ಈ ಪುಟವನ್ನು ಪ್ರಕಟಿಸಲಾಗಿದೆ
ಕರ್ಣಾಟಕ ಚಂದ್ರಿಕೆ.

ಪಥಿಕ :-- ಎಲೈ, ಅಧಮರಾ ! ನೀವಿಬ್ಬರೂ ಸೇರಿ ನನ್ನೊಬ್ಬನ
ಮೇಲೆ ಕೈಮಾಡಿದುದರಿಂದಲೇ ನಿಮ್ಮ ಸಾಹಸವನ್ನು ತಿಳಿದುಕೊಂಡೆನು.
ಅಪರಿಚಿತ :-- ನಮ್ಮ ಸಾಹಸವನ್ನು ನೀನಿನ್ನೂ ಈಗತಾನೆ ತಿಳಿಯು
ತ್ತಿರುವೆ. ಆದುದರಿಂದಲೇ ಇಲ್ಲಿಗೆ ಧೈರ್ಯವಾಗಿ ಬಂದೆ. ನೀನು
ಯಾರನ್ನು ಸಹಾಯಮಾಡಿ ಉದ್ದಾರ ಮಾಡಬೇಕೆಂದು ಬಂದೆಯೋ
ಅವನ ಶವವನ್ನೇ ನೋಡುತ್ತೆ ಇಲ್ಲಿರು.
ಎಂದಿಬ್ಬರೂ ಬಂಧಿತನಾಗಿದ್ದ ಪಥಿಕನನ್ನು ವೃಕ್ಷಕ್ಕೆ ಕಟ್ಟಿ ನೇತು
ಹಾಕಿ ಹೊರಟರು. ಪಥಿಕನಿಗೆ ಬಹುಕೋಪ ಬಂದಿತು.
ಪಥಿಕ :-- ಎಲಾ, ನೀಚರಾ ! ನಿಮ್ಮ ಈ ಅಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು
ದೈವಾನುಗ್ರಹದಿಂದ ಇನ್ನು ಸ್ವಲ್ಪ ಕಾಲದೊಳಗಾಗಿ ನಾನೇ ಮಾಡುವೆನು.
ಅಪರಿಚಿತವ್ಯಕ್ತಿಯು ನಗುತ್ತೆ__
ಈಗ ನಿನ್ನ ಬಂಧನವನ್ನು ಪರಿಹರಿಸಿಕೊಂಡರೆ ಸಾಕಾಗಿರುವುದು. ನನ್ನ
ಹೆಸರನ್ನು ಕೇಳಿ ಜೀವಿಸಿಕೊಂಡಿರುವಂತಹ ಸಾಮರ್ಥ್ಯವೂ ನಿನಗಿರುವುದೇ?
ಹಾಗಿದ್ದರೆ ಕೇಳು, ನಾನೇ " ಸಂತಾಪಕ. "

ಎರಡನೆಯ ಪರಿಚ್ಛೇದ.

" ಸಂತಾಪಕ ! " ಎಷ್ಟು ಭೀಕರವಾದ ಹೆಸರು ! ಹೆಸರಿನಿಂದಲೇ
ಗುಣವೂ ವಿಶದವಾಗಬಹುದಲ್ಲವೆ ? ಈಗ ನಡೆಯಿಸಿರುವ ಕೃತ್ಯವೂ ಹೆಸ
ರಿಗೆ ತಕ್ಕುದಾಗಿಯೇ ಇರುವುದಲ್ಲವೆ ? ಆದರೆ ರೂಪವು ಮಾತ್ರ ಹಾಗಿರ
ಲಿಲ್ಲ. ಅಷ್ಟು ಉದ್ದವಾಗಿಯೂ ಇಲ್ಲದೆ ಅಷ್ಟು ಕುಳ್ಳಾಗಿಯೂ ಇಲ್ಲದೆ
ಸಾಧಾರಣವಾದ ಆಳಾಗಿದ್ದನು. ಸುಮಾರು ಇಪ್ಪತ್ತೆಂಟುವರ್ಷವಯಸ್ಸಾ
ಗಿರಬಹುದು. ಎಳಗೆಂಪುಬಣ್ಣದಿಂದ ಶರೀರವು ತಳತಳಿಸುತ್ತಿದ್ದಿತು.
ಹಣೆಯು ಎತ್ತರವಾಗಿ ಕಣ್ಣುಗಳು ವಿಶಾಲವಾಗಿದ್ದುವು. ಮುಖದ ಸೌಂದ
ರ್ಯಕ್ಕೆ ಮುಖ್ಯಾಧಾರವಾದ ನಾಸಿಕವು ಸಂಪಗೆಯ ಮೊಗ್ಗೆಯನ್ನು ಅನು
ಕರಿಸುತ್ತಿದ್ದಿತು. ಕಂಠಸ್ವರವು ಬಹುಮೃದುವಾಗಿದ್ದಿತು. ಆದರೆ ಹೃದಯವು