ಗಮನಾಗಲಿ, ಯಾರೂ ಕಾಣಿಸಲಿಲ್ಲವಾದುದರಿಂದ ಸುತ್ತಿಸುತ್ತಿ ಬೇಸರ
ದಿಂದ ಇತ್ತಕಡೆ ಬಂದನು. ಮುಂದೆ ನಡೆದ ವಿಷಯವೆಲ್ಲ ನಿಮಗೆ ತಿಳಿದೇ
ಇರುವದಾದುದರಿಂದ ಅದನ್ನು ನಾವು ಪ್ರಸ್ತಾಪಿಸಬೇಕಾಗಿಲ್ಲ. ಆಗ
ವಿಜಯವರ್ಮನು " ಎಲೆ ಬಾಲೇ ! ನಿನ್ನ ಸೌಂದರ್ಯಕ್ಕೆ ಅನರ್ಹವಾದ ಈ
ಕಾರ್ಯದಲ್ಲಿ ನೀನು ಸರ್ವಪ್ರಕಾರವಾಗಿಯೂ ಪ್ರವೇಶಿಸಲಾಗದು. ನಿನ್ನನ್ನು
ಉದ್ಧಾರಮಾಡಬೇಕೆಂಬ ಆಲೋಚನೆಯಿಂದಲೇ ನಾನಿಲ್ಲಿಗೆ ಬಂದಿರುವೆನು.
ಭಯಪಡಬೇಡ, ನನ್ನೊಡನೆ ಬಾ " ಎಂದು ನುಡಿದನು.
ನಿರುಪಮಕುಮಾರಿಯು ಉಪಾಯಾ೦ತರವಿಲ್ಲದೆ ಅವನೊಡನೆ ಹಂತ
ವನ್ನು ಹತ್ತಿ ಮೇಲಕ್ಕೆ ಬಂದಳು. ವಿಜಯವರ್ಮನು ಅವಳ ಕೈಯನ್ನು
ಹಿಡಿದುಕೊಂಡು ಕುಟೀರಾಭಿಮುಖನಾಗಿ ಹೊರಟನು. ಮಾರ್ಗಮಧ್ಯದಲ್ಲಿ
ನಿರುಪಮಕುಮಾರಿಯ ಮುಖವನ್ನು ನೋಡಲು ಅವಳು ತಲೆಯನ್ನು
ಬಾಗಿಸಿಕೊಂಡಿದ್ದಳು. ಇನ್ನೂ ಕತ್ತಲೆಯಾಗದಿದ್ದಪಕ್ಷದಲ್ಲಿ ಅವಳಾಉದ್ವೇ
ಗವು ಬಾಷ್ಪರೂಪವಾಗಿ ಉಕ್ಕಿಬರುತ್ತಿದ್ದುದು ವಿಜಯವರ್ಮನಿಗೆ ಗೋಚರ
ವಾಗುತ್ತಿದ್ದಿತು. ಅವನು ಏನನ್ನೋ ಯೋಚಿಸುತ್ತೆ ಮತ್ತಷ್ಟು ವೇಗ
ವಾಗಿ ಮುಂದೆ ಹೊರಟನು. ನಿರುಪಮಕುಮಾರಿಯು ಅವನನ್ನು
ಅನುಸರಿಸುತ್ತಿದ್ದಳು. ಈ ಸಮಯದಲ್ಲಿ ಮಾರ್ಗದ ಎಡಗಡೆ ಏನೋ
ಶಬ್ದವಾದಂತೆ ಬೋಧೆಯಾಯಿತು. ವಿಜಯವರ್ಮನು ತಟ್ಟನೆ ನಿಂತು
ಸುತ್ತಲೂ ನೋಡಿದನು. ಏನೂ ತಿಳಿಯಲಿಲ್ಲ. ಮತ್ತೆ ಮುಂದೆ ಹೊರಡು
ವುದರೊಳಗಾಗಿ ಯಾರೋ ಹಿಂದಣಿಂದ ಬಂದು ವಿಜಯವರ್ಮನ ಬೆನ್ನ
ಮೇಲೆ ಹೊಡೆದರು. ವಿಜಯವರ್ಮನು ಮಿ೦ಚನವೇಗದಿಂದ ಹಿಂತಿರುಗಿ
ಆ ಅಪರಿಚಿತವ್ಯಕ್ತಿಯ ಕೊರಲನ್ನು ಹಿಡಿದುಕೊಂಡನು. ಅಪರಿಚಿತ
ವ್ಯಕ್ತಿಯು ನಿಶ್ಚೇಷ್ಟಿತನಾದನು. ನಿರುಪಮಕುಮಾರಿಯು ಭೀತಿಯಿಂದ ನಡು
ಗುತ್ತೆ " ಇವನೇ ಆ ಸಂತಾಪಕನ ಸ್ನೇಹಿತ ! ಇವನನ್ನು ಮೊದಲು ಕೊಲ್ಲು,
ಮೊದಲು ಕೊಲ್ಲು " ಎಂದು ಅರಿಚುತ್ತೆ ನೆಲದಮೇಲೆ ಬಿದ್ದುಬಿಟ್ಟಳು.
ವಿಜಯವರ್ಮನು ಬಹು ಸಾಹಸದಿಂದ ಆ ಅಪರಿಚಿತನನ್ನು ನೆಲಕ್ಕೆ ಕೆಡಹಿ
ಅವನೆದೆಯಮೇಲೆ ಕುಳಿತು, ತನ್ನ ಮುಷ್ಟಿಯಿಂದ ಅವನ ಮುಖದಮೇಲೆ
ಒಂದುಬಾರಿ ಗುದ್ದಿದನು. ಅಪರಿಚಿತನ ಮೂಗಿನಲ್ಲಿಯೂ ಬಾಯಿಯಲ್ಲಿಯೂ