ಸಂಸ್ಕೃತಕಏಚರಿತ (ಕ್ರಿಸ್ತ ಪ್ರೊ|| ಶೇಷಗಿರಿಶಾಸ್ತ್ರಿಗಳು ಮೇಲೆ ಹೇಳಿದ ಅರಸುಮಗ ಸಿ೦ಗಪ್ಪನಾಯ ಕನು ಸರ್ವಜ್ಞ ಸಿಂಗಮನಾಯುಡು ಅಥವಾ ರಸಾರ್ಣವಸುಧಾಕರ' ವನ್ನು ಬರೆದ ಸಿಂಹಭೂಪಾಲನಾಗಿರಬೇಕೆಂದೂ, ಅವನು ಈಗಣ ವೆಂಕಟಗಿರಿರಾಜರ ಮೂಲ ಪುರುಷನೆಂದೂ, ಕ್ರಿ. ಶ. ೧೩೩೦ರಲ್ಲಿದ್ದನೆಂದೂ, ವೇದಾಂತದೇಶಿಕರ ಮಕ್ಕಳಾದ ನಯನಾರಾಚಾರರವರು ವಾದಕ್ಕಾಗಿ ಈತನ ಸಭೆಗೆ ಹೋಗಿದ್ದರೆಂದೂ ಒಕ್ಕಣಿ ಸಿರುವರು. ರಾವಬಹದ್ದೂರ ವೀರೇಶಲಿಂಗಂಪಂತಲುಯವರು ಅಂಧಕವಿ ಶ್ರೀನಾಥನ ಕಾಲವನ್ನು ನಿರ್ಣಯಿಸುವುದರಲ್ಲಿ ಈ ಸರ್ರಜ್ಞಸಿಂಗಮನಾಯುಡುವಿನ ಕಾಲವನ್ನು ವಿಮರ್ಶಿಸಿ ಕ್ರಿ ಶ ೧೪೨೨-೧೪೪೭ರವರೆಗೆ ವಿಜಯನಗರದಲ್ಲಾಳಿದ ಪ್ರೌಢದೇವ ರಾಯನ ಸಮಕಾಲೀನನೆಂದಿರುವರು. ಅಲ್ಲದೆ ಇವನು ಭತಾಲನಾಯುಡುವಿನ ಅಥವಾ ಜೀವರಡ್ಡಿಯ ಹತ್ತನೆಯ ತಲೆಯವನೆಂದೂ, ವೆಂಕಟಗಿರಿಯ ಅರಸುಗಳ ಮೂಲಪುರುಷನೆಂದೂ, ಅವನು (ಚಮತ್ಕಾರಚಂದ್ರಿಕಾ' ಎಂಬ ಲಕ್ಷಣಶಾಸ್ತ್ರವನ್ನು ಬರೆದಿರುವುದಾಗಿಯೂ ಅದನ್ನೇ ಸಿಂಗಭೂಪಾಲೀಯವೆಂದು ಕರೆಯುವುದಾಗಿಯೂ ಹೇಳಿರುವರು. ಇವರ ಹೇಳಿಕೆಯಂತೆ ಶ್ರೀನಾಥನು ರಾಜಮಹೇಂದ್ರದಲ್ಲಿ ಆಳಿದ ವೇಮಾರೆಡ್ಡಿಯ ಆಸ್ಥಾನ ಪಂಡಿತನೆಂದೂ, ಭೀಮವರದಲ್ಲಿನ ವೇಮರಡ್ಡಿಯ ಶಾಸನವು ಕ್ರಿ. ಶ. ೧೪೩೪ ಎಂದು ಕಾಲವು ಹೇಳಿರುವುದಾಗಿ ಗೊತ್ತಾಗುತ್ತದೆ. ಈ ಶ್ರೀನಾಥನೇ ಸರ್ವಜ್ಞ ಸಿಂಗಮ ನಾಯುಡುವಿನ ಆಸ್ಥಾನಕ್ಕೆ ಹೋಗಿ ಅಲ್ಲಿ ಕವಿಸಾರಭೌಮನೆಂಬ ಬಿರುದನ್ನು ಗಳಿಸಿಕೊಂಡು ಬಂದಂತೆಯೂ ಹೇಳಬೇಕಾಗು ತದೆ, ಅಂಧ ಭಾಗವತಕಾರನಾದ ಬರ , ಪೋತರಾಜು ಸರ್ವಜ್ಞ ಸಿಂಗನ ನಾಯುಡುವಿನ ಆಸ್ಥಾನಪಂಡಿತನು, ಮತ್ತು ಶ್ರೀನಾಥನ ಮೈದುನನು. ಮಹಾವಾಖ್ಯಾತೃವಾದ ಮಲ್ಲಿನಾಥನು ಸರ್ವಜ್ಞ ಸಿಂಗಮನಾಯುಡುವಿನ ಆಸ್ಥಾನಕ್ಕೆ ಹೋಗಿದ್ದು ದಾಗಿಯೂ, ಮಲ್ಲಿನಾಥನು ಕ್ರಿ. ಶ. ೧೫ನೆಯ ಶತಮಾನ ದವನೆಂದು ಡಾ|| ಭಂಡಾರಕರ ಮತವಿರುವುದು ಮೇಲೆ ಹೇಳಿದ ಕಾರಣಗಳಿಂದ ರಸಾರ್ಣವಸುಧಾಕರ'ಕಾರ ಅಥವಾ ಸಿಂಗ ಭೂಪಾಲೀಯನು ಕ್ರಿ. ಶ. ೧೩೬೯ರವರೆಗೆ ಇದ್ದ ಶ್ರೀವೇದಾಂತಾಚಾರೈರವರ ಸಮ ಕಾಲೀನನಾಗಿರನೆಂದೂ ಪ್ರೊ|| ಶೇಷಗಿರಿಶಾಸ್ತ್ರಿಗಳ ಹೇಳಿಕೆಯು ಸಮಂಜಸವಾಗ ದೆಂದೂ ಹೇಳಬೇಕಾಗುತ್ತದೆ. ಹಾಗಾದರೆ ಕಥೆಯಲ್ಲಿ ಹೇಳಲ್ಪಡುವ ಸಿಂಗಪ್ಪ ನಾಯಕನಾರೆಂಬುದನ್ನು ಕಂಡುಹಿಡಿಯಬೇಕಾಗಿದೆ, ರಸಾರ್ಣವಸುಧಾಕರದ ಮೊದಲನೆಯ ಭಾಗದಲ್ಲಿ ಹೇಳಿರುವ ಸಿಂಹಭೂಪಾಲನ ವಂಶಾವಳಿಯನ್ನು ಪರಿಕ್ಷಿಸಿ ಹೇಳುವುದು ಅಪ್ರಾಸಂಗಿಕವಾಗದು
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.