ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಸಂಸ್ಕೃತಕವಿಚರಿತೆ ಬರುತ್ತದೆ. ಈ ಕೊಲಂಬೋ ನಗರವು ಈಗಣ ತಿರುವಾಂಕೂರಿನ [Triven- drum] ಉತ್ತರಕ್ಕೂ, ಶ್ರೀವಲ್ಲಭ ಅಥವಾ ತಿರುವಳ್ಳದ ದಕ್ಷಿಣಕ್ಕೂ ಇದ್ದು ದಾಗಿ ವರ್ಣಿತವಾಗಿದೆ. ಈ ವಿಚಾರವು (C ಆರ್ಯೆ! ಸಮಾದಿಷ್ಟೋsಸ್ಮಿ ಸಕಲಕಲಾಕುಶ ಲಸ್ಯ ಚಂದ್ರಕುಲ ಮಂಗಲಪ್ರದೀಪಸ್ಯ ಸಮಸ್ತ ಸಾಮಂತ ಶೇಖರೀ ಕ್ರಿಯಮಾಣ ಶಾಸನಸ್ಯ ವಿವಿಧ ಶಾಖಾವಲಂಬನ ಧರ್ಮತರುಮೂಲಕ೦ದಸ್ಯ ಪ್ರಣಯಿಾಜನ ಚಿಂತಾಮಣೇಃ ಕೋಲಂಬಸುರಪರಿಷ್ಕಾರಸ್ಯ ದೇವಸ್ಯ ರವಿವರ್ಮಣಃ” ಎಂಬ ಸೂತ್ರಧಾರನ ಹೇಳಿಕೆಯಿಂದ ವ್ಯಕ್ತವಾಗುತ್ತದೆ. ಇವನು ಪದ್ಮನಾಭನ ಆರಾಧಕನಾಗಿದ್ದು ರಾಜಕಾರನಿಪುಣನೂ, ಕವಿಪುಂಗ ವನೂ, ರಣಧೀರನೂ ಆಗಿದ್ದು ದಾಗಿ ತಿಳಿಯಬರುವುದರಿಂದ ಇವನು ಈಗಣ ತಿರು ವಾಂಕೂರು [Travancore] ರಾಜರ ಪೂರ್ವಿಕನಾಗಿದ್ದಿರಬಹುದಾಗಿ ತೋರು ಇದೆ. ಇವನು ಪಾಂಡ್ಯರಾಜರನ್ನು ಜಯಿಸಿ ತನ್ನ ರಾಜ್ಯವನ್ನು ಕಂಚಿಯ ವರೆಗೂ ವಿಸ್ತರಿಸಿದ್ದು ದಾಗಿ ಹೇಳಲ್ಪಟ್ಟಿದೆ. ಗ್ರಂಥ-ಇವನು (ಪ್ರದ್ಯುಮ್ಯಾ ಭ್ಯುದಯ”ಎಂಬ ಐದು ಅ೦ಕಗಳುಳ್ಳ ನಾಟಕವನ್ನು ಬರೆದಿರುವನು. ಇವನ ಕಪಿತಾ ಧಾಟಿಯನ್ನು ಪರಿಶೀಲಿಸಿದರೆ ಶ್ರೀ ಹರ್ಷನ ನಾಗಾನಂದ ಮೊದಲಾದ ರೂಪಕಗಳಿಗಿಂತ ಯಾವನಿಧದಲ್ಲಿಯೂ ಕದಿ ಮೆಯಾಗಿರುವಂತೆ ತೋರುವುದಿಲ್ಲ. ಲೋಕಹಿತೈಷಿಯಾದ ನಾರದ ಮತ್ತು ಕೃಷ್ಣರಸಂಚಿಗೆ ಒಳಪಟ್ಟ ಸಕಲಕಲಾ ಭಿಜ್ಞನಾದ ಭದ್ರನಟನೆಂಬ ಗಾಯಕನೋವ್ವನು ಪ್ರದ್ಯುಮ್ಮ, ಗದ, ಸಾಂಬರೊಡನೆ ವೇಷಾಂತರದಿಂದ ವಜಪುರಕ್ಕೆ ಬಂದು ರಾಜನನಗಳಾದ ಪ್ರಭಾವತಿಗೆ ಸಂಗಿತರಾ ಸ್ಯವನ್ನು ಕಲಿಸುತ್ತ, ಒಂದಾನೊಂದುದಿವಸ ಅನುಪಮಸುಂದರನಾದ ಪ್ರದ್ಯುಮ್ಮನ ಚಿತ್ರಪಟವನ್ನು ಪ್ರಭಾವತಿಗೆ ತೋರಿ, ಅವಳನ್ನು ಸೌಂದಯ್ಯಮುಗ್ನಳನ್ನಾಗಿಮಾಡಿ, ಪ್ರದ್ಯುಮ್ಮನು ಪ್ರಭಾವತಿಯನ್ನು ನೋಡಲು ರಂಭಾಭಿಸರಣವೆಂಬ ರೂಪಕವನ್ನು ಕಲ್ಪಿಸಿ, ಇವರಿಬ್ಬರಿಗೂ ಗಾಂಧರ್ವವಿವಾಹವಾದನಂತರ ಪ್ರಭಾವತಿಯಕೊರಿಕೆ ಯಂತೆ ತನ್ನೊಡನೆ ಕರೆತಂದಿದ್ದ ಗದ ಮತ್ತು ಸಾಂಬರಿಗೆ ಚಂದ್ರಾವತಿ ಮತ್ತು ಗುಣವತಿಯರ ಪಾಣಿಗ್ರಹಣವನ್ನು ಮಾಡಿಸಿದನಂತರ ಸಂಧಿಸಿದ ಕೊಳಗುಳದಲ್ಲಿ ದಾನವೇಂದ್ರನಾದ ವಜ್ರನಾಭನು ಪ್ರದ್ಯುಮ್ಮನಿಂದ ಹತನಾಗಲು ನಾರದ ಕೃಷ್ಣ ರೆಲ್ಲರೂ ಸೇರಿ ಪ್ರದ್ಯುಮ್ಮನಿಗೆ ಪಟ್ಟಾಭಿಷೇಕವನ್ನು ಮಾಡಿ ಸಂತಸಗೊಂಡರೆಂಬುದೇ ಕಥಾವಸ್ತು. ಇದನ್ನು ಹರಿವಂಶದಿಂದ ಆರಿಸಿಕೊಂಡಿರುವನು. ಮಾದರಿಗಾಗಿ ಕೆಲವನ್ನು ಬರೆಯುವೆವು.