿ, ಸುಮಂತ್ರನ ಸಹಾಯದಿಂದ ನಗರ ವನ್ನು ಶೃಂಗಾರಮಾಡಿಸಿದರು. ವಧೂವರರನ್ನು ನೋಡಬೇಕೆಂದು ಲಕ್ಷಾವಧಿ ಜನರು ಬೀದಿಗಳಲ್ಲಿ ನಿಂತಿದ್ದರು. ಆ ನಂತರ ಸುಮಂತನು ಎಲ್ಲ ಸೇನೆಯೊಡನೆ, ದಶರಥ-ಮಹಾರಾಜನೇ ಮೊದಲಾದ ಎಲ್ಲರನ್ನೂ ಎದಿರುಗೊಂಡು, ಯಥಯೋಗ್ಯಮರ್ಯಾದೆಗಳಿಂದ ವಧೂವರರನ್ನು ಪಟ್ಟಣಪ್ರವೇಶ ಮಾಡಿಸಿದನು. ಆ ಕಾಲದಲ್ಲಿ ಅನೇಕ ವಾದ್ಯಗಳು ಮೊಳಗಿದವು. ಗಾಯಕರು ಹೃದಸ್ವರಗಳಿಂದ ಗಾನಮಾಡಿದರು. ಆ ಪಟ್ಟಣದ ತರುಣೀಜನರು ವಧೂವರರಮೇಲೆ ಪುಷ್ಟವರ್ಷಣ ಮಾಡಿದರು. ಕೆಲವು ಕನ್ನೆಯರು ಸೀತಾ-ರಾಮರೇ ಮೊದಲಾದ ನೂತನ ದಂಪತಿಗಳಿಗೆ ಆರತಿಗಳನ್ನ ದರು. ಈ ರೀತಿ ನಾನಾವಿಜೃಂಭಣೆಗಳಿಂದ ಶ್ರೀ ರಾಮನು ಸರ್ವಜ್ಞ ಪುರಜನರಿಗೂ ದರ್ಶನ ಕೊಟ್ಟು, ಬಳಿಕ ದಶರಥನೇ ಮದ ಲಾದ ಎಲ್ಲ ಬಂಧುಗಳೊಡನೆ ಅಂತಃಪುರವನ್ನು ಪ್ರವೇಶಿಸಿದನು. ಆಗ ಸುಮಂತ ನು ಸಭಾಸದರಿಗೆಲ್ಲ ಯಥಾಯೋಗ್ಯಮರ್ಯಾದೆಗಳನ್ನು ಮಾಡಿದನು , ಬಳಿಕ ಸಮಸ್ತರೂ ಪರಮಾನಂದದಿಂದ ತಮ್ಮ ತಮ್ಮ ಗ್ರಹಗಳಿಗೆ ಹೊರಟರು. ಪಾರ್ವ ತಿಯೇ, ಕೇಳು, ನಾರಾಯಣನ ಅವತಾರಗಳು ಬಹಳವಾಗಿರುವವು. ಅವುಗ ಇಲ್ಲಿ ರಾಮಕೃಷ್ಯಾವತಾರಗಳೆರಡೇ ಪೂರ್ಣಾವತಾರಗಳು, ಅವೆರಡರಲ್ಲಾದ ರೂ ರಾಶಾವತಾರವೇ ಶ್ರೇಷ್ಠವಾದದ್ದು, ಇಂಥ ಶ್ರೇಷ್ಠನಾದ ಶ್ರೀರಾಮ ನಿಗೂ, ಸೀತೆಗೂ ಈ ರೀತಿ ಸ್ವಯಂವರ ಮಹೋತ್ಸವವು ನಡೆಯಿತು.