ಸಂಸ್ಕೃತಕವಿಚರಿತೆ [ಕ್ರಿಸ್ತ ನೋಡುವಳು. ಅನಂತರ ನಿಧಾನವಾಗಿ ನೀನು ಬಂದಕಾರವನ್ನು ಅವಳೊಡನೆ ಹೇಳಿ ಶ್ರೀರಾಮನು ಸಸ್ಪೆನ್ನಾಗಿ ಈಗಲೇ ಹೊರಟುಬಂದು ರಾಕ್ಷಸರನ್ನು ಕೊಂದು ನಿನ್ನನ್ನು ಖಂಡಿತವಾಗಿಯೂ ಕರೆದುಕೊಂಡು ಹೋಗುವವನಾಗಿದಾನೆಂದು ತಿಳಿಸು ವವನಾಗು. ಹಾಗೆ ನೀನು ಎಲ್ಲಾ ವಿಚಾರಗಳನ್ನೂ ತಿಳಿಸುವಮೊದಲು ಹನುಮನು:- ವೈದೇಹಿ! ಕುಶಲೀ ರಾಮಾಂಚ ಕೌಶಲಮಬ್ರವೀತ್ ಎಂದು ಹೇಳಿದಂತೆ, ಭವತೀಭಾಗಧೇಯೇನಜೀರ್ವ ಕಲ್ಯಾಣೋತ್ಸಾಂ ಕುಶಲಮನಘಃ ಕೋಶಲೇಂದ್ರೋನುಯ೦ಕ್ಕೆ || ಎಂಬಂತೆ ಈಗಲೂ ಶ್ರೀರಾಮನು ಕುಶಲನಾಗಿರುವನೆಂಬುದನ್ನು ಮರೆಯದೆ ಹೇಳು ಆಗ ಅವಳಿಗೆ ಇತರ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವು ಹುಟ್ಟುವುದು. ಆದುದರಿಂದ ನೀನೂ ಹಾಗೆ ಮಾಡುವನಾಗು ಎಂದು ಹೇಳಿ ದೌತ್ಯಸಂಭಾವನಾರೂಪವಾದ:- ಸೈರಂಲೋಕಾಚರನಿಖಿರ್ಲಾಸೌಮ್ಯಲಕ್ವವಿಷ್ಣು : ಸರ್ವಾಕಾರೆದನುಗುಣಯಾಸೇವಿತೋರಾಜಹಂಸ್ಕಾ: || ಎಲೆ ಹಂಸವೇ! ನೀನು ಹೀಗೆ ಸಮಸ್ತಲೋಕಗಳನ್ನು ಸಂಚರಿಸುವನಾಗಿ ವಿಷ್ಣುವು ಹೇಗೆ ಲಕ್ಷ್ಮಿಯಿಂದ ಯಾವಾಗಲೂ ಸೇವಿಸಲ್ಪಡುತ್ತಿರುವನೋ ಹಾಗೆ ನೀನೂ ಯಾವಾಗಲೂ ರಾಜಹಂಸಿಯಿಂದ ಸೇವಿಸಲ್ಪಡುವನಾಗುತ್ತಿರು ಎಂದು ಮಂಗಳಾಶಾಸನ ಮಾಡಿ ಕಾವ್ಯವನ್ನು ಮುಗಿಸಿರುವನು. ಯಕ್ಷನಹೇಳಿಕೆಯಲ್ಲಿ ಇಷ್ಟು ಖಂಡಿತವಿಲ್ಲ. ಅದು ನಿಷೇಧಾರ್ಥದಲ್ಲಿ ಹೇಳಿದೆ. ನಾಯಕನು ವಿರಹ ದುಃಖದಿಂದ ಬಳಲಿದವನಾದುದರಿಂದ:- ಮಾಭೂದೇವಂ ಕ್ಷಣಮಪಿಚತೇ ವಿದ್ಯುತಾವಿಪ್ರಯೋಗಃ || ಎಂದು ಹೇಳಿ ಕಾವ್ಯವನ್ನು ಮುಗಿಸಿರುವನು. ಸಂಕಲ್ಪ ಸೂರೋದಯ:-ಇದರಲ್ಲಿ ಹತ್ತು ಅಂಕಗಳಿರುವುವು. ವೆಂಕಟ ನಾಥನು ಕೃಷ್ಣ ಮಿಶನ ಪ್ರಬೋಧಚಂದ್ರೋದಯ ನಾಟಕವನ್ನು ನೋಡಿ ಭಿನ ಭಿನ್ನ ಮನೋವೃತ್ತಿಯ ಜನರನ್ನು ಭಿನ್ನ ಭಿನ್ನ ರಸೋತ್ಪಾದನದಿಂದ ಏಕಕಾಲದಲ್ಲಿ ಸಂತೋಷಗೊಳಿಸುವುದು ನಾಟಕವೆಂದೂ | 1 ನಾಟ್ಯಂ ಭಿನ್ನ ರುಚೇರ್ಜನಸ್ಯ ಬಹುಧಾಪೈಕಂಸಮಾರಾಧನಂ ೧ ಎಂಬ ಕಾಳಿದಾಸೋಕ್ತಿಯನ್ನು ನೆನೆದು ಅಂತಹುದಾದ ಒಂದು ನಾಟಕ ವನ್ನು ಬರೆಯುವುದರ ಮೂಲಕ ವಿಶಿಷ್ಟಾದೈತಪ್ರಕ್ರಿಯೆಗಳನ್ನು ಸಕಲರ ಅವಗಾ ಹನೆಗೆ ತರಲುಜ್ಜುಗಿಸಿ ಹಾಗೆಯೇ ನಾಟಕವನ್ನು ಬರೆದು ಅದನ್ನು ಸಂಕಲ್ಪ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.