ಶಕ) ವೆಂಕಟನಾಥ ೨೮೩ CCಬಂದೀಕುರ್ಯುಟವಸತಿಯೋ ಮಾಭವಂಠಂ ಕಿಂತು ಎಂಬುದು ಎಷ್ಟು ಸೊಗಸಾಗಿರುವುದು ! ಮೇಘಸಂದೇಶದಲ್ಲಿ ಹೀಗೆ ಹೇಳದೆ ಕವಿಯು ಮೇಘನಿಗೆ ಅನೇಕಾನೇಕ ಸುಂದರನೋಟಗಳನ್ನು ಹೇಳಿರುವನಾದರೂ ಅದನ್ನನುಭವಿಸುವುದರಿಂದುಂಟಾಗುವ ಕಾಲವಿಳಂಬವನ್ನು ಸೂಚಿಸದೆ:- ಮಂದಾಯಂತೇನಖಲುಸುಹೃದಾ ಮುಳ್ಳು ಪೇತಾರ್ಧಕೃತಾ? ಎಂದು ಸಾಧಾರಣವಾಗಿ ಹೇಳಿ ಜಾಗ್ರತೆಯಾಗಿ ಹೊರಡಬೇಕಾದ ಅಥವಾ ವಿಹರಿಸಬೇಕಾದ ವಿವೇಚನೆಯನ್ನು ಮೇಘನಿಗೇ ಬಿಟ್ಟಿರುವನು. ಅನಂತರ ಎಲೈ! ಹಂಸವೇ! ಅಲ್ಲಿಂದ ಹೊರಟು ತುಂಡೀರಮಂಡಲದ ಎಲ್ಲೆಯನ್ನು ಹೊಕ್ಕು ಭೂವಲ ಯದಂತಿರುವ ಕಾಂಚೀನಗರವನ್ನು ನೋಡಿ ಆನಂದಿಸಿ ಅಲ್ಲಿ ಪ್ರವಹಿಸುತ್ತಿರುವ ಸರ ಸ್ವತೀ ನದಿಯಲ್ಲಿ ಮಿಂದು ಶುದ್ಧಾಂತಃಕರಣನಾಗಿ ಪರಾಪರವಸ್ತುವಾದ ವರದ ರಾಜನನ್ನು ಸೇವಿಸುವನಾಗು. ಅಲ್ಲಿಂದ ಚೋಳ ಮತ್ತು ಪಾಂಡ್ಯದೇಶದ ಮಧ ದಲ್ಲಿರುವ ಮಹಾ ಅಡವಿಯನ್ನು ನಿಶ್ಯಬ್ದವಾಗಿ ದಾಟಿ ಚೋಳದೇಶವನ್ನು ಹೊಕ್ಕು ಕುರ್ವನ್ನಾ ನಾಕುಸುಮರಜಸಾಯಾಚಿತ್ರ೦ವಿತಾನಂ ಪೂಗಾರ ಮೃದುವಿಚಲರ್ಯ ಪಾಳಿಕಾಚಾಮರಾಣಿ ಪಾ ದನ್ಯಾ ಸಕ್ಷ ಮನವಕಿರ್ರಕಾ ತಲಪುಷ್ಪ ಜಾಲೆ: ಪ್ರಾಯೋವಾಯುಃ ಅಪರಿಜನನಿಧಿಂಪಂಚಬುಣಸ್ಯ ಧತ್ತೇ | ಎಂಬಂತೆ ಮದನನ ಮಿತ್ರನಾದ ದಕ್ಷಿಣಾಪಥಸಮಾರಣನು ರಸ್ತೆಯಲ್ಲಿ ಹೂಗಳನ್ನು ಎರಚುವುದರಿಂದಲೂ ಬೀಸಣಿಗೆಗಳಿಂದಲೂ ಛತ್ರಿಗಳೊಡನೆ ನಿನಾ ಗಮನವನ್ನು ನಿರೀಕ್ಷಿಸುತ್ತಿರುವನು. ಇಂತಹನಿಂದ ನೀನು ಸತ್ಕರಿಸಲ್ಪಡುವನಾಗು, ಅಲ್ಲದೆ ಮಹಾವೈಭವದಿಂದ ಹರಿಯುತ್ತಿರುವ ಕಾವೇರಿ, ದೊಡ್ಡ ದೊಡ್ಡ ಅಡಿಕೆಮರ ಗಳಿಂದ ಕೂಡಿದ ತೋಪುಗಳು ಇವುಗಳೆಲ್ಲವೂ ನಿನ್ನ ಕಣ್ಣಿಗೆ ಹಬ್ಬವನ್ನುಂಟ ಮಾಡುವುವಾಗಿರುವುವು. ಆದುದರಿಂದ ಎಲೆ! ಹಂಸ! ಸತ್ಯೋತ್ಸಂಗಾತೃ ಪರಿಮರುತಾ ಸಾಗರನೀಯಮಾನಾಂ ಭದ್ರಾಲಾಪೆರ್ವಿಹಿತಕುಶಲಾಂ ತಾರಾನಾಂಜಾನಾಂ ಯಾಮಸ್ಯ ನಾ ಸರಸಕುಹಳೀ ಪತ್ರಪಾರ್ನಿಶಾಂತೇ ಮಂದಸ್ಮರಂ ಮಧುಪರಿಮಿ ರ್ವಯಂತೀವಪೂಗಾಃ || ಎಂಬಂತೆ ಮೃದುಧಾಟಿಯಿಂದ ಪ್ರವಹಿಸುತ್ತಿರುವ ಸಹ್ಯಾದ್ರಿಜಾತಳಾದ ಕಾವೇರಿಯು ವಯೋವೃದ್ಧನೊಬ್ಬನ ಜತೆಯಲ್ಲಿ, ಹುಟ್ಟಿದ ಮನೆಯಿಂದ ಗಂಡನ ಮನೆಗೆ ಹೋಗುವ ವಧೂಟಿಯಂತೆ, ಅಥವಾ ಬ್ರಾಹ್ಮಣಾಶೀದ್ವಾದಮಂ ಕೊಂಡು
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.