ಭೃತ್ಯ : ಹದಿನೈದು ರೂಪಾಯಿಗಳನ್ನು ಕೊಡಬೇಕು.
ನಂದಕುಮಾರ : ಇದೊ ತೆಗೆದುಕೊ.
ಎಂದು ಒಂದು ಚಿನ್ನದ ನಾಣ್ಯವನ್ನು ಕೊಟ್ಟು ಸೀಷೆಯಲ್ಲಿದೆ ಮದ್ಯ
ವನ್ನು ಮತ್ತೊಂದು ಬಾರಿ ಬಟ್ಟಲಿಗೆ ಹಾಕಿಕೊಂಡು ಕುಡಿಯುತ್ತೆ " ಎಲಾ !
ಸೌ೦ದರ್ಯವತಿಯಾದ ಒಬ್ಬ ವೇಶ್ಯೆಯ ಮನೆಗೆ ನನ್ನನ್ನು ಕರೆದುಕೊ೦ಡು
ಹೋಗಿ ಬಿಡುವೆಯಾ ? " ಎ೦ದು ಕೇಳಿದನು. ಭೃತ್ಯನು ಅದಕ್ಕೆ ಸಮ್ಮತಿ
ಸಲಿಲ್ಲ. ನಂದಕುಮಾರನು ಮನಸ್ವಿಯಾಗಿ ಅವನನ್ನು ಬೈದು ತನ್ನ ಉಡು
ಪುಗಳನ್ನು ಬಹು ಶ್ರಮೆಪಟ್ಟು ಧರಿಸಿ ಸೀಷೆಯನ್ನು ತೆಗೆದುಕೊಂಡು ತಪ್ಪು
ಹೆಜ್ಜೆಗಳನ್ನಿಡುತ್ತ ಕೆಳಗಿಳಿದನು.ಇವನು ಈ ಮನೆಯನ್ನು ಪ್ರವೇಶಿಸಿದಾಗ
ಹನ್ನೆರಡುಗಂಟೆಯಾಗಿದ್ದಿತೆಂದು ತಿಳಿಸಿರುವೆನಲ್ಲವೆ ? ಈಗ ರಾತ್ರಿ ಒಂಭ
ತ್ತುಗಂಟೆಯಾಗಿದ್ದಿತು. ನಂದಕುಮಾರನು ಮನೆಯನ್ನು ಬಿಟ್ಟು ಹೊರಕ್ಕೆ
ಬಂದನು.ಏನು ಮಾಡಭೇಕೋ ಎಲ್ಲಿಗೆ ಹೋಗಬೇಕೋ ತಿಳಿಯದೆ
ಆಗ್ನೆಯ ದಿಕ್ಕಿನಲ್ಲಿದ್ದ ಒಂದು ಮಾರ್ಗವನ್ನನುಸರಿಸಿ ಹೊರಟನು. ಎಲ್ಲೆ
ಲ್ಲಿಯೂ ಅ೦ಧಕಾರವು ತಾನೇತಾನಾಗಿ ಹರಡಿಕೊಂಡಿತು. ಬೀದಿಯಲ್ಲಿ
ಜನರ ಓಡಾಟವು ಅತಿ ವಿರಳವಾಗುತ್ತ ಬಂದಿತು. ಕ್ರಮೇಣ ಹತ್ತುಗಂಟೆ
ಯಾಯಿತು. ನಂದಕುಮಾರನು ಅಲ್ಲಲ್ಲಿ ನಿಲ್ಲುತ್ತಲ್ಲೂ ಮನಸ್ವಿಯಾಗಿ
ಮಾತಾಡುತ್ತಲೂ ಮಧ್ಯ ಮಧ್ಯೆ ಮದ್ಯವನ್ನು ಸೇವಿಸುತ್ತಲೂ ಒಂದು
ಸರೋವರದ ಬಳಿಗೆ ಹೋಗಿ ಕುಳಿತು ಹಾಡಲಾರಂಭಿಸಿದನು.
ಸುರುಚಿರಮದ್ಯಂ | ಬುಧಜನಹೃದ್ಯಂ
ಹೇ ಸಖಿ ಪಿಬಸಿರವದ್ಯಂ ||
ಇವನು ಹಾಡಿ ಮುಗಿಸುವುದರೊಳಗಾಗಿ ಸರೋವರದ ಪೂರ್ವಭಾಗ
ದಲ್ಲಿದ್ದ ಮಂಟಪದೊಳಗಣಿ೦ದ “ ಸುರುಚಿರಮದ್ಯಂ "ಎಂದು ಯಾರೋ
ಹಾಡಿದಂತೆ ಪ್ರತಿಧ್ವನಿಯಾಯಿತು. ನಂದಕುಮಾರನು ಅದನ್ನು ಕೇಳಿ ಸಂ
ತುಷ್ಟನಾಗಿ ಮತ್ತೆ ಕುಡಿದು ತಿರುಗೀ ಹಾಡಿದನು.ಮಂಟಸದೊಳಗಣಿ೦ದ
ಪುನ: ಗಾನವು ಕೇಳಿಸಿತು. ನಂದಕುಮಾರನು ಸ್ವಲ್ಪ ಸ್ವಲ್ಪವಾಗಿ ಎಲ್ಲವನ್ನೂ
ಪುಟ:ಸಂತಾಪಕ.djvu/೩೪
ಈ ಪುಟವನ್ನು ಪ್ರಕಟಿಸಲಾಗಿದೆ
೨೮
ಕರ್ಣಾಟಕ ಚ೦ದ್ರಿಕೆ.