ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ) ವೆಂಕಟನಾಥ


-

ಎಲ್ಲಿಯೋ ಹಠಾತ್ತಾಗಿ ತುಂಗಭದ್ರಾ ತೀರಕ್ಕೆ ಇರ್ವರೂ ಬಂದು ಕಾಕತಾಳನ್ಯಾಯ ದಿಂದ ಪರಸ್ಪರ ಸಲ್ಲಾಸ ಮಾಡುತ್ತಿದ್ದ ಹಾಗೂ, ಅಲ್ಲಿಯ ರಾಜನಿಗೆ ಇವರಿರ್ವರೂ ನೂತನರೆಂದೂ ಹಿಂದೆ ಯಾವಾಗಲೂ ನೋಡಿರಲಿಲ್ಲವೆಂದೂ ಸಂನ್ಯಾ ಸಮಂ ಕೊಂಡಿರುವ ಮತ್ತು ಗಂಗಾಯಾತ್ರಾಭಿಲಾಷಿಯಾಗಿರುವ ವಿದ್ಯಾರಣ್ಯರಿಗೆ ವೆಂಕಟ ನಾಥನ ದರ್ಶನವು ಹಠಾತ್ತಾದುದಾಗಿ ಬೋಧೆಯಾಗುತ್ತದೆ. ಎರಡನೆಯದರಲ್ಲಿ.-ಸಂನ್ಯಾಸಿಗಳಾದ ವಿದ್ಯಾರಣ್ಯರು ರಾಜ್ಯಸೂತ್ರವನ್ನು ಕೈಗೊಂಡುದು ಆಶ್ರಮಧರ್ಮಕ್ಕೆ ಗೌಣವೆಂದೂ, ಕೇವಲ ವಿರಕ್ತರಾಗಿದ್ದ ವೇದಾಂತ ದೇಶಿಕನಿಗೆ "ತಮ್ಮ ರಾಜನ ಮೂಲಕ ಉಂಛವೃತ್ತಿಯ ಕಾರ್ಸಣ್ಯ ವನ್ನು ನೀಗಿಸುವುದಾಗಿ ಬರೆದ ವಿಚಾರವು ಅಲೌಕಿಕವೆಂದೂ ಹೇಳಲಾಗು ಇದೆ. ಇವೆರಡರ ಸಮ್ಯಕ್ಷರಿಶೀಲನದಿಂದಲೂ ಈ ಕೆಳಗೆ ಹೇಳುವ ವಿಚಾರ ಗಳಿಂದಲೂ ವೆಂಕಟನಾಥನಿಗೂ ವಿದ್ಯಾರಣ್ಯರಿಗೂ ಪರಸ್ಪರ ಯಾವಸಂಬಂಧವೂ ಇಲ್ಲವೆಂಬುದು ಸ್ಪಷ್ಟ ಪಡುತ್ತದೆ. ವಿದ್ಯಾರಣ್ಯರ ಗುರುಗಳ ಹೆಸರು ಸರ್ವಜ್ಞ ವಿಷ್ಣು ಯೆಂದು ಹೇಳಿದೆ. ವೆಂಕಟನಾಥನ ವಿದ್ಯಾಗುರುಗಳು ಅವನ ಸೋದರ ಮಾವಂದಿರಾದ ಆತ್ರೇಯ ರಾಮಾನುಜರೆಂದಿದೆ. ಪರಸ್ಪರ ಮೈತ್ರಿಯುಂಟಾಗ ಬೇಕಾದರೆ ಬಾಲ್ಯಾರಭ್ಯ ಇಬ್ಬರೂ ಒಂದೇ ಸ್ಥಳ, ಶಾಲೆ, ಗುರು ಅಥವಾ ಮತ್ತಾವು ದಾದರೂ ಕಾರಣಾಂತರಗಳಿ೦ದ ಕಲೆತುದಾಗಿರಬೇಕು. ಹಾಗೆ ಇವರಿಶ್ವರೂ ಸೇರಿದುದಾದ ವಿಚಾರವೆಲ್ಲಿಯೂ ಹೇಳಿರುವಂತೆ ಕಂಡುಬರುವುದಿಲ್ಲ. ವಿದ್ಯಾರಣ್ಯರು ತಮ್ಮ ಬಾಲ್ಯದಲ್ಲಿ ಒಂದುವೇಳೆ ಕಂಚಿಗೆ ಬಂದು ಆತ್ರೇಯ ರಾಮಾನುಜರ ಬಳಿ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ವಿಶೇಷ ವಿದ್ಯಾಭ್ಯಾಸಕ್ಕಾಗಿ ಸರ್ವಜ್ಞ ವಿಷ್ಣು ವಿನ ಬಳಿಗೆ ಹೋಗಿರಬಹುದೆನ್ನುವುದಾದರೆ ಹಾಗೆ ಹೇಳುವ ಪ್ರಮಾಣ ಗ್ರಂಥ ಗಳಾವುವು ? ಹಾಗೆ ಹೋಗಿದ್ದರೆ ತಮ್ಮ ಗ್ರಂಥಗಳಲ್ಲಿ ಎಲ್ಲಿಯಾದರೂ ತಮ್ಮ ತಮ್ಮ ವಿದ್ಯಾಬೋಧಕರ ಹೆಸರನ್ನು ಹೇಳುತ್ತಿದ್ದರೆಂದೂ ಅಥವಾ ವೇದಾಂತ ದೇಶಿಕನು ತಮ್ಮ ಆಚಾರರಾದ ಆತ್ರೇಯ ರಾಮಾನುಜರನ್ನು ಹೇಳುವಾವಸರದಲ್ಲಿ ವಿದ್ಯಾರಣ್ಯರ ಸಹಪಾಠಿತ್ವವನ್ನು ಕುರಿತು ಹೇಳದೆ ಇರುತ್ತಿರಲಿಲ್ಲವೆಂದೂ ನಮ ಗೆನಿಸುತ್ತದೆ. ಇದಲ್ಲದೆ ವಿದ್ಯಾರಣ್ಯರ ಭಾಷ್ಯಾದಿ ಗ್ರಂಥಗಳಲ್ಲಿ ದೇಶಿಕನ ಹೆಸರಾಗಲೀ ದೇಶಿಕ ಕೃತಗ್ರಂಥಗಳಲ್ಲಿ ವಿದ್ಯಾರಣ್ಯರ ಹೆಸರಾಗಲಿ ಹೇಳಿರುವಂತೆ ಎಲ್ಲಿಯೂ ಕಾಣಬರುವುದಿಲ್ಲ. ವಿದ್ಯಾರಣ್ಯರು ವಿಜಯನಗರದ ಅರಸರಲ್ಲಿ ಮಂತ್ರಿ ಪದವಿಯನ್ನು ವಹಿಸಿದ್ದು ದಾಗಿ ಹೇಳುವ ಚಾರಿತ್ರಿಕ ಗ್ರಂಥಗಳು ಹೇರಳವಾಗಿ ದೊರೆ ಯುತ್ತವೆ. ಇವರ ಭಾಷ್ಯಾದಿ ಗ್ರಂಥಗಳಲ್ಲಿ:- CC ಇತಿ 'ವಿದ್ಯಾತೀರ್ಥ ಮಹೇಶ್ವರಾಪರಾವತಾರ ಶ್ರೀಮದ್ರಾಜಾಧಿರಾಜ ಪರಮೆಶ್ವರ ಶ್ರೀವೀರಬುಕ್ಕಮಹಾರಾಜಾಜ್ಞಾ ಪರಿಪಾಲಕ ಶ್ರೀಮಾಧವಾಚಾರ್