ಶಕ] ಬಾಲಚಂದ್ರಸೂರಿ ೨೪೫ ಪಾಲ ತೇಜಪಾಲರನ್ನು ಕರೆಕಳುಹಿ ಅಮಾತ್ಯ ಪದವಿಯನಿತ್ತು ವಸ್ತು ಪಾಲನನ್ನು ಕ್ಯಾಂಬೆಗೆ ಸರ್ವಾಧಿಕಾರಿಯನ್ನಾಗಿ ನಿಯಮಿಸಿ ಬೀಳ್ಕೊಟ್ಟನು. ಅನಂತರ ವಸ್ತು ಪಾಲನು ಸಸೈನ್ಯನಾಗಿ ಹೊರಟು ತೊಂದರೆಯನ್ನು ಕೊಡುತ್ತಿದ್ದ ಭ್ರಗುಕಚ್ಛದ ಶಂಖನೆಂಬವನನ್ನು ಪರಾಜಿತನನ್ನಾಗಿಮಾಡಿ ಸುಖಸಂಕಥಾವಿನೋವದಿಂದಿರುತ್ತಿ ರಲು ಒಂದಾನೊಂದು ರಾತ್ರಿ ಸ್ವಪ್ನದಲ್ಲಿ ಧರ್ಮದೇವತೆಯು ಬಂದು ಅಮಾತ್ಯ ಶೇಖರ! ಕೃತಯುಗದಲ್ಲಿ ಚತುಷ್ಟಾದರೂಸಿಯಾಗಿದ್ದ ನಾನು ಈ ಕುಟಿಲಕಲಿ ಯಲ್ಲಿ ಏಕಪಾದಮಾತ್ರವಾಗಿರುವೆನು, ಪ್ರಬಲಪರಾಕ್ರಮಶಾಲಿಗಳಾಗಿದ್ದು ಈಗ ಸ್ಮೃತಿಶೇಷರಾಗಿರುವ ಮೂಲರಾಜ ಮತ್ತು ಸಿದ್ದರಾಜರು ಅತುಳ ವೈಭವದಿಂದ ರಾಜ್ಯವಾಳಿದರಾದರೂ ಧರ್ಮಕಾರೊತ್ಸುಕರಾಗಿ ಸೋಮೇಶ್ವರ ಯಾತ್ರೆಯನ್ನು ಮಾಡಿ ಶತ್ರುಂಜಯಕ್ಕೆ ಹನ್ನೆರಡು ಗ್ರಾಮಗಳನ್ನು ಉಂಬಳಿಕೊಟ್ಟಿರುವುದೂ ಮೆಯ ನಲಾದೇವಿಯು ಬಾಹುಲೋದದಲ್ಲಿ ತೆಗೆದುಕೊಳ್ಳುತ್ತಿದ್ದ ಸೋಮೆಶ್ವರ ಯಾತ್ರಿಕರ ತಲೆಗಂದಾಯವನ್ನು ಮನ್ನಣೆಮಾಡಿಸಿದುದೂ, ಕಾಲಕ್ರಮದಲ್ಲಿ ಶಿಥಿಲವಾಗಿ ಹೊಗಿದ್ದ ದೇವಾಲಯಗಳನ್ನು ಜೀರ್ಣೋದ್ಧಾರಮಾಡಿ ಕುಮಾರಪಾಲನು ಅನೇಕ ನೂತನ ದೇವಾಲಯಗಳನ್ನು ಸೋಮೆಶ್ವರ ಮತ್ತು ಕೇದಾರಗಳಲ್ಲಿ ಪ್ರತಿಷ್ಠಿಸಿದುದು ನೀನರಿತು ಹಾಗೆಯೇ ಆಚರಿಸಿ ಬಾಳುವನಾಗೆಂದು ಹೇಳಲು ಮರುದಿವಸ ಪ್ರಾತಃಕಾಲವೇ ಈ ಸಮಾಚಾರಗಳನ್ನು ತನ್ನ ಆಚಾರನಲ್ಲಿ ಬಿನ್ನವಿಸಿ ನೀರ ಧವಳನ ಅಪ್ಪಣೆಯನ್ನು ಹೊಂದಿ ರಾಜ್ಯಸೂತ್ರವನ್ನು ತಮ್ಮನಾದ ತೇಜಪಾಲನಿಗೆ ಒಪ್ಪಿಸಿ ಯಾತ್ರಾರ್ಥಿಯಾಗಿ ಹೊರಟನು. ಇವನ ಜತೆಯಲ್ಲಿ ನಾಲ್ಕು ಜನ ಸಾಮಂತ ರಾಜರು ಹೊರಟುದಲ್ಲದೆ ಲಾತ, ಗೌಡ, ಮರು, ಕಚ್ಛ, ದಾಹಲ' ಅವಂತಿ, ವಂಗದ ಸಂಘಪತಿಗಳೂ ಹೊರಟು ದಾರಿಯಲ್ಲಿ ದೊರೆತ ಜೀರ್ಣ ವಾಗಿರುವ ದೇವಾಲಯಗಳನ್ನು ಪುನಃ ಕಟ್ಟಿಸಿ ವಲಭಿ (ಈಗಣವಣ) ಪುರದ ಹತ್ತಿರ ಬಿಡಾರ ಮಾಡಿದರು. ವಿಜಯಸೇನಸೂರಿಯು ವಸ್ತು ಪಾಲನಿಗೆ ಶತ್ರುಂಜಯ ಪರ್ವತಮಾರ್ಗವನ್ನು ತೋರಿಕೊಡಲು ವಲಭೀಪುರದಿಂದ ಸಾದಲಿಪ್ತ ಪುರ ( ಈಗಣಪಾಲಿಟಾನ) ಕ್ಕೆ ಬಂದು ಪಾರ್ಶ್ವನಾಥನ ದರ್ಶನಲಾಭವನ್ನು ಹೊಂದಿ ಶತ್ರುಂಜಯಪರ್ವತವನ್ನೇರಿ ಕಪರ್ದಿಯಕ್ಷನನ್ನು ಸೇವಿಸಿ ಅಲ್ಲಿಂದ ಹೊರಟು ಆದಿನಾಥನನ್ನು ಅಷ್ಟವಿಧಾರ್ಚನೆಗಳಿಂದ ಪೂಜಿಸಿ ಸಾನಂದದಿಂದ ನರ್ತಿಸಿ ಅಲ್ಲಿಂದ ಪ್ರಭಾಸಪತನದ ಕಡೆ ಹೊರಟು ಕೈಯಮೇಳಾ ತೀರ್ಥದಲ್ಲಿ ಸ್ನಾ ತನಾಗಿ ಸೋಮೆ ಶ್ವರನನ್ನು ಪೂಜಿಸಿ ತುಲಾಭಾರದಿಂದ ಬ್ರಾಹ್ಮಣರನ್ನು ತುಷ್ಟಿಗೊಳಿಸಿ ಮುಂದೆ ಹೊರಟು ಗಿರಾರ್ ಪರ್ವತದ ತಪ್ಪಲಿನಲ್ಲಿ ತೇಜಪಾಲನಿಂದ ಕಟ್ಟಿಸಲ್ಪಟ್ಟು ದಾದ ತೇಜಪಾಲಪುರವನ್ನೂ ಕುಮಾರಸರಸ್ಸನ್ನೂ ನೋಡಿ ಹರ್ಷಿತನಾಗಿ ಆದಿನಾಥನನ್ನು ಅರ್ಚಿಸಿ ಪರ್ವತದ ಸಾನುಪ್ರದೇಶದಲ್ಲಿರುವ ನೆ'ಮಿನಾಥನನ್ನಾರಾಧಿಸಿ ಅಲ್ಲಿರುವ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.