ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಕರ್ಣಾಟಕ ಚ೦ದ್ರಿಕೆ.


ದತ್ತ :- ಏನು ! ನಾನು ಪರಿಹಾಸಮಾಡುತ್ತಿರುವೆನೆ ?
ವಿನಯ :- ಅಯ್ಯಾ, ಈಗ ನನಗೆ ಬುದ್ದಿಯು ಸರಿಯಾಗಿಲ್ಲ. ನನ್ನ
ಕುಮುದನನ್ನು ಕರೆಯಿಸು.
ಮದವಣಿಗ :- ತಂದೆಯೇ ! ಇದೇನು ! ನಾನು ಇದಿರಾಗಿದ್ದರೂ
ಹೀಗೆ ಮಾತನಾಡುವೆ?
ವಿನಯ :- ಅಯ್ಯೋ, ವಿಪರೀತವೆ ! ಇದೇನು ! ನೀವೆಲ್ಲರೂ ನನ್ನ
ನ್ನೇಕೆ ಹಾಸ್ಯಮಾಡುತ್ತಿರುವಿರಿ ? ನನ್ನ ಕುಮುದನೆಲ್ಲಿ ?
ದತ್ತ :- ವಿನಯಾ ! ನಿನ್ನಿದಿರಾಗಿ ನಿಂತಿರುವನೇ ಕುಮುದನಲ್ಲವೆ ?
ಚೆನ್ನಾಗಿ ನೋಡು.
ವಿನಯ :- ಚಿಃ, ಇವನಲ್ಲ. ಅಯ್ಯೋ, ನನ್ನ ಕುಮುದ !
ದತ್ತನಿಗೆ ಮೈಯೆಲ್ಲಾ ಬೆವರೇರಿತು. ಮು೦ದೆ ಮಾತನಾಡುವುದಕ್ಕೆ
ತೋರದಂತಾಯಿತು. ವರನು ದತ್ತನ ಸಮೀಪದಲ್ಲಿ ನಿಂತುಕೊಂಡು
" ಮಾವಯ್ಯಾ ! ನಮ್ಮ ತಂದೆಗೆ ದೇಹಾಲಸ್ಯವೆಂದು ನಾನು ಹೇಳಿರಲಿಲ್ಲವೆ ?
ಆತನು ಒಂದು ಲಕ್ಷ ರೂಪಾಯಿಗಳನ್ನು ಒಬ್ಬ ವಂಚಕನಿಗೆ ಕೊಟ್ಟು
ಮೋಸಹೋದನು. ಆ ವಂಚಕನು ಹಣವನ್ನು ತೆಗೆದುಕೊಂಡು ಹೋ
ದಂದಿನಿಂದ ಮುಖವನ್ನೇ ತೋರಿಸದೆ ಎಲ್ಲಿಯೋ ಮಾಯವಾದನು.
ಅಂದಿನಿಂದಲೂ ನಮ್ಮ ತಂದೆಗೆ ಬುದ್ಧಿಭ್ರಮಣೆಯುಂಟಾಗಿರುವುದು. ಅದು
ನಾನು ಇಲ್ಲಿಗೆ ಬಂದಬಳಿಕ ಮತ್ತಷ್ಟು ಹೆಚ್ಚಿದಂತೆ ತೋರುವುದು. "
ಎಂದು ಹೇಳಿದನು.
ದತ್ತನ ತಲೆಯಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು. ತನ್ನ
ಪರಮಮಿತ್ರನಿಗೆ ಲಕ್ಷಾಂತರ ದ್ರವ್ಯವು ಮುಳುಗಿಹೋಯಿತೆಂಬುದೊಂದು
ದುಃಖ. ಆತನು ಉನ್ಮತ್ತನಾಗಿರುವುದು ಮತ್ತೊಂದು ದುಃಖ. ಪ್ರಕೃತ
ದಲ್ಲಿ ಕಮಲಕುಮಾರಿಯ ವಿವಾಹಕ್ಕೆ ವಿಘ್ನವುಂಟಾದೀತೆಂಬುದೊಂದು
ಸಂದೇಹ. ಇವುಗಳಿಂದ ದತ್ತನಿಗೆ ದಿಕ್ಕೇ ತೋರದಂತಾಯಿತು. ಮದು
ವೆಯ ಮನೆಗೆ ಬಂದಿದ್ದ ನಂಟರೂ ಮಿತ್ರರೂ ದಾಸದಾಸಿಯರಾದಿಯಾದ
ಆಬಾಲವೃದ್ಧರೂ ಬಂದು ಸುತ್ತಿಕೊಂಡರು. ಯಾರಿಗೂ ಏನೂ ತಿಳಿಯದು.
ಅಲ್ಲಿಯೇ ಒಬ್ಬೊಬ್ಬರಾಗಿ ಪ್ರಸಂಗಮಾಡಲಾರಂಭಿಸಿದರು. ಕಡೆಗೆ " ಮದು