ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ಅಭಿನಂದ (೧)


.

. ತ್ರಿಪುರವಧಾದೇವ ಗತಾ ಮುಲ್ಲಾ ಸಮುಮಾ ಸಮಸ್ತ ದೇವನತಾಂ | ಶೃಂಗಾರತಿಲಕವಿದಿನಾ ಪುನರಪಿರುದ್ರ ಪ್ರಸಾದಯತಿ || ಎಂಬ ಆರ್ಯಾಶೋಕದಿಂದ ಸೂಚಿತವಾಗುತ್ತದೆ. (( ತ್ರಿಪುರವಧಾ ಎಂಬ ಹೆಸರಿನಿಂದ ಕಾವ್ಯವೆಂದೂಹಿಸಬಹುದಾಗಿದೆ. ಶೃಂಗಾರತಿಲಕಕಾರರು ರುದ್ರಟ ನೆಂದು ಬಹುಜನರು ಭವಿಸುವರು. ಕೆಲವು ಪುಸ್ತಕಗಳಲ್ಲಿ ಹಾಗೂ ಬರೆಯ ಲ್ಪಟ್ಟಿರುವುದಾಗಿ ಕಂಡುಬರುತ್ತದೆ. ಆದರೆ ಮೇಲಣ ಶ್ಲೋಕದಿಂದ ರುದ್ರಟನಲ್ಲ ವೆಂಬುದು ಸ್ಪಷ್ಟವಾಗುವುದು. ಇದರ ಟೀಕಾಕಾರನಾದ ಗೊಪಾಲಭಟ್ಟನು ಟೀಕಾ ಪ್ರಾರಂಭದಲ್ಲಿ, ಆಶೀರೂಪಂ ಮಂಗಳಂ ನಿಬದ್ಧಾತಿ ರುದ್ರಕವಿ: ” ಎಂದು ಹೇಳಿರುವುದರಿಂದಲೂ ಶೃಂಗಾರತಿಲಕ ಗ್ರಂಥಾರಂಭದಲ್ಲಿ, “ ಶಿ' ರುದ್ರಭಟ್ಟ ಕೃತಂ ಶೃಂಗಾರತಿಲಕಂ ” ಎಂದೂ, ಗ್ರಂಥಾಂತ್ಯದಲ್ಲಿ, “ ಇತಿ ಶ್ರೀರುದ್ರಭಟ್ಟ ವಿರಚಿತೇ ಶೃಂಗಾರತಿಲಕಾಭಿಧಾನೇ ಕಾವ್ಯರಸಾಲಂಕಾರೇ ” ಎಂದೂ ಇರುವುದರಿಂದ ರುದು (ಭಟ್ಟ) ನೆಂಬವನೇ ಶೃಂಗಾರತಿಲಕಗ್ರಂಥಕಾರನೆಂದೂ ರುದ್ರಟನಲ್ಲವೆಂದೂ ಖಂಡಿತವಾಗುವುದು. ಶೃಂಗಾರತಿಲಕದಲ್ಲಿ (೧) ಸಂಭೋಗಶೃಂಗಾರ, (೨) ವಿಪ್ರಲಂಭಶೃಂಗಾರ (೩) ಹಾಸ್ಯಾದಿರಸನಿರೂಪಣವೆಂದು ಮೂರು ಪರಿಚ್ಛೇದಗಳಿರುವುವು. ಇದರ ಶ್ಲೋಕಗಳು ಶಾರ್ಙ್ಗಧರಪದ್ದತಿಯಲ್ಲಿಯೂ ಸೂಕ್ತಿಮುಕ್ತಾವಳಿಯಲ್ಲಿಯೂ ಸಾಹಿತ್ಯದರ್ಪಣದಲ್ಲಿಯೂ ಕಂಡುಬರುವುವು. ಇವನ ಕವಿತಾಧೋರಣೆಯು ಸುಲಭವಾದುದಾಗಿ ಹೃದಯಂಗಮವಾಗಿರುವುದು. ಇದರ ಪ್ರಾರಂಭ ಶ್ಲೋಕವು ಹೀಗಿರುವುದು.. ಶೃಂಗಾರೀ ಗಿರಿಜಾನನೇ ಸಕರು ರತ್ನಾಂ ವವೀರಃ ಸ್ಮರೇ ಭೀಭತ್ತೋsಸ್ಥಿಭಿರುಳೇ ಚ ಭಯಕನೂರ್ತಾದ್ಭುತಸ್ತು೦ಗಯಾ | ರೌದೊ ದಕ್ಷ ವಿಮರ್ದನೇ ಚ ಇರ್ಸನ್ನ ಗ್ರ: ಪ್ರಶಾಂತರಾ ದಿತ್ತಂ ಸರ್ವರಸಾಶ್ರಯಃ ಪಶುಪತಿರ್ಭಯಾ ತಾಂ ಭೂತಯೇ || ಗೋಪಾಲಭಟ್ಟನು ಬರೆದಿರುವ ಇದರ ಟೀಕೆಗೆ : ರಸತರಂಗಿಣೀ ” ಎಂದು ಹೆಸರು, ಕವಿಯು ತನ್ನ ಗ್ರಂಥವಿಚಾರದಲ್ಲಿ ಹೀಗೆ ಹೇಳಿರುವನು. ಶೃಂಗಾರತಿಲಕಾ ನಾಮ ಗ್ರಂಥೋsಯಂ ಗ್ರಫಿತೋ ಮಯಾ ವತ್ರತ್ರಯೇ ನಿಷೇವಂತು ಕವಯಃ ಕಾಮಿನತ್ತ ಯೇ ||