ಸಾರಕಾಂಡೆ, ೪೬ ಹೇಳುತ್ತಿದ್ದೆ! ಅದನ್ನು ಮರೆತಯನಿ ಹ್ಯಾಗೆ? ಎಂದು ನೆನಪು ಮಾಡಿಕೊಟ್ಟಳು. ಮಂಥರೆಯ ಈ ಮಾತು ಕೈಕೇಯಿಗೂ ಸರಿಯಾದ ಉಪಾಯವೆಂಮ ಶೋ ಚಿತು. ಬಳಿಕ ಕೈಕೇಯಿಯು ದಶರಥನ ಸನ್ನಿಧಿಗೆ ಹೋಗಿ 'ಮಹಾರಾಜನೇ, ಪೂರ್ವದಲ್ಲಿ ನನಗೆ ಎರಡು ವರಗಳನ್ನು ಕೊಡುತ್ತೇನೆಂದು ಹೇಳಿದ್ದೆಯಷ್ಟೇ, ಅವು ಗಳಲ್ಲಿ ಒಂದರಿಂದ ಭರತನಿಗೆ ರಾಜಭಿಷೇಕ ಮಾಡು, ಮತ್ತೊಂದರ ಸಲುವಾಗಿ ಶ್ರೀ ರಾಮನನ್ನು ಹದಿನಾಲ್ಕು ವರ್ಷಗಳ ವರೆಗೆ ಅರಣ್ಯದಲ್ಲಿ ವಾಸಮಾಡುವಂತೆ ಆಜ್ಞಾಪಿಸು,” ಎಂದಳು. ಈ ಮಾತುಗಳನ್ನು ಕೇಳಿ ದಶರಥನು ಮೂತ ನಾದನು. ಆ ಕಾಲಕ್ಕೆ ಸರಿಯಾಗಿಯೇ ಶ್ರೀ ರಾಮನು ತಂದೆಯ ದರ್ಶನಕ್ಕಾಗಿ ಬಂದನು. ಆತನು ತಂದೆಯ ಈ ಸ್ಥಿತಿಯನ್ನು ನೋಡಿ, ಕಾರಣವೇನೆಂದು ತಾಯಿ ಯಾದ ಕೈಕೇಯಿಯನ್ನು ಕೇಳಿದನು. ಆಗ ಕೈಕೇಯಿಯು ನಡೆದ ಸಂಗತಿಯನ್ನು ತಿಳುಹಿದಳು. ಈ ವಾರ್ತೆಯನ್ನು ಕೇಳಿ ಶ್ರೀ ರಾಮನಿಗೆ ಮನಸ್ಸಿನಲ್ಲಿ ಪರಮ ಹರ್ಷವಾಯಿತು. ಬಳಿಕ ಸ್ವಲ್ಪ ಚೇತರಿಸಿಕೊಂಡು ಕುಳಿತುಕೊಂಡ ತಂದೆಗೆ ನಮಸ್ಕರಿಸಿ, ಆತನು-ತಂದೆಯೇ, ಅಪ್ಪಣೆಯಾದರೆ ಹದಿನಾಲ್ಕು ವರ್ಷಗಳು ವನವಾಸ ಮಾಡಲು ಸಿದ್ಧನಾಗಿರುವೆನು,” ಎಂದು ಶೀಘ್ರವಾಗಿ ತಂದೆಯ ಅಪ್ಪಣೆಯನ್ನೂ ಪಡೆದು, ಸೀತಾದೇವಿಯೊಡನೆ ದಂಡಕಾರಣ್ಯಕ್ಕೆ ಹೊರಟನು ಆಗ ಲಕ್ಷಣನೂ ಜೊತೆಗೆ ಹೊರಡಲು ನಿಶ್ಚಯವಾಯಿತು. ಆ ಕಾಲದಲ್ಲಿ ಕೈಕ ಯಿಯು ರಾಮ-ಲಕ್ಷಣ-ಸೀತೆಯರಿಗೆ ನಾರಿನ ವಸ್ತ್ರಗಳನ್ನು ಕೊಟ್ಟಳು. ಅವರು ಅವುಗಳನ್ನು ಧರಿಸಿ, ರೇಶಿಮೆಯ ವಸ್ತ್ರಗಳನ್ನು ಅಲ್ಲಿಯೇ ಬಿಟ್ಟರು. ಶ್ರೀ ರಾಮನು ಪ್ರಯಾಣಕಾಲದಲ್ಲಿ ಅನೇಕ ದಾನ-ಧರ್ಮಗಳನ್ನು ಮಾಡಿದನು. ಶ್ರೀ ರಾಮನು ವನವಾಸಕ್ಕೆ ಹೊರಡುವನೆಂದು ಕೇಳಿ, ಅಯೋಧ್ಯೆಯೇ ದುಃಖಮರ ಲಾರಂಭಿಸಿತು. ಶ್ರೀ ರಾಮನು ತಾಯಿ-ತಂದಗಳಿಗೂ, ಬಂಧುವರ್ಗದವರಿಗೂ ನಮಸ್ಕರಿಸಿ ಹೊರಡಲು ಸಿದ್ದನಾದನು. ಸೀತಾಲಕ್ಷ್ಮಣರೂ ಆತನ ಹಿಂದಯೇ ಹೊರಟು ನಿಂತರು, ಕೂಡಲೆ `ಸುಮಂತ್ರನು ರಥವನ್ನು ಸಿದ್ಧ ಮಾಡಿದ್ದನು. ಶ್ರೀ ರಾಮನು ತಂದೆತಾಯಿಗಳು, ಬಂಧುಗಳು, ಪುರಜನರು, ಇವರುಗಳನ್ನು ಕುಡಿ ತು-11ಇನ್ನು ಹದಿನಾಲ್ಕು ವರ್ಷಗಳು ತುಂಬಿದೊಡನೆ ತಮ್ಮ ಬಳಿಗೆ ಬರುವೆನು ಈಗ ತಾವೆಲ್ಲರೂ ಅಪ್ಪಣೆ ಕೊಡಿರಿ,” ಎಂದು ಪ್ರಾರ್ಥನೆ ಮಾಡಿ, ಸಮಾಧಾನಪಡಿ ಸುತ್ತು ರಥವನ್ನು ಹುದನು, ಸೀತಾಲಕ್ಷ್ಮಣರ ಧರೋಹಣ ಮಾಡಿ
ಪುಟ:ಶ್ರೀ ಮದಾನಂದ ರಾಮಾಯಣ.djvu/೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.