ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಕರ್ಣಾಟಕ ಚಂದ್ರಿಕೆ.

ಕೇಳಿಕೊಳ್ಳುವೆವು. " ಮಹಾಶಯ ! ಈ ಅಕ್ಕತಂಗಿಯರಲ್ಲಿ ಅಕೃತ್ರಿಮ
ವಾದ ಪ್ರೀತಿಯುಳ್ಳವಳಾವಳು ? "
ಅಪರಿಚಿತವ್ಯಕ್ತಿಯ ಬಳಿಯಲ್ಲಿ ಒ೦ದು ಸೀಷೆಯ ತುಂಬ ಮದ್ಯ
ವಿದ್ದಿತು. ನಂದಕುಮಾರನು ಆ ಮದ್ಯವನ್ನೂ ಸ್ವಲ್ಪಸ್ವಲ್ಪವಾಗಿ ಕುಡಿದು
ಮುಗಿಸಿ ಮೈಮರೆತು ಮಲಗಿಬಿಟ್ಟನು. ಅಪರಿಚಿತವ್ಯಕ್ತಿ " ಎಲೈ, ರಸಿ
ಕಾಗ್ರೇಸರನೇ ! ಇನ್ನು ನಾನು ಹೊರಡುವೆನು. ನನಗೆ ಬಹುಮಾನವನ್ನು
ಕೊಡುವುದಿಲ್ಲವೇ ? "
ನಂದಕುಮಾರನು ಈ ಮಾತನ್ನು ಕೇಳಿ ನಗುತ್ತೆ ತನ್ನ ಅ೦ಗಿಯ
ಕಿಸೆಯಲ್ಲಿದ್ದ ಕೆಲ ಪತ್ರಿಕೆಗಳನ್ನೂ ಒಂದೆರಡು ಬೆಳ್ಳಿಯ ನಾಣ್ಯಗಳನ್ನೂ
ತೆಗೆದುಕೊಟ್ಟು, ನಾಳೆಯದಿನ ತಿರುಗೀ ಇಲ್ಲಿಗೆ ಬರಬೇಕೆಂದು ಹೇಳಿ
ಆ ಅಪರಿಚಿತವ್ಯಕ್ತಿಯನ್ನು ಕಳುಹಿಸಿಬಿಟ್ಟನು.

——————

ಎಂಟನೆಯ ಪುರಿಚ್ಚೇದ.

ರಾತ್ರಿ ಸುಮಾರು ಎರಡುಪ್ರಹರವಾಗಿದ್ದಿತು. ವಿಮಲನಗರದ ರಾಜ
ಬೀದಿಗಳೆಲ್ಲ ಜನಸಂಚಾರಶೂನ್ಯವಾಗಿದ್ದುವು. ಕೃಷ್ಣಪಕ್ಷಾಂತ್ಯವಾದುದರಿಂದ
ಚಂದ್ರನು ವಿಶ್ರಾಂತಿಸುಖವನ್ನೆಳಸಿ ರೋಹಿಣಿಯ ಕೇಳೀಗೃಹದಲ್ಲಿಯೇ
ವಿಹರಿಸುತ್ತಿದ್ದನು. ಅಂಧಕಾರವು ಎಲ್ಲೆಲ್ಲಿಯೂ ವ್ಯಾಪಿಸಿ ಹೀನಪ್ರಭಗಳಾದ
ನಕ್ಷತ್ರಗಳಿಗೆ ಸ್ವಲ್ಪ ಪ್ರಾಶಸ್ತ್ಯವನ್ನುಂಟುಮಾಡಿದ್ದಿತು. ನಿದ್ರಾಂಗನೆಯು
ತನ್ನ ವಿಲಾಸಾತಿಶಯದಿಂದ ಲೋಕವನ್ನೆಲ್ಲ ಮುಗ್ಧವನ್ನಾಗಿ ಮಾಡಿದ್ದಳು.
ರಾಜಬೀದಿಯಲ್ಲಿ ಒಂದು ಗೂಳಿಯು ಮೆಲುಕುಹಾಕುತ್ತೆ ಗಂಭೀರವಾಗಿ
ನಿಂತಿದ್ದಿತು. ವೃಷಭರಾಜನ ಸುತ್ತಲೂ ಎರಡುಮೂರು–ಕರುಗಳು ತಮ್ಮ
ರಾಜಭಕ್ತಿಯನ್ನು ಪ್ರದರ್ಶಿಸುತ್ತ ನಿಂತಿದ್ದುವು. ವೃಷಭರಾಜನು ಒಂದೊಂದು
ಬಾರಿ ತನ್ನ ಪ್ರಜೆಗಳ ವಿಜ್ಞಾಪನೆಯನ್ನು ಲಾಲಿಸುತ್ತೆ ಕಿವಿಗಳನ್ನು ಅಲು
ಗಾಡಿಸುವನು. ಒಂದುಬಾರಿ ನಿಮ್ಮ ಪ್ರಾರ್ಥನೆಯನ್ನು ನೆರವೇರಿಸಲಾಗುವು