ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಕರ್ಣಾಟಕ ಚ೦ದ್ರಿಕೆ.


ಹದಿಮೂರನೆಯ ಪರಿಚ್ಛೇದ.

ನಾಳೆಯದಿನ ' ಕಮಲಕುಮಾರಿಗೆ ವಿವಾಹಲಗ್ನವಾಗಬೇಕಾಗಿರು
ವುದು. ದತ್ತನ ಬಂಧುಮಿತ್ರರೆಲ್ಲರೂ ಏಕತ್ರ ಸೇರಿ ಬಹು ಸಂಭ್ರಮ
ದಿಂದ ಓಡಾಡುತ್ತಿರುವರು. ಕಮಲಕುಮಾರಿಯು ಹಳದಿ ಬಣ್ಣದ ಪಟ್ಟೆಯ
ಸೀರೆಯನ್ನುಟ್ಟುಕೊಂಡು ಗೌರೀಪೂಜೆಯನ್ನು ಮಾಡುತ್ತಿರುವಳು. ಬಿಯ
ಗರಿಗೋಸ್ಕರ ಬಗೆಬಗೆಯ ಭಕ್ಷಾದಿಗಳು ಸಿದ್ಧವಾಗಿರುವುವು. ಮಂಗಳ
ವಾದ್ಯಗಳು ದಿಗಂತರಾಳಗಳನ್ನೆಲ್ಲ ತುಂಬುತ್ತೆ ಭೋರ್ಗರೆಯುತ್ತಿರುವವು.
ಮಧ್ಯೆಮಧ್ಯೆ ಎಳೆಮಕ್ಕಳ ರೋದನಶಬ್ದ. ಆಹ್ಲಾದಜನಿತವಾದ ಯುವಕರ
ನಗೆ. ದಾಸದಾಸಿಯರ ಕೋಲಾಹಲ. ಪುರೋಹಿತರ ಕಲಕಲ. ಇ೦ತಹ
ಉತ್ಸವಸಮಯದಲ್ಲಿ ಒಬ್ಬರಮಾತು ಮತ್ತೊಬ್ಬರಿಗೆ ಕೇಳಿಸುವ ಸಂಭ
ವವೇ ಇಲ್ಲ. ದತ್ತನ ಮನೆಯ ಬಾಗಿಲಲ್ಲಿ ಒಂದು ಬಂಡಿಯು ಬಂದು
ನಿಂತಿತು. ವಸ್ತ್ರಭೂಷಣಾದಿಗಳಿಂದಲಂಕೃತನಾದ ಒಬ್ಬ ಯುವಕನು
ಬಂಡಿಯಿಂದಿಳಿದನು. ಅವನ ಸುತ್ತಲೂ ಹಲವುಮಂದಿ ಹುಡುಗರು ಬಂದು
ನಿಂತುಕೊಂಡರು. ಒಡನೆಯೇ " ಕಮಲಕುಮಾರಿಯ ಗಂಡ ಬಂದನು !
ಇವನೇ ಮದುವೆಯ ಗಂಡು " ಎಂದು ಮುಂತಾಗಿ ಕೋಲಾಹಲ ಧ್ವನಿ
ಯಾಯಿತು. ವಾದ್ಯಗಾರರೂ ವರನನ್ನು ನೋಡಬೇಕೆಂಬ ಅಭಿಲಾಷೆ
ಯಿಂದ ವಾದ್ಯಗಳನ್ನು ನಿಲ್ಲಿಸಿ ಎದ್ದುನಿಂತರು. ಇಂತಹ ಸುಮುಹೂರ್ತ
ದಲ್ಲಿ ವಾದ್ಯಗಳನ್ನು ನಿಲ್ಲಿಸಿದುದರಿಂದ ಅಮಂಗಳವಾಯಿತೆಂದು ಕೋಪಿಸಿ
ಕೊಂಡು ಒಬ್ಬ ವೃದ್ಧೆಯು ವಾದ್ಯಗಾರರನ್ನು ಬಗೆಬಗೆಯಾಗಿ ಶಪಿಸಿದಳು.
ವಾದ್ಯಗಾರರು ಮಾತನಾಡುವುದಕ್ಕಿಲ್ಲದೆ ಹುಬ್ಬುಗಳನ್ನು ಗಂಟಿಕ್ಕಿಕೊಂಡು
ಮತ್ತೆ ವಾದ್ಯಗಳನ್ನು ಬಾಜಿಸಲಾರಂಭಿಸಿದರು. ಕಮಲಾಕರದತ್ತನು ಒಳ
ಗಣಿಂದ ಬಂದು ವರನನ್ನು ಇದಿರ್ಗೊ೦ಡನು. ಸುವಾಸಿನಿಯರು ಚಿನ್ನದ
ಹರಿವಾಣದಲ್ಲಿ ಆರತಿಯನ್ನು ತಂದು ಬೆಳಗಿ ವರನ ತಲೆಯಲ್ಲಿ ಅಕ್ಷತೆಗಳ
ನ್ನಿಟ್ಟು ಹರಸಿದರು. ದತ್ತನು ವರನನ್ನು ಕರೆದುಕೊಂಡು ಒಳಕ್ಕೆ ಬರುತ್ತೆ
" ನಿಮ್ಮ ತಂದೆಯೆಲ್ಲಿ ? ಬರಲೇಇಲ್ಲ ? " ಎಂದು ಕೇಳಿದನು.
ವರ :- ಆತನಿಗೆ ದೇಹಾಲಸ್ಯವಾಗಿದ್ದಿತಾದುದರಿಂದ ಬರಲಿಲ್ಲ.