ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಶ್ರೀಮದ್ಭಾಗವತವು [ಅಧ್ಯಾ, ೧. ಕಾರಗಳನ್ನು ನಡೆಸಿರುವನೋ ಅವೊಂದೊಂದನ್ನೂ ವಿವರವಾಗಿ ನನಗೆ ತಿಳಿಸಬೇಕು. ಆ ಭಗವಂತನ ಗುಣಾಮೃತವನ್ನು ಎಷ್ಟೆಷ್ಟು ಪಾನಮಾ ಡಿದರೂ, ಮೇಲೆಮೇಲೆ ಆಸೆಯನ್ನೇ ಹೆಚ್ಚಿಸುವುದೇ ಹೊರತು, ತೃಪ್ತಿಯುಂ ಟಾಗದು. ಸ್ವರ್ಗಲೋಕದಲ್ಲಿ ದೇವತೆಗಳಿಗೆ ಲಭಿಸುವ ಅಮೃತಕ್ಕಿಂತಲೂ ಈ ಭಗವದ್ದು ಣಾಮೃತವೆಂಬುದು ಎಷ್ಟೋ ಅತಿಶಯವಾದುದು! ಇದರ ರುಚಿಯೇ ಬೇರೆ ! ಇದರ ಗುಣಗಳೇ ಬೇರೆ ! ಹೇಗೆಂದರೆ! ಆ ಅಮೃತವು ವಿಷಯಾಸಕರಾದ ಭೋಗಿಗಳಿಗೆ ಪ್ರಿಯವಾದುದು. ಇದು ವಿಷಯವಿ ಮುಖರಾದ ಯೋಗಿಗಳಿಗೆ ಪ್ರಿಯವಾಗಿರುವುದು. ಅದು ಸಂಸಾರವೆಂಬ ವ್ಯಾಧಿಯನ್ನು ಹೆಚ್ಚಿಸುವುದು. ಈ ಅಮೃತವು ಅದನ್ನು ನೀಗಿಸುವುದು. ಅದು ನಾಲಗೆಗೆ ಮಾತ್ರ ರುಚಿಕರವಾಗಿರುವುದು. ಇದಾದರೋ ನಾಲಗೆಗೆ ಮಾತ್ರವಲ್ಲದೆ, ಕಿವಿಗಳಿಗೂ, ಮನಸ್ಸಿಗೂ ಉಲ್ಲಾಸಕರವಾಗಿರುವುದು, ಇಂ ತಹ ವಿಲಕ್ಷಣಗುಣವುಳ್ಳ ಭಗವಚ್ಚರಿತಾಮೃತವನ್ನು ಪಾನಮಾಡುವ ವಿಷಯದಲ್ಲಿ, ವಿವೇಕಬುದ್ದಿಯುಳ್ಳ ಯಾವನಿಗೆ ತಾನೇ ಬೇಸರವುಂಟಾಗು ವುದು? ಪಶುಫಾತಿಯಾದ ಊರನು, ಪಶುಪ್ರಾಯನಾದ ಮೂರ್ಖ ನು, ಉಪ ಗು, ಇಂತವರುಹೊರತು ಬೇರೆ ಯಾರೂ ಆ ಭಗವದ್ದು ಣಾನುವಾದದಲ್ಲಿ ಬೇಸರಹೊಂದಲಾರರು. ಅದ ರಲ್ಲಿಯೂ ಮುಖ್ಯವಾಗಿ ಆ ಶ್ರೀಕೃಷ್ಣನಿಂದ ಮಹೋಪಕಾರವನ್ನು ಪ ಡೆದ ನನಗೆ, ಆತನ ಚರಿತ್ರಗಳನ್ನು ಎಷ್ಟು ಕೇಳಿದರೆತಾನೇ ತೃಪ್ತಿಯುಂ ಟಾಗುವುದು? ಪೂರದಲ್ಲಿ ನಮ್ಮ ತಾತಂದಿರಾದ ಪಾಂಡವರು, ಯಾವ ಶ್ರೀಕೃಷ್ಣನ ಪಾದಾಶ್ರಯವನ್ನೇ ನಾವೆಯಾಗಿ ಮಾಡಿಕೊಂಡು, ದೇವತೆ ಗಳಿಗೂ ದುರ್ಜಯರಾದ ಭೀಷ್ಮದ್ರೋಣಾದ್ಯತಿರಥರೆಂಬ ತಿಮಿಂಗಿಲಗ ಳಿಂದ ತುಂಬಿದುದಾಗಿಯೂ, ದಾವಲಸಾಧ್ಯವಾಗಿಯೂ ಇದ್ದ ಕೌರವ ಸೈನ್ಯವೆಂಬ ಮಹಾಸಾಗರವನ್ನು ಗೋತ್ಸವದಂತೆ (ಹಸುಗಳ ಹೆಜ್ಜೆಯಿಂ ದುಂಟಾದ ಹಳ್ಳದಂತೆ) ನಿರಾಯಾಸವಾಗಿ ದಾಟಿದರೋ, ಮತ್ತು ನಾನು ತಾಯಿಯ ಗರ್ಭದಲ್ಲಿರುವಾಗ, ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ನನ್ನ ದೇಹವು ದಗ್ಧವಾಗುವುದನ್ನು ತಿಳಿದು, ನನ್ನ ತಾಯಿಯು - ಕೃಷ್ಣಾ ! ರಕ್ಷಿ