ಈ ಪುಟವನ್ನು ಪ್ರಕಟಿಸಲಾಗಿದೆ
ಸಂತಾಪಕ.
೨೩

ಏಳನೆಯ ಪರಿಚ್ಛೇದ.

ಜ್ಯೇಷ್ಠಶುದ್ಧ ಪಂಚಮಿಯದಿನ ಕುಮಾರಿಯ ವಿವಾಹಲಗ್ನವು ನೆರ
ವೇರಬೇಕೆಂದು ನಿಶ್ಚಿತವಾಯಿತು. ವರನು ತನ್ನ ಸ್ನೇಹಿತನನ್ನು ದತ್ತನ
ಮನೆಯಲ್ಲಿ ಬಿಟ್ಟು ತಾನು ತಂದೆಯ ಅನುಮತಿಯನ್ನು ಪಡೆದು ಬರುವೆ
ನೆಂದು ಹೇಳಿ ಹೊರಟುಹೋದನು. ದತ್ತನ ಮನೆಯಲ್ಲಿ ಮದುವೆಯ
ಕೆಲಸಗಳೆಲ್ಲವೂ ನಡೆಯತೊಡಗಿದವು. ಪರಿಚಾರಿಣಿಯರಿಗೆ ಬಹು ಕಷ್ಟ
ವಾಯಿತು. ಅವರು ಎಂದಿನಂತೆ ತಮ್ಮತಮ್ಮ ಕಾರ್ಯಗಳನ್ನು ಮಾಡಿಕೊ
ಳುವುದಲ್ಲದೆ ಮದುವೆಗೆ ಬೇಕಾಗುವ ಪದಾರ್ಥಗಳನ್ನೂ ಅಣಿಮಾಡಿ
ಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಪದ್ದತಿಯ ಪ್ರಕಾರ ನಡಿಯಬೇ
ಕಾಗಿದ್ದ ಎಷ್ಟೋ ಉಪನ್ಯಾಸಗಳು ಮಾನಸಿಕಮಾಡಲ್ಪಟ್ಟವು. ಎಲ್ಲೆ
ಲ್ಲಿಯೂ ಮದುವೆಯ ಸಂಭ್ರಮ, ಮಧ್ಯೆ ಮಧ್ಯೆ ಅವಕಾಶವೊದವಿದಾಗ
ಕನ್ಯಾವರರ ಸೌಂದರ್ಯವಿಚಾರ, ಉಡುಗೆತೊಡುಗೆಗಳ ವರ್ಣನೆ, ಪರಿಚಾ
ರಿಣಿಯರ ಹಸ್ತಚಾಲನದಿಂದುಂಟಾಗುವ ಬಳೆಗಳ ಖಣಿಖಣಿಲೆ೦ಬ ಶಬ್ದ,
ಬಿಯಗರಿಗೆ ಮಾಡಬೇಕಾದ ಮರ್ಯಾದೆಯ ವಿತರಣೆ, ಎಂತಹ ಅಲಂ
ಕಾರಗಳನ್ನು ಧರಿಸಿಕೊಳ್ಳಬೇಕೆಂಬ ಸಮಾಲೋಚನೆ, ಇವುಗಳಿಂದ ದತ್ತನ
ಮನೆಯು ತುಂಬಿಹೋಗಿದ್ದಿತು. ವಿವಾಹಲಗ್ನವು ಎಷ್ಟು ಜಾಗ್ರತೆಯಾಗಿ
ಬಂದೀತೋ ಎಂದೆಲ್ಲರೂ ಉತ್ಸುಕಿತರಾಗಿ ನಿರೀಕ್ಷಿಸುತ್ತಿದ್ದರು. ಪಾಠಕ
ಮಹಾಶಯರೇ ! ಕುಮಾರಿ ಎಲ್ಲಿರುವಳೆಂಬುದನ್ನು ನೀವು ಬಲ್ಲಿರಾ ? ಇತ್ತ
ನೋಡಿ ; ದತ್ತನ ವಿಲಾಸಭವನದ ಇದಿರಾಗಿರುವ ಕಿರುಮನೆಯಲ್ಲಿ ಕುಳಿತಿ
ರುವಳು. ಇವಳೇನು ಮಾಡುತ್ತಿರುವಳು ? ಇವಳ ಸಂತೋಷಕ್ಕೆ ಮಿತಿಯೇ
ಇಲ್ಲವಲ್ಲವೆ ? ಆಃ ! ಇವಳ ಉತ್ಸಾಹವು ಗಗನಕುಸುಮಸದೃಶವಾದುದು !
ಮುಖವು ವಿವರ್ಣವಾಗಿ ಹೋಗಿರುವುದು. ನೀಲಮೇಘ ಸದೃಶವಾದ
ಅವಳಾ ಕೇಶದಾಮವು ಕೆದರಿ ಹೋಗಿರುವುದು. ಕೈಯಲ್ಲಿ ಸಾಧಾ
ರಣವಾದ ಬಳೆಯಿರುವುದು. ಬಾರಿಬಾರಿಗೂ ನಿಟ್ಟುಸಿರನ್ನು ಬಿಡು
ತಿರುವಳು, ಮದುವೆಯ ಹೆಣ್ಣು ಹೀಗಿರುವುದನ್ನು ನೀವೇ ಕಣ್ಣಾರೆ
ನೋಡಿದುದರಿಂದ ನಿಮಗೆ ನಂಬುಗೆಯುಂಟಾಯಿತಲ್ಲದೆ ಆರಾದರೂ
ತಿಳಿಸಿದ್ದರೆ ಬೇರೆ ನೀವು ನಂಬುತ್ತಿರಲಿಲ್ಲ. ಇದಕ್ಕೆ ಕಾರಣವೇನು? ಮದು