ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಉಪೋದ್ಘಾತ ಚರಾಚರ ರೂಪವಾದ ಈ ಪ್ರಪಂಚದಲ್ಲಿ ಮಾನವಜನ್ಮವು ಅತಿದುರ್ಲಭವಾದುದು, ಇಂತಹ ನರಜನ್ಮವಂ ಹೊಂದಿದ ಬಳಿಕ ಅದನ್ನು ಸಾರ್ಥಕಗೊಳಿಸಲು ವಿವೇಕಸಂಪಾದನೆಯು ಅತ್ಯಂತ ಆವಕ್ಕ ಕವಾಗಿರುವುದು, ಇಂತಹ ವಿವೇಕಸಂಪಾದನೆಯಂ ಮಾಡದಿದೊಡೆ «ಪಾ/ಪೃಚಾ ಪ್ಯುತ್ತಮಂ ಜನ್ಮ ಲಜ್ಞಾ ಚೇಂದ್ರಿಯ ಸುವಂ। ನನೇತ್ಯಾತ್ಮ ಹಿತಂ ಯಸ್ತು ಸಭವೇದಾತ್ಮ ಘಾತುಕಃ || ಸರ್ವೋತ್ತಮವಾದ ನರಜನ್ಮವಂ ಹೊಂದಿ ಇಂದಿಯ ಸಾವರ್ಧಯು ಕನಾದವನು ತನ್ನ ಹಿತವನ್ನೇ ತಾನು ತಿಳಿಯದಿದ್ದೊಡೆ ಅಂತಹಮಾನುಷ ಪಶುವು ಆತ್ಮಘಾತುಕನನಿಸುವನು'ಎಂಬದಾಗಿ ಮಹಾಭಾರತದ ಕಾಂತಿ ಪರ್ವ ಮೊದಲಾದವುಗಳಿಂದ ತಿಳಿದುಬರುತ್ತದೆ ಇಂತಹ ವಿವೇಕಸಂಪದ ನೆಗೆ ವೇದ, ಪ್ರರಾಣ ಮೊದಲಾದುವುಗಳ,ಅರ್ಥ ವಿಚಾರವು ಅತ್ಯವಶ್ಯಕವಾ ದುದು, ಇದೇ ಅರ್ಥವನ್ನೇ ಮನಸ್ಸಿನಲ್ಲಿ ಭಾವಿಸಿ ಲೋಕಾನುಗ್ರಹ ತತ್ಪ ರರೆನಿಸಿದ ಪರಾಶರ ಮಹರ್ಷಿಗಳು ತಮ್ಮ ಶಿಷ್ಯರಾದ ಮೈತ್ರೀಯರೆಂಬ ಮುನಿವರ್ರಂ ನಿಮಿತ್ತ ಮಾಡಿಕೊಂಡು ಎಂಟು ಸಾವಿರ ಗ್ರಂಥಪರಿಮಿತ ವಾದ ಈ ವಿಷ್ಣು ಪರಾಣವಂ ರಚಿಸಿ, ಲೋಕಕ್ಕೆ ಪರಮೋಪಕಾರವಂ ಮಾಡಿರುವರು, ಪುರಾಣಗಳು ಪ್ರಪಂಚ, ಸೃಷ್ಟಿ, ಸ್ಥಿತಿಲಯಗಳನ್ನೂ ಪ್ರಾಣಿಗಳ ವಂಶಾವಳಿ ಮೊದಲಾದ ಅನೇಕವರ್ಣನೆಗಳನ್ನೂ ಒಳಗೊಂ ಡಿದ್ದ ರೂ ಮುಖ್ಯವಾಗಿ ರ್ಪಮಾತ್ಮ ತತ್ವವನ್ನೂ, ಆತನ ಮಹಿಮೆಯ ನ್ಯೂ ವಿಶದಪಡಿಸುತ್ತವೆ, ಇಂತಹ ಪ್ರಾಣಗಳು ಬ್ರಾಹ್ಮ, ಪದ್ಯ,