ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ

೫೫

ವಿಜಯವರ್ಮನು ಅವನನ್ನು ವಂಚಿಸಿ ತಂದಿದ್ದನು. ಈ ಕಾಗದಗಳಿ೦ದ
ಸಂತಾಪಕನ ವಿಷಯವನ್ನು ಅರಿತ ಕಮಲಾಕರದತ್ತನು ವಿನಯಚಂದ್ರ
ದತ್ತನಿಗೆ ಸಕಲವನ್ನೂ ತಿಳಿಸಿದನು. ವಿನಯಚಂದ್ರದತ್ತನು ಆಕಸ್ಮಿಕವಾಗಿ
ಸಂಘಟಿಸಿದ ಈ ಪುತ್ರಶೋಕವನ್ನು ಸಹಿಸಲಾರದೆ ಕೊರಗುತ್ತಾ ಹಾಸಿಗೆ
ಹಿಡಿದು ಮಲಗಿಬಿಟ್ಟನು. ಮಿತ್ರನನ್ನು ಉಪಚರಿಸುವುದರಲ್ಲಿ ದತ್ತನಿಗೆ
ಕಮಲಕುಮಾರಿಯ ವಿಷಯವು ಮರತೇಹೋಯಿತು. ಕುಮಾರಿಯು
ವಿನಯಚಂದ್ರನಿಗಿಂತ ದ್ವಿಗುಣಿತವಾದ ಮನೋವ್ಯಥೆಯುಳ್ಳವಳಾಗಿ ನಿದ್ರಾ
ಹಾರಗಳನ್ನು ಬಿಟ್ಟು ಕೊರಗಲಾರಂಭಿಸಿದಳು. ತನಗೆ ನಿಶ್ಚಿತನಾಗಿದ್ದ
ವರನು ಎಂಥವನೇ ಆಗಿದ್ದರೂ ಅವನನ್ನು ಬಿಟ್ಟು ಮತ್ತೊಬ್ಬನನ್ನು ವರಿ
ಸುವುದಕ್ಕೆ ಅವಳಿಗೆ ಇಷ್ಟವಿರಲಿಲ್ಲ. ಇದೂ ಅಲ್ಲದೆ ಆತನ ಚರ್ಯೆಯೆಲ್ಲಾ
ಬಹಿರಂಗವಾಗಿ ಹೋದುದರಿಂದ ಅವನಿಗೆ ಪ್ರಾಣಾಂತ ದಂಡನೆಯಾಗಿ
ಹೋದೀತೆಂಬುದೊಂದು ಮಹದ್ವ್ಯಸನ. ಈ ಕಾರಣಗಳಿಂದ ಅವಳು
ಕೊರಕೊರಗಿ ಕಂಠಗತಪ್ರಾಣಿಯಾದಳು. ಕಡೆಗೆ ತನ್ನ ಮನಸ್ಸಿನ
ಆವೇಗವನ್ನು ಸಂವರಣಮಾಡಿಕೊಳ್ಳಲಾರದೆ ಸಂತಾಪಕನಿಗೆ ಒಂದು ಪತ್ರಿಕೆ
ಯನ್ನು ಬರೆದು ಪಾಟಲಿಕೆಯಕೈಗೆ ಕೊಟ್ಟಳು, ಪಾಟಲಿಕೆ ಸ್ವಲ್ಪವಾದರೂ
ಆಲೋಚಿಸದೆ ಕುಮಾರಿಯ ಉದ್ದೇಶಕ್ಕೆ ಸಮ್ಮತಿಸಿ ಪತ್ರಿಕೆಯನ್ನು
ತೆಗೆದುಕೊಂಡು ಸೆರೆಮನೆಯ ಬಳಿಗೆ ಹೊರಟುಹೋದಳು. ಕಮಲಾಕರ
ದತ್ತನು ಕುಮಾರಿಯ ಅವಸ್ಥೆಯನ್ನು ಕೇಳಿ ಭೀತಿಗೊಂಡವನಾಗಿ ತ್ರಿಕಾಲ
ದಲ್ಲಿಯೂ ಅವಳ ಸವಿಾಪದಲ್ಲಿಯೇ ಕುಳಿತುಕೊಂಡು ಉಪಚರಿಸ
ಲಾರಂಭಿಸಿದನು.

ಹದಿನೈದನೆಯ ಪರಿಚ್ಛೇದ.

ರಾತ್ರಿ ಸುಮಾರು ಎರಡುಗಂಟೆಯ ಸಮಯವಾಗಿದ್ದಿತು. ಸೆರೆ
ಮನೆಯ ಕಾವಲುಗಾರರೆಲ್ಲರೂ ತಂತಮ್ಮ ಆಯುಧಗಳನ್ನು ಗೋಡೆಗೊರ
ಗಿಸಿ ಕುಳಿತುಕೊಂಡೇ ನಿದ್ರಿಸುತ್ತಿದರು. ಬಂದಿಗಳಾದವರಲ್ಲಿ ಕೆಲವರು