ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ.

ಉಟ್ಟಿದ್ದ ಪಂಚೆಯು ಒಂದು ಮುಳ್ಳಿನ ಗಿಡಕ್ಕೆ ತಗುಲಿ ಸ್ವಲ್ಪ ಹರಿದು
ಹೋಯಿತು. ಪಥಿಕನು ಕಾಡುದಾರಿಯಲ್ಲಿ ನಡೆಯುತ್ತೆ ಗುಡ್ಡವನ್ನು ಹತ್ತಿ
ದನು. ಅಲ್ಲಿ ನಿಂತು ಕಿವಿಗೊಟ್ಟು ಕೇಳಿದನು. ಏನೂ ತಿಳಿಯಲಿಲ್ಲ.
ಪಥಿಕನಿಗೆ ಅತ್ಯಾಶ್ಚರ್ಯವಾಯಿತು. ಹಾಗೆಯೇ ನಿಂತು ನಾಲ್ಕು ದಿಕ್ಕಿನ
ಲ್ಲಿಯೂ ನೋಡಿದನು. ಗುಡ್ಡದ ಎಡಮಗ್ಗುಲಲ್ಲಿ ಅನರ್ಘ ನಗರದಿಂದ
ಬರುವ ಮಾರ್ಗವೊ೦ದಿರುವುದು. ಆ ಮಾರ್ಗದಲ್ಲಿ ಒ೦ದು ವಟವೃಕ್ಷವು
ಭೂಮ್ಯಾಕಾಶಗಳಿಗೆ ಕೀಲಿಸಿದಂತೆ ಕಾಣಿಸಿತು. ಅದರ ಮರೆಯಲ್ಲಿ
ಯಾರೋ ಇಬ್ಬರು ಮಾತನಾಡುತ್ತೆ ಕುಳಿತಿದ್ದರು. ಪಥಿಕನು ಬಹು ವೇಗ
ವಾಗಿ ಅತ್ತ ಕಡೆ ಹೊರಟನು. ವೃಕ್ಷದ ಮರೆಯಲ್ಲಿದ್ದ ವ್ಯಕ್ತಿಗಳಿಬ್ಬರೂ ಎದ್ದು
ಪಥಿಕನಿಗೆ ಅಭಿಮುಖವಾಗಿಯೇ ಬಂದರು. ಇವರಲ್ಲಿ ಒಬ್ಬನು ಆಚಾನು
ಬಾಹುವಾಗಿಯೂ ಸುಂದರನಾಗಿಯೂ ಇದನು. ಮತ್ತೊಬ್ಬನು ಕುಬ್ಜನಾ
ಗಿಯೂ ಏಕಟಾಕಾರನಾಗಿಯೂ ಇದ್ದನು. ಇಬ್ಬರೂ ಅಮೂಲ್ಯವಾದ
ವಸ್ತ್ರಗಳನ್ನೇ ಧರಿಸಿದ್ದರು. ಇವರ ಮುಖದಲ್ಲಿ ಭೀತಿಯಾಗಲಿ ಆತಂಕ
ವಾಗಲಿ ಆವುದೂ ಕಾಣಿಸುತ್ತಿರಲಿಲ್ಲ. ಇವರ ಮುಖವನ್ನು ಕಂಡರೆ
ದೊಡ್ಡ ಮನೆತನಕ್ಕೆ ಸೇರಿದವರೆಂದೇ ಬೋಧೆಯಾಗುತ್ತಲಿದ್ದಿತು. ಪಥಿ
ಕನು ಇವರ ಬಳಿಗೆ ಬಂದು, " ಅಯ್ಯಾ ! ಇತ್ತ ಕಡೆ ಒಂದು ಆರ್ತಶಬ್ದವುಂ
ಟಾದುದನ್ನು ಕೇಳಿದಿರಾ ? "
ಅಪರಿಚಿತ ವ್ಯಕ್ತಿಯು ನಗುತ್ತೆ ಬಹು ಗಂಭೀರಧ್ವನಿಯಿಂದ
" ನೀನು ಕೂಗಿಕೊಂಡವನಿಗೆ ಸಹಾಯಮಾಡುವುದಕ್ಕೆ ಬಂದೆಯೋ ? "
ಪಥಿಕ :-ಮಾಡಬಾರದೇಕೆ ?
ಅಪರಿಚಿತ :- ಆತ್ಮಸಂರಕ್ಷಣೆಯನ್ನೇ ಮಾಡಿಕೊಳ್ಳಲಾರದವನು ಇತ
ರರಿಗೆ ಸಹಾಯ ಮಾಡಬಲ್ಲನೆ ?
ಪಥಿಕ :- ನನ್ನ ವಿಷಯದಲ್ಲಿ ಆತ್ಮಸಂರಕ್ಷಣೆಯನ್ನು ಮಾಡಿಕೊಳ್ಳು
ವುದಕ್ಕೂ ಸಮರ್ಥನಲ್ಲವೆಂದು ತಿಳಿದುಕೊಂಡಿರುವೆಯೋ ?
ಅಪರಿಚಿತವ್ಯಕ್ತಿಗಳಿಬ್ಬರೂ ಈ ಮಾತು ಪೂರ್ತಿಯಾಗುವುದರೊಳ
ಗಾಗಿ ಪಥಿಕನನ್ನು ಆಕ್ರಮಣ ಮಾಡಿ ಕೈಕಾಲುಗಳನ್ನು ಬಿಗಿದು ಕಟ್ಟಿದರು.