ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೧೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೧೧.] ದಶಮಸ್ಕಂಧವು. ೧೮೦೬ ನೋಡು ! ಬೀದಿಯ ಮಣ್ಣೆಲ್ಲವೂ ನಿನ್ನ ಮೈಮೇಲಿರುವುದಲ್ಲಾ ! ಬಾ! ಮೈ ತೊಳೆಯುವೆನು. ಇದು ನಿನಗೆ ಹುಟ್ಟಿದ ದಿನವು. ನೀನು ಸ್ನಾನಮಾಡಿ ಬ್ರಾಹ್ಮಣರಿಗೆ ಗೋದಾನವನ್ನು ಮಾಡಬೇಕು.ಬೇಗ ಬಾ! ಬಾರಪ್ಪ! ಅದೋ! ನಿನ್ನ ಜತೆಗಾರರನ್ನು ನೋಡು ! ಅವರವರ ಮಾತೆಯರು ಅವರಿಗೆ ಸ್ನಾನಮಾ ಡಿಸಿ, ಹೂಮುಡಿಸಿ, ಎಷ್ಟು ಚೆನ್ನಾಗಿ ಅಲಂಕರಿಸಿ ಕಳುಹಿಸಿರುವರು ನೋಡಿ ದೆಯಾ ? ನೀನು ಹೀಗಿದ್ದರೆ ನನಗೆ ಅವಮಾನವಲ್ಲವೆ ? ನಿನಗೂ ಸ್ನಾನಮಾ ಡಿಸಿ, ಅಲಂಕರಿಸಿ, ಹೂಮುಡಿಸುವೆನು ಬಾ ! ಊಟಮಾಡಿ ಬಂದಮೇಲೆ ಬೇಕಾದಹಾಗೆ ಆಟವಾಡುತ್ತಿರು !” ಎಂದಳು. ಹೀಗೆ ಯಶೋದೆಯು ಬ್ರ ಹ್ಮಾದಿದೇವತೆಗಳಿಗೂ ನಿಯಾಮಕನಾದ ಆ ಕೃಷ್ಣನನ್ನು ತನ್ನ ಮುದ್ದು ಮಗುವೆಂದು ತಿಳಿದು, ಪ್ರಿಯವಾಕ್ಯಗಳಿಂದ ಬುದ್ಧಿ ಕಲಿಸುತ್ತ, ಕೊನೆಗೆ ರಾ ಮಕೃಷ್ಣರಿಬ್ಬರನ್ನೂ ಕೈಹಿಡಿದು ಮನೆಗೆ ಕರೆತಂದಳು. ಅವರಿಗೆ ಸ್ನಾನ ಮಾಡಿಸಿ ಅವರಿಗಾಗಿ ಮಾಡಬೇಕಾದ ಮಂಗಳಕಾರಗಳೆಲ್ಲವನ್ನೂ ಮಾಡಿ, ಭೋಜನಮಾಡಿಸಿ ಕಳುಹಿಸಿದಳು. ಓ ರಾಜೇಂದ್ರಾ! ಹೀಗಿರುವಾಗ ಒಮ್ಮೆ ಗೋಪವೃದ್ದರು, ಆಗಾಗ ಗೋಕುಲದಲ್ಲಿ ನಡೆಯುತ್ತಿದ್ದ ಅನರಗಳನ್ನು ನೋಡಿ, ಅದನ್ನು ಪರಿಹರಿಸುವು ದಕ್ಕೆ ಉಪಾಯವೇನೆಂದು ಆಲೋಚಿಸುವುದಕ್ಕಾಗಿ ಸಭೆಸೇರಿದರು. ಅವರಲ್ಲಿ ಉಪನಂದನೆಂಬವನು, ಜ್ಞಾನವೃದ್ಧನಾಗಿಯೂ, ವಯೋವೃದ್ಧನಾಗಿಯೂ ಇದ್ದುದಲ್ಲದೆ, ಆಯಾದೇಶಕಾಲಗಳನ್ನರಿತು ಕಾರಾಕಾರಗಳನ್ನು ನಿರ್ಣಯಿ ಸಬಲ್ಲವನಾಗಿಯೂ, ರಾಮಕೃಷ್ಣರಿಗೆ ಬಹಳ ಹಿತೈಷಿಯಾಗಿಯೂ ಇದ್ದು ದರಿಂದ, ನಂದಾದಿಗಳನ್ನು ಕುರಿತು ಎಲೈ ಪ್ರಿಯಬಾಂಧವರೆ!ನಾವು ನಮ್ಮ ಗೋಕುಲಕ್ಕೆ ಹಿತವನ್ನು ಕೋರುವವರಾಗಿದ್ದರೆ, ಈಗಲೇ ಈ ಸ್ಥಳವನ್ನು ಬಿಟ್ಟು, ಬೇರೆಕಡೆಗೆ ಒಕ್ಕಲುಹೋಗುವುದು ಮೇಲು! ಇಲ್ಲಿ ಆಗಾಗ ಪ್ರಜಾ ನಾಶಕ್ಕೆ ಕಾರಣಗಳಾದ ಉತ್ಪಾತಗಳು ನಡೆಯುತ್ತಿರುವುದನ್ನು ನಾವು ನೋಡುತ್ತಲೇ ಇರುವೆವು. ಈ ನಮ್ಮ ಕೃಷ್ಣನು, ಮೊದಲೇ ಬಾಲಭೂತಿನಿ ಯಾದ ಘೋರರಾಕ್ಷಸಿಯ ಕೈಗೆ ಸಿಕ್ಕಿಬಿದ್ದಿದ್ದು, ಹೇಗೋ ದೈವಾಧೀನ ದಿಂದ ಬದುಕಿಬಂದನು. ಅದರಿಂದಾಚಿಗೆ ಇವನಮೇಲೆ ಬಿಳುತ್ತಿದ್ದ ಬಂಡಿ