ಈ ಪುಟವನ್ನು ಪರಿಶೀಲಿಸಲಾಗಿದೆ

ಸಂತಾಪಕ

೧೧


ನಿಂತಿದ್ದಳು. ಕಮಲಾಕರದತ್ತನು, " ಚಂಚಲಾ ! " ಎಂದು ಕರೆದನು.
ಚಂಚಲೆಯು ಬಂದು ನಿಂತಳು. ದತ್ತನು, " ಈ ನನ್ನ ಮಿತ್ರರಿಬ್ಬರನ್ನೂ
ಕರೆದುಕೊಂಡು ಹೋಗಿ ಯಥಾಯೋಗ್ಯವಾಗಿ ಸತ್ಕರಿಸು " ಎಂದವಳಿಗೆ
ಆಜ್ಞಾಪಿಸಿದನು. ಅಪರಿಚಿತರಾದ ಆ ಯವಕರಿಬ್ಬರೂ ಚಂಚಲೆಯ ಹಿಂದೆ
ಹೊರಟರು. ಕುಮಾರಿಯ ದೃಷ್ಟಿಯು ಮತ್ತೆ ಧಾರ್ಷ್ಟ್ಯವನ್ನು ವಹಿಸಿತು.
ಮೊದಲು ತಾನು ನೋಡಿದ್ದ ವಸ್ತುವನ್ನು ಇನ್ನೊಂದುಬಾರಿ ನೋಡಬೇಕೆಂದು
ಮುಂದುವರಿಯಿತು. ಕುಮಾರಿಯ ಮನಸ್ಸು ಅವಳ ದೃಷ್ಟಿಪ್ರವರ್ತನ
ವನ್ನು ಕಂಡು ಕೋಪದಿಂದ ಅದನ್ನು ನಿರೋಧಿಸತೊಡಗಿತು. ಕ್ರಮವಾಗಿ
ಎರಡಕ್ಕೂ ದ್ವಂದ್ವಯುದ್ಧವಾಯಿತು. ಯುದ್ದದಲ್ಲಿ ಮನಸ್ಸು ದೃಷ್ಟಿಯಿಂದ
ಜಿತವಾಯಿತು. ದೃಷ್ಟಿಯು ಮನಸ್ಸನ್ನು ತನ್ನ ಹಿಂದೆ ಕರೆದುಕೊಂಡು ಆ
ಯುವಕನ ಬಳಿಗೆ ಹೋಯಿತು. ಹಠಾತ್ತಾಗಿ ಈರ್ವರದೃಷ್ಟಿಯೂ ಮಿಳಿತ
ವಾಯಿತು. ಈ ಸಂಧಿವಿಗ್ರಹಗಳಲ್ಲಿ ಕುಮಾರಿಯ ಮನಸ್ಸು ಯುವಕ
ನಲ್ಲಿಯೂ ಯುವಕನ ಮನಸ್ಸು ಕುಮಾರಿಯಲ್ಲಿಯೂ ನೆಲಸಿದುವು. ಯುವ
ಕನು ಕಣ್ಣಿಗೆ ಮರೆಯಾಗಿ ಹೊರಟೇಹೋದನು. ಕುಮಾರಿಯು ಭ್ರಾಂತ
ಳಾಗಿ ನಿಂತುಬಿಟ್ಟಳು. ಅವಳ ದೃಷ್ಟಿಯು ತನ್ನ ಸಂಕಲ್ಪವು ಈಡೇರಿತೆಂದು
ಸುಮ್ಮನಾಯಿತು. ಎವೆಯಿಕ್ಕುವಷ್ಟು ಹೊತ್ತಿನೊಳಗಾಗಿ ವ್ಯಾಕುಲತೆಯು
ಶಾಂತತೆಯನ್ನು ಹೊರಡಿಸಿ ತಾನೇತಾನಾಗಿ ನೆಲಸಿತು. ದತ್ತನು ಇದಾವು
ದನ್ನೂ ತಿಳಿಯಲಿಲ್ಲ. ಅವನು ಆವುದೋ ಒಂದು ಪತ್ರಿಕೆಯನ್ನು ನೋಡುತ್ತೆ
ಕುಳಿತಿದ್ದನು. ಎಂದಿನಂತೆ ಕುಮಾರಿಯು ತನ್ನ ಸಮೀಪದಲ್ಲಿ ಬಂದು
ಕುಳಿತುಕೊಳ್ಳದಿದ್ದುದರಿಂದ ದತ್ತನು ತಲೆಯೆತ್ತಿನೋಡಿದನು. ಕುಮಾ
ರಿಯು ಗೋಡೆಯಲ್ಲಿ ನೇತುಹಾಕಿದ್ದ ದೇವಿಯ ಪಟವನ್ನು ದೃಷ್ಟಿಸುತ್ತಿದ್ದಳು.
ದತ್ತನು, " ಕಮಲೇ ! ವಿಜಯವರ್ಮನಿಗೆ ಏನು ಹೇಳಲಿ ? " ಎಂದು ಕೇಳಿದನು.
ಕಮಲೆಯು ಮಾತನಾಡಲಿಲ್ಲ. ದತ್ತನು " ಮಗೂ ! ನಿನ್ನ ಮನ
ಸ್ಸನ್ನು ನಾನು ತಿಳಿದುಕೊಂಡಿರುವೆನು. ಅದಿರಲಿ. ಇಲ್ಲಿ ಕುಳಿತಿದ್ದ ಯುವಕ
ನನ್ನಾದರೂ ಒಪ್ಪುವೆಯೋ ಇಲ್ಲವೊ ? "
ಏನು ! ಆ ಯುವಕನನ್ನು ಒಪ್ಪುವುದೇ ? ಒಪ್ಪದಿದ್ದರೆ ಜಯಶಾಲಿನಿ
ಯಾದ ದೃಷ್ಟಿಯು ಸುಮ್ಮನಿದ್ದೀತೆ ? ಕಮಲೆಯು ಪ್ರತ್ಯುತ್ತರವನ್ನೇನೂ