ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಸ್ತು. ಅಲಂಕಾರಲಕಣ೦. ಅಲ೦ಕ್ರಿಯತೇ ಅನೇನ "- ಎಂದು ಅಲಂಕಾರಶಬ್ದದ ವ್ಯುತ್ಪತ್ತಿ, ಇಲ್ಲಿ “ ಅಲಂ ” ಎಂದರೆ ಭೂಷಣಾರ್ಥವು:- ಎಂದರೆ ಯಾವುದರಿಂದ ವಕ್ಕು ಭೂಪಿಸಲ್ಪಡುವುದೋ ಅದಕ್ಕೆ ಅಲಂಕಾರವೆಂದು ಹೆಸರು, ಅಲಂ ಕಾರವೆಂದರೆ ಕೇವಲ ಚಮ ಸ್ವಾರದ ಮಾತುಗಳಾಡುವುದೇ ಅಲ್ಲ ; ವಾಕ್ಕು ಸಹೃದಯ ಹೃದಯಾಹ್ಲಾದಕವಾಗುವುದಕ್ಕೆ ಎಷ್ಟು ಭೂಪ್ರಣವುಳ್ಳುದಾಗಿರ ಬೇಕೊ ಹಾಗೆ ಮಾಡುವುದು ಅಲಂಕಾರವೆನಿಸುವುದು, ಇದಕ್ಕೆ ಅನೇಕ ನಿಯಮಗಳುಂಟು; ಆ ನಿಯಮಗಳಲ್ಲವೂ ಸೇರಿ ಒಂದು ದೊಡ್ಡ ಶಾಸ್ತ್ರವೇ ಆಗಿರುವುದು ; ಅದಕ್ಕೆ “ಅಲಂಕಾರ ಶಾಸ್ತ್ರ ” ವೆಂದು ಹೆಸರು, ಅಲಂ ಕಾರಶಾಸ್ತ್ರದಲ್ಲಿ ಹತ್ತು ಪ್ರಕರಣಗಳಿರುವುವು - ೧, ನಾಯಕಲಕ್ಷಣ-ಕಾವ್ಯದಲ್ಲಿಯ ಪಾತ್ರಗಳ ವಿಚಾರವಾ ದುದು, ನಾಯಕರೂ, ನಾಯಿಕೆಯರೂ ಅವರಿಗೆ ಸಹಾಯರಾಗುವರೂ. ಇವರ ಲಕ್ಷಣಗಳು ಯಾವ ಯಾವ ಕಾವ್ಯಗಳಲ್ಲಿ ಎಂತೆಂತಹ ನಾಯಿಕಾ ನಾಯಕರಿರಬೇಕು.-ಇತ್ಯಾದಿ ವಿಚಾರವಾದುದು. 3, ಕಾವ್ಯ-ಕ್ಷಣ:- ಕಾವ್ಯಗಳಷ್ಟು ವಿಧವಾಗುವುವು, ಯಾವ ಯಾವುದರಲ್ಲಿ ಯಾವ ಯಾವ ವಿಧದ ಶಯ್ಯಾದಿಗಳಿರಬೇಕು, ಇತ್ಯಾದಿ ವಿಚಾರವು. ೩. ನಾಟಕ ಪ್ರಕರಣ:- ನಾಟಕಗಳಷ್ಟು ವಿಧವಾಗುವುವು, ಅವು ಗಳ ಲಕ್ಷಣಗಳೇನು, ಇತ್ಯಾದಿವಿಚಾರವು. ೪, ರಸಪ್ರಕರಣ:-ಇದು ಶೃಂಗಾರಾದಿ ನವರಸಗಳ ವಿಚಾರ ವಾದುದು. ೫ ದೋಷಪ್ರಕರಣ:- ಯಾವಯಾವುವು ಕಾವ್ಯದೋಷಗಳು (ಗುವುವ, ಇತ್ಯಾದಿ ವಿಚಾರವು.