ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೭.] ದಶಮಸ್ಕಂಧವು. റ923 +ಅವಳ ತೊಡೆಗೆ ಬಹಳಭಾರವಾಗಿ ತೋರಿತು.ಆದರಿಂದ ಅವಳು ಮನಸ್ಸಿನಲ್ಲಿ ಆಶ್ಚರಗೊಂಡು, ಭಗವಂತನನ್ನು ಧ್ಯಾನಿಸುತ್ತ, ಆ ಶಿಶುವನ್ನು ಕೆಳಗೆ ಮಲ ಗಿಸಿ, ತಾನು ಬೇರೆ ಕಾರಗಳನ್ನು ನೋಡುತಿದ್ದಳು. ಇದೇ ಸಮಯದಲ್ಲಿ ಕಂ ಸಸಿಂದ ಪ್ರೇರಿತನಾದ ತೃಣಾವರ್ತನೆಂಬ ರಾಕ್ಷಸನೊಬ್ಬನು, ಸುಳಿಗಾಳಿಯ ರೂಪದಿಂದ ಬಂದು, ಈ ಮಗುವನ್ನು ತನ್ನ ವೇಗದಿಂದ ತರಗೆಲೆಯಂತೆ ಆ ಕಾಶಕ್ಕೆ ಹಾರಿಸಿಕೊಂಡುಹೋದನು ರಾಜಾ ಆ ಸುಳಿಗಾಳಿಯ ಆರ್ಭಟವ ನ್ನು ಕೇಳಬೇಕೆ? ಭಯಂಕರವಾದ ಆ ಗಾಳಿಯು, ಗೋಕುಲದ ಎಲ್ಲಾ ಭಾಗವನ್ನೂ ವ್ಯಾಪಿಸಿತು! ಒಂದುಮುಹೂರ್ತಕಾಲದವರೆಗೆ ಎಲ್ಲೆಲ್ಲಿಯೂ ಧೂಳಿನಿಂದ ಕತ್ತಲೆಕಸಿದು, ಯಾವ ಪ್ರಾಣಿಗೂ ಕಣ್ಣು ಕಾಣದಂತಾಯಿ ತು ಯಶೋದೆಯು ಈ ಆರ್ಭಟಕ್ಕೆ ಭಯಪಟ್ಟು, ಮಗುವ ತ್ರಿಕೆ ಳ್ಳುವುದಕ್ಕಾಗಿ ಒಂದು ನೋಟ •ಗ, ಅಲ್ಲಿ ಮಗುವನ್ನು ಕಾಣಲಿಲ್ಲ ಆಗಿನ ಗಾಢ ೦ಧಕಾರದಲ್ಲಿ ಚೆನ್ಗಿ ಹುಡುಕಿ ನೋಡುವುದಕ್ಕೂ ಅವಕಾ ಶವಾಗಲಿಲ್ಲ ! ಆ ಸುಳಿಗಾಳಿಯಿಂದ ಮೇಲೆ ಮಣ್ಣ, ಆಕಾಶದಲ್ಲಿಯೂ, ಕುಪಿಕ್ಕುಗಳಲ್ಲಿಯ ದಟ್ಟವಾಗಿ ಕವಿದ್ದುದರಿಂದ, ೩ - ಮುಖವು ಮತ್ತೊಬ್ಬರಿಗೆ ಕಾಣುತ್ತಿಲ್ಲ. ಒಮ್ಮೆ೦ಕೆ ? ತಮ್ಮ ಸ್ಥಿತಿಯನ್ನು ತಾವು ತಿಳಿಯುವುದೇ ಕಷ್ಟವಾಯಿತು ಆಗ ಯಶೋದೆಯ ಮನಸ್ಸಿನ ಭಯವನ್ನೂ, ಕಳಕಳವನ್ನೂ ಕೇಳಬೇಕೆ ? ದೈನ್ಯದಿಂದ ಗಟ್ಟಿಯಾಗಿ ಹಿಸತೊಡಗಿ ದಳು ! ಮುಖsಂದ ಮೈಮರೆತು ಆಸ್ಥೆಯ ಪ್ರಜ್ಞೆ ತಪ್ಪಿ ಬಿದ್ದಳು ' ಕರು ವನ್ನು ಕಾಣದ ಹಸುವಿನಂತೆ ತುಳಸಿ ಕೆರಗುತಿದ್ಧಳು. ಇವಳ ರೋದನ ಧ್ವನಿಯನ್ನು ಕೇಳಿ, ಅಲ್ಲಲ್ಲಿ ಇತರ ಹಸಿಯರೂ ಬೆರಬಿದ್ದು ಓಡಿಬಂದರು. ಎಲ್ಲರೂ ದುಃಖದಿಂದ ಕಣ್ಣುಗಳಲ್ಲಿ ನೀರನ್ನು ಸುರಿಸುತ್ತ, tಹಾ ವತ್ತಾ! ಎಲ್ಲಿ ಹೋದೆ” ಎಂದು ಒಂದೇ ಕೂಗಾಗಿ ಅಳತೊಡಗಿದ

  • ತೃಣಾವರ್ತನೆಂಬ ರಾಕ್ಷಸನು ಬರುವನೆಂಬುದನ್ನು ತಿಳಿದೇ, ಕೃಷನು, ಅವನನ್ನು ಕೊಲ್ಲುವುದಕ್ಕಾಗಿಯೂ, ಅವನಿಂದ ತನ್ನ ತಾಯಿಗೆ ಅಪಾಯವಿಲ್ಲದಂತೆ ತಪ್ಪಿಸುವುದಕ್ಕಾಗಿಯೂ, ತನ್ನ ದೇಹಭಾರವನ್ನು ಹೆಚ್ಚಿಸಿಕೊಂಡು, ತನ್ನನ್ನು ತಾಯಿ

ಯು ಕಳಗೆ ಬಿಟ್ಟುಬಿಡುವಂತೆ ಮಾಡಿದನು.