ಈ ಪುಟವನ್ನು ಪರಿಶೀಲಿಸಲಾಗಿದೆ

ಶಕ]. - - - - ರುದ್ರಟ - - - - - ಎಂಬುದರಿಂದ ಸ್ಪಷ್ಟ ಪಡುತ್ತದೆ. ಈ ಟೀಕೆಯು ಕ್ರಿ. ಶ. ೧೦೬೯ರಲ್ಲಿ ಬರೆಯ ಲ್ಪಟ್ಟುದಾಗಿತಿಳಿಯಬರುತ್ತದೆ. ಕಾವ್ಯಾಲಂಕಾರಕ್ಕೆ ನೇಮಿಸಾಧುವಲ್ಲದೆ ವಲ್ಲಭ ದೇವನೆಂಬುವನೂ ಆಶಾಧರನೆಂಬುವನೂ ; ವ್ಯಾಖ್ಯಾನವನ್ನು ಬರೆದಿರುವರು. ಮಹಾಕವಿಗಳಾದ ಭೋಜನ ಮತ್ತು ಕ್ರಿ. ಶ. ಹತ್ತನೆಯ ಶತಮಾನದ ಪೂರ್ವಾರ್ಧ ದವನಾದ ಪ್ರತಿಹಾರೇಂದು ರಾಜನೂ ರುದ್ರಟನನ್ನು ಉದಾಹರಿಸಿಕೊಂಡಿರುವರು. ಕಾವ್ಯಾಲಂಕಾರ ಸರಣಿಯು ಕಾವ್ಯಾದರ್ಶವನ್ನು ಹೋಲುವದಾಗಿ ಹದಿನಾರು ಅಧ್ಯಾಯಗಳಾಗಿ ವಿಭಾಗಿಸಲ್ಪಟ್ಟು ಆರ್ಯಾವೃತ್ತದಲ್ಲಿ ಬರೆಯಲ್ಪಟ್ಟಿರುವುದು. ಶೈಲಿಯು ಸರಳವಾಗಿದ್ದು ಶ್ಲೋಕಗಳು ಮನೋರಂಜಕವಾಗಿರುವುವು. $ ಶೃಂಗಾರ ತಿಲಕಕಾರನಾದ ರುದ್ರಭಟ್ಟನನ್ನು ರುದ್ರಟನೆಂದು ಕೆಲವರು ತರ್ಕಿಸುವರು. ಈ ವಿಚಾರದಲ್ಲಿ ""ಅನ್ಯೋ ಗ್ರಂಥಸ್ತು ರುದ್ರಟ ಕೃತೋ ನ ಪ್ರಾಪ್ಯತೆ. ಶೃಂಗಾರ ತಿಲಕ ಕರ್ತಾತು ರುದ್ರಭಟ್ಟಃ ನ ರುದ್ರಟಃ, ರುದ್ರಟಸ್ಯ ವಿಶೇಷ ವರ್ಣನಂತು ಡಾಕ್ಟರು ಹೀಟರ್ಪನಸ್ಯ ಪ್ರಥಮ ರಿಪೊರ್ಟಪುಸ್ತಕೇ' ದ್ರಷ್ಟವ್ಯಂ”a ಎಂದು ಹೇಳಿರುವುದರಿಂದ ರುದ್ರಟನೂ ಶೃಂಗಾರತಿಲಕಕಾರನೂ ಪರಸ್ಪರ ಭಿನ್ನ ರೆಂಬುದು ಸ್ಪಷ್ಟ ಪಡುತ್ತದೆ. ಯಾವುದೋ ವಿಪತ್ತಿಗೊಳಪಟ್ಟು ತನ್ನ ನಾಮಾಕ್ಷರ ಗಳಲ್ಲಿನ ಭಕಾರ ಒ೦ದನ್ನು ಸಾವಿರ ಹೊನ್ನಿಗೆ ಈಡುಮಾಡಿ ರುದ್ರಟನಾದ ಮತ್ತೊಬ್ಬ ರುದ್ರಭಟ್ಟನು ಅತ್ರಿ ಗೋತ್ರದ ಬ್ರಾಹ್ಮಣನು, ಕನ್ನಡಕವಿ. ಎಡರೊಳ್ ನಿಜನಾಮಾಕ್ಷರ ವಿಡೆನಾಸಿರ ಪೊನೈ ಕೊಟ್ಟು ಬಿಡಿಪನಿತುದಿನಂ ಪಡೆದಂ ರುದ್ರಟನೆಂಬೀ ಪಡೆಮಾತಂ ರುದ್ರಭಟ್ಟನುರ್ವೀಜನದಿಂ • ಇವನಿಗೂ ಕಾವ್ಯಾಲಂಕಾರವನ್ನು ಬರೆದ ರುದ್ರಟನಿಗೂ ಯಾವ ಸಂಬಂಧವೂ ಇರದು. ಪ್ರಸಿದ್ಧರಾದ ಮಮ್ಮಟ, ಕಮ್ಮಟ, ಉವಟ, ಉದ್ಭಟ, ಭಲ್ಲಟರೆ ಮೊದ ಲಾದವರ ಹೆಸರಿನಂತೆ ರುದ್ರಟನ ಹೆಸರೆಂದು ಪುನಃ ಒತ್ತಿ ಹೇಳಬೇಕಾದುದಿಲ್ಲ.

Sanskrit Kavicharitre of T. G. Kale P. 56 | ಸುಭಾಷಿತಾವಳಿಯನ್ನು ಬರೆದ ವಲ್ಲಭದೇವನು ಇವನಲ್ಲ ಇವನು ಕುವಲಯಾನಂದ ವ್ಯಾಖ್ಯಾನಕಾರನಲ್ಲ, - Classical history of Sanskrit Literature P. 162 a Journal B- B. R A- S. Vol XVI. No. XLI P. 14- 20. • ಶಾಸನ ಶಕ ೧೧೫೧ Journal B. B. R. A S. Vol. X No. 29 Ins, VII I. 260