೧೭ ರಾಮದಾಸಸ್ವಾಮಿಗಳ ಚರಿತ್ರ. ಅವರ ಮುಂದೆ ಎಲ್ಲ ವೃತ್ತಾಂತವನ್ನು ಹೇಳಿ (ನೀವು ಕೊಟ್ಟ ಅನುಗ್ರಹವನ್ನು ತಿರಿಗಿ ಒಪ್ಪಿಸಿಕೊಳ್ಳಬೇಕು ಎಂದು ಬೇಡಿಕೊಂಡನು, ಆಗ ಸಮರ್ಥರು-“ ನಿನ್ನ ಮನಸ್ಸಿ ಗೆ ಬೇಡಾದರೆ ನಾನು ಕೊಟ್ಟ ಅನುಗ್ರಹಮಂತ್ರವನ್ನು ಬಾಯೊಳಗೆ ನೀರುಮುಕ್ಕುಳಿ ಸಿ ಉಗುಳಿ ಬಿಡು” ಎಂದು ಹೇಳಿದರು ಅದರ೦ತ ಆ ಬ್ರಾಹ್ಮಣನು ಮಾಡಲಾಗಿ ಅವನು ಉಗುಳಿದ ಸ್ಥಳದಲ್ಲಿ ಪ್ರಯೋದಶಾಗದ ಮಂತ ನು ಮುದ್ರಿತವಾಯಿತು! ಹಾಗೂ ಆ ಬ್ರಾಹ್ಮಣನ ಬಾಯಿ ಹೋಯಿತು! ಆಗ ಆ ಬ್ರಾಹ್ಮಣನು ಅಳು ತುಕಾರಾಮನ ಬಳಿಗೆ ಹೋಗಲಾಗಿ ಅವನು ಮೂಕನಾದದ್ದು ಕಂಡು ತುಕಾರಾವ ನು ತಾನೇ ಸ್ವತಃ ಸಮರ್ಥರ ಬಳಿಗೆ ಹೋಗಿ ಅವನಿಗೆ ತಿರಿಗಿ ಬಾಯಿ ಕೊಡಿಲಿಕ್ಕೆ ವಿನಂತಿ ಮಾಡಿದನು, ಅದಕ್ಕೆ ಸಮರ್ಥರು ಆ ಬ್ರಾಹ್ಮಣನಿಗೆ “ ನೀನು ಉಗುಳಿದ್ದ ನ್ನು ನೆಕ್ಕು, ಎಂತ ಹೇಳಿದರು, ಅದರಂತೆ ಅವನು ಮಾಡಲುಗಿ ತಿರಿಗಿ ಅವನ ಬಾಯಿ ಬ೦ತು!! ಈ ಅದ್ಭುತ ಸಂಗತಿಯು ಶಳ ೧೫೭೧ನೇ ಜೇಷ್ಠಮಾಸದ ಕೃ ಕ್ಲ ಪಕ್ಷದಲ್ಲಿ ವರ್ತಿಸಿತು. ಪಂಢರಪುರದಯಾತ್ರ:-ಒಂದು ಸಾರೆ ಪಂಢರಪುರಕ್ಕೆ ಆಶಾಢ ಏಕಾದಶಿ ಯ ಯಾತ್ರೆಯಗೋಸ್ಕರ ಅನೇಕ ಜನರು ಹೊರಟಿರು, ಆ ಯಾತ್ರೆಗೆ ಹೊರಟ ಜನ ಲೊಳಗೆ ಕೆಲವರು ಸಮರ್ಥರಿಗೆ “ ನೀವೂ ಯಾತ್ರೆಗೆ ಬರಿ ” ಎಂದು ಪ್ರಾರ್ಥಿಸಿದರು. ಅದಕ್ಕೆ ಸಮರ್ಥರು ಅವರೆಲ್ಲರಿಗೂ ನಮ್ಮ ಉಪಾಸ್ಯದೈವತ್ತು ಪಂಢರಪುರದಲ್ಲಿಲ್ಲ. ಆದ್ದರಿಂದ ನಾವು ಬರುವದಿಲ್ಲ” ಎಂದು ಹೇಳಿದರು, ಆಗ ಪಾಂಡುರಂಗನ ಮನಸ್ಸಿನಲ್ಲಿ ಸಮರ್ಥರನ್ನು ಪಂಢರಪುರಕ್ಕೆ ಕರೆದುಕೊಂಡು ಬರಬೇಕೆಂಬ ಅಪೇಕ್ಷೆಯು ಹು 8 ಪಾಂಡುರಂಗನು ಒಬ್ಬ ವೃದ್ದ ಬ್ರಾಹ್ಮಣನ ದೇಶದಿಂದ ಸಮರ್ಥರ ಬಳಿಗೆ ಹೋಗಿ ಪಂಢರಪುರಕ್ಕೆ ನಡೆಯಬೇಕೆಂದು ಆಗ್ರಹದಿಂದ ಹೇಳಿದನು, ಅದಕ್ಕೆ ಸ ಮರ್ಥರು “ನಮ್ಮ ರಾಮದೇವರು ಅಲ್ಲಿ ಇಲ್ಲ” ಎಂದು ಉತ್ತರ ಕೊಟ್ಟರು, ಆಗ ಆ ಬ್ರಾಹ್ಮಣನು-“ನೀವು ಮಹಾ ಜ್ಞಾನಿ ಇದ್ದು ಹೀಗೆ ಯಾಕೆ ಅನ್ನುತ್ತೀರಿ? ರ ಮದೇವರಿಗೆ ಇರಲಿಕ್ಕೆ ಸ್ವತಂತ್ರ ಸ್ಥಳವೆಲ್ಲಿರುತ್ತದೆ? ಎಂದು ನುಡಿದನು, ಈ ಉತ್ತ ರವನ್ನು ಕೇಳಿ ಸಮರ್ಥರು ನಿರುತ್ತರರಾಗಿ ಪಂಢರಪುರಕ್ಕೆ ಹೊರಟು ಹೋದರು. ಸಮರ್ಥರ ಆಂತಃಕರಣವೆಲ್ಲ ರಾಮಮಯವಾಗಿದ್ದದರಿಂದ ಅವರಿಗೆ ಶ್ರೀ ವಿಠೋಬ ನಮೂತಿಯೇ ರಾಮಚಂದ್ರನ ಮೂರ್ತಿಯಾಗಿಯೂ ಪಂಢರಪುರವೇ ಅಯೋಧ್ಯಾ ನಗರವಾಗಿಯೂ ಕಂಡಿತು, ಆಗ ಸಮುರ್ಥರು ರಾಮಚಂದ್ರನೇ ವಿಠೋಬನಂತಲೂ ಸೀತಾಬಾಯಿಯೇ ರಖನಾಬಾಯಿಯಂತಲೂ ಅಯೋಧ್ಯಾನಗರವೇ ಪಂಢರಪ್ಪ ರವೆಂತಲೂ ತರಯು ಗಂಗಾ ನದಿಗಳೇ ಚಂದ್ರಭಾಗವೆಂತಲೂ ಸುತಯನು ಕೊಟ್ಟಂಥ ಸುಂದರಧದ ಅಭಂಗಗಳನ್ನು ಪಂಢರಪುರದಲ್ಲಿ ಹಾಡಿದರು, ಈ ಮೇರೆ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.