ಭಲ್ಲಟ ವಳಿಯಲ್ಲಿ ನಿಶಿದೀಪರ್ಕ' ಎಂದಿದೆ. ಹೀಗೆ ಇನ್ನೂ ದೊರೆಯುವುವು. ಭಲ್ಲಟಶತ ಕದ ಕೊನೆಯ ಶ್ಲೋಕವಾದ ಅಯಂ ವಾ ರಾಮೇಕೋ ನಿಲಯ ಇತಿ ರತ್ನಾಕರ ಇತಿ ೩ ೩ಭಿಷ್ಟಾ ತರಲಿತ ಮನೋಭಿರ್ಜಲನಿಧಿಃ | ಕ ಏವಂ ಜಾನೀತೇ ನಿಜಕರಪುಟೀ ಕೋಟರಗತಂ ಕ್ಷಣಾ ದೇವಂ ತಾಮ್ಯ ಮಿಮಕರಮಾಪಾಸ್ಯ ಮುನಿ | ಎಂಬುದು ಶಾರ್ಜಧರಪದ್ಧತಿಯಲ್ಲಿ ಮಾಲವರುದ್ರ'ನೆಂಬುವನ ಹೆಸರಿನಲ್ಲಿ ಹೇಳಲ್ಪ ತಿದೆ. $ ಅನೇಕ ಲಾಕ್ಷಣಿಕರು ಇವನ ಶತಕದ ಶ್ಲೋಕಗಳನ್ನು ಉದಾಹರಿಸಿ ಕೊಂಡಿರುವುದು ಈ ಶತಕದ ಪ್ರಾಶಸ್ತ್ರವನ್ನು ತೋರಿಸುತ್ತದೆ. ಈ ಶತಕವು ವಿವಿಧ ನೀತಿಗಳನ್ನು ತಿಳಿಸುವುದಾಗಿಯೂ ಪ್ರಾಪಂಚಿಕ ಜ್ಞಾನದಾಯಕವಾದು ದಾಗಿಯೂ ಸುಲಭಶೈಲಿಯುಳ್ಳದ್ದಾಗಿಯೂ ಇರುವುದು. ಉದಾಹರಣೆಗಾಗಿ ಕೆಲವು ಶ್ಲೋಕಗಳು. (೧) ಅತುಲೈಶ್ವರ್ಯಭೋಗಸಂಪನ್ನನಾಗಿ ಬಾಹ್ಯಾಡಂಬರನಾಮಶೀಲನಾಗಿ ಯಾರಿಗೂ ಯಾವ ವಿಧದಲ್ಲಿಯೂ ಉಪಕಾರಿಯಾಗದೆ ಸ್ವಾರ್ಥಪರನಾಗಿರುವವನ ಬಳಿಗೆ ಬಂದ ಆತನೊಬ್ಬನು ನಿರಾಶನಾಗಿ ಅನ್ಯಾಸದೇಶದಿಂದ ಹೇಳುವಿಕೆ- ಗ್ರಾಮಾಣೋ ಮಣಯೆ: ಹರಿರ್ಜಲಚರೋ ಲಕ್ಷ್ಮಿ ಪಯೋಮಾನುಷಿ ಮುಕ್ಘಾಃ ಸಿಕತಾಃ ಪ್ರವಾಳಲತಿಕಾ ಶೈವಾಲಮಂ ಭಃ ಸುಧು | ತಿರೇ ಕಲ್ಪಮಹೀರುಹಾ; ಕಿವಪರಂ ನಾಮಾ ಪಿ ರತಾ ಕರೋ ದೂರ ಕರ್ಣರಸಾಯನಂ ನಿಕಟತಷ್ಟಾಪಿ ನ್ಯೂ ಶಾಮ್ಯತಿ || ೫೦ || • ಎಳ್ಳೆ ಸಮುದ್ರನೆ ! ನಿಮ್ಮಲ್ಲಿರುವ ಕಲ್ಲುಗಳೇ ಅಮೂಲ್ಯರತ್ನ ಗಳು, ಮಹಾ ವಿಷ್ಣುವೇ ಜಲಚರನು, ಸೌಭಾಗ್ಯದಾಯಿನಿಯಾದ ಲಕ್ಷ್ಮಿಯೆ ನಿನ್ನ ಮಗಳು, ಮರಳುರಾಶಿಗಳೇ ಮುತ್ತುಗಳು, ಪಾಚಿಯೇ ಹವಳದ ಬಳ್ಳಿಗಳು, ನೀರೇ ಅಮೃತವು, ದಡದಲ್ಲಿ ಎಲ್ಲೆಲ್ಲಿಯೂ ಕಲ್ಪವೃಕಗಳೇ ! ಹೆಚ್ಚೆಕೆ ? ನಿನ್ನ ಹೆಸರು ಕೂಡಾ ರತ್ನಾಕರ ನೆಂದೆ ಹೇಳುವುದಾದರೂ ನಿನ್ನ ವಿಚಾರವು ಕೇವಲ ಕೇಳುವುದಕ್ಕೆ ಆನಂದವೇ ಹೊರ್ತು ದಾಹಗೊಂಡು ನಿನ್ನ ಬಳಿಗೆ ಬಂದವನ ನೀರಡಿಕೆಯನ್ನು ಅಡಗಿಸುವ ಯೋಗ್ಯತೆಯೂ ನಿನ್ನಲಿಲ್ಲ. (ಇಂತಹ ನಿನಗೆ ಇಷ್ಟು ಆಡಂಬರವೇಕೆ ?) $ ಶಾರ್ಜ ಧರಪದ್ದತಿ ಪು ೧೭೬ ಶೇ. ೧೦೯೧. - -- - -- - -
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.