ರಾಮದಾಸಸ್ವಾಮಿಗಳ ಚರಿತ್ರೆ, ಮಾಡಿದರು, ಅಭಿಷೇಕವು ಮುಗಿದ ತರುವಾಯ ಆ ಕಲ್ಲಿನ ಮೇಲಿನ ಮುಸಕು' ತೆಗೆದು ನೋಡಲಾಗಿ ಆ ಕಲ್ಲಿನ ಮೇಲೆ ಹನುಮಂತದೇವರ ಚಿತ್ರವನ್ನು ಉಪ್ಪಾರರು. ಶಸ್ತ್ರಗಳಿಂದ ಕಟದು ಸಿದ್ಧ ಮಾಡಿದಂತೆ ಕಂಡುಬಂತು! ತರುವಾಯು ಸಮರ್ಥ ರು ಆ ಬ್ರಾಹ್ಮಣರಿಗೆ- ನೀವು ಈ ಗಿಡಗಂಟಿಯಲ್ಲಿರುವ ಅಡಿಗೆಯು ಪಾತ್ರೆಗಳನ್ನೂ ಅನ್ನ ಸಾಮುಗ್ರಿಯನ್ನೂ ತೆಗೆದುಕೊಂಡು ಅಡಿಗೆಯನ್ನು ಮಾಡಿ ಭೋಜನ ತೀರಿಸ೬೫' ಎಂದು ಅಣತಿಯನ್ನು ಮಾಡಿದರು, ಆ ಪ್ರಕಾರ ಅವರು ಊಟವನ್ನು ತೀರಿಸಿ ಸ್ಥಲಶುದ್ದಿಯನ್ನು ಮಾಡಿದ ತರುವಾಯ ಆ ಪಾತ್ರಗಳೂ ಅನ್ನ ಸಾಯುಗಿಯೊ ಒಮ್ಮಿಂದೊಮ್ಮೆ ಅಲ್ಲಿಲ್ಲದಂತೆ ಆದವ! ತರುವಾಯ ಸನುರ್ಧರು ಆ ಬ್ರಾಹ್ಮಣ ಸಮುದಾಯದೊಂದಿಗೆ ಒಂದು ಗಿಡದ ಕೆಳಗೆ ಮಾತಾಡುತ್ತ ಕೂತಿರುವಾಗ ಒಮ್ಮಿಂದೊಮ್ಮೆ ಆಕಾಶದಲ್ಲಿ ಮೋಡಗವಿದು ಒಂದು ಗಳಿಗೆಯೊಳಗಾಗಿ, ಮಳೆಯು ಆರಂಭವಾಗಿ ಒಂದೆಸವನೆ ೪ ಗಳಿಗೆಯ ತನಳ ಸುರಿಯಿತು, ಎಲ್ಲಿ ನೋಡಿದಲ್ಲಿ ನೀರಿನ ಸಮೃದ್ಧಿಯಾಯಿತು, ಆದರೆ ಸಮರ್ಥರು ಕೂತಿದ್ದ ಗಿಡದ ಸುತ್ತಲು ಮಾತ್ರ ಮಳೆಯಾಗಲಿಲ್ಲ, ಅಷ್ಟು ಭಾಗದಲ್ಲಿ ಕೆಲವು ಒಣಗಿದ್ದ೦ತ ಇತ್ತು, ಈ ಚಮತ್ಕಾರವನ್ನು ನೋಡಿ ಎಲ್ಲ ಬ್ರಾಹ್ಮಣರಿಗೆ ಅತ್ಯಂತ ಆಶ್ಚರ್ಯ ವುಂಟಾಗಿ “ ನೀವು ಸಾ ತಿ ಪರಮೇಶ್ವರರು” ಎಂದು ಹೇಳಿ ಅವರೆಲ್ಲರು ಸಮರ್ಥರ ಮುಂದೆ ದಿಂಡರಕಿ ಉರ.೪ಾಡಹತ್ತಿದರು, ಬ್ರಾಹ್ಮಣರನ್ನು ಅನುಷ್ಠಾ ನಕ್ಕೆ ಕೂಡ್ರಿಸಿದ್ದರಿಂದಲೇ ಪರ್ಜನ್ಯ ವಾಯಿತಂದು ಸಂತೋಷಪಟ್ಟು, ಆ ಊರೆ ಅಧಿಕಾರಿಯಾದ ಯುವನನು ಆ ಬ್ರಾಹ್ಮಣರನ್ನು ಸನ್ಮಾನ ಪೂರ್ವಕವಾಗಿ ಎದುರು ಗಂಡು ಮೆರಿಸು ಊರಲ್ಲಿ ಕರೆದುಕೊಂಡು ಬರಬೇಕೆಂದು ಆಲೋಚಿಸಿ ಅವರು ಅನುಷ್ಠಾನ ಮಾಡತಿದ ಕೆರೆಗೆ ಹೋದನು, ಆದರೆ ಆ ಬ್ರಾಹ್ಮಣರೆಲ್ಲರು ಸಮರ್ಥರ ಕಡೆಗೆ ಕೈ ತೋರಿಸಿ • ಇವರಿಂದಲೇ ಪರ್ಜನ್ಯವಾಯಿತು, ನಮ್ಮ ಕಡೆಗೆ ಅದರ ಶ್ರೇಯಸ್ಸು ಎಷ್ಟು ಮಾತ್ರಕ್ಕೂ ಇಲ್ಲ” ಎಂತ ಹೇಳಿದರು. ಅದನ್ನು ಕೇಳಿ ಆ ಯುವನನು ಸಮರ್ಥರನ್ನು ಊರೊಳಗೆ ಊದುತ್ತ ಬಾರಿಸುತ್ತ ಬಹಳ' ಸಂಭ್ರಮದಿಂದ ಕರೆದುಕೊಂಡು ಬಂದು ಕೆಲವು ದಿವಸಗಳ ವರೆಗೆ ಅವರನ್ನು ಇಟ್ಟ ಕೊಂಡು ಅವರಿಗೆ ಅಲ್ಲಿ ಒಂದು ಮರವನ್ನು ಕಟ್ಟಿಸಿಕೊಟ್ಟನು. ಸವ ರ್ಧರು ಅಲ್ಲಿ ಕೋದಂಡರಾಮನ ಮೂರ್ತಿಯನ್ನು ಸ್ಥಾಪಿಸಿ ಉದ್ಭವ ಗೂಖಾವಿಯನ್ನು ಆ ಮಠದೊಳಗಿಟ್ಟ ಮಹುಲಿಗೆ ಹೊರಟು Sಂದರು, ಈ ಸಂಗತಿಯು ಇಂದೂರೊಳಗೆ ಶಕ ೧೫೭೫ ರಲ್ಲಿ ವರ್ತಿಸಿತು. ಸರ್ಪದಂಶ-ಒಂದಾನೊಂದು ಸಾರೆ ಸಮರ್ಥರು ತಮ್ಮ ಶಿಷ್ಯ ಮಂಡಳಿ ಊದಿಗೆ ರಾಮುಘಳಿಯಲ್ಲಿದ್ದಾಗ್ಗೆ ಅವರ ಶಿಷ್ಯರು 'ಸಮರ್ಥರು ಯಾವಾಗಲ್ಲ'
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.