ವಿಶ್ವನಾಥ (³) G೧೫ ವಿಶ್ವ ನಾ ಹ (೨) ಇವನು ಬ್ರಾಹ್ಮಣನು. ಚಂದ್ರಶೇಖರನ ಮಗನು. ಇವನಿಗೆ ಕವಿರಾಜ ನೆಂಬ ಹೆಸರೂ ಇದ್ದಿತು. ಇವನು ತನ್ನ ಗ್ರಂಥಗಳಲ್ಲಿ ಜಯಂತ ಮತ್ತು ಅಲ್ಲಾ ವದ್ದಿ °ನನ ವಿಚಾರವಾಗಿ ಹೇಳಿಕೊಂಡಿರುವನ್ನು ಪ್ರಖ್ಯಾತಖಿಲ್ಪಿ ವಂಶದವನಾದ ಅಲ್ಲಾವುದ್ದೀನನು ಕ್ರಿ ಶ ೧೩೧೬ರಲ್ಲಿ ಸತ್ತುಹೋದನು. ಇದಲ್ಲದೆ ಗೋವಿಂದ ಠಾಕೂರನೆಂಬವನು ಕ್ರಿ. ಶ. ೧೫ನೆಯ ಶತಮಾನದ ಪೂರ್ವಾರ್ಧದಲ್ಲಿ ಬರೆದಿರಬಹು ದಾದ ಕಾವ್ಯಪ್ರದಿಪ” ಎಂಬ ಗ್ರಂಥದಲ್ಲಿ ಇವನ ವಿಚಾರವಾಗಿ ಬರೆದಿರುವನಾದುದ ರಿಂದ ವಿಶ್ವನಾಥನ ಕವಿತಾಕಾಲವು ಕ್ರಿ. ಶ. ೧೨೮೭ ಅಥವಾ ಕ್ರಿ ಶ ೧೩೬೫ ರಲ್ಲಿ ಅಗಿರಬೇಕೆಂದು ತೋರುವುದು. ಗ್ರಂಥಗಳು: - (೧) ಸಾಹಿತ್ಯದರ್ಪಣ (೨) ರಾಘವವಿಲಾಸ (೩) ಚಂದ್ರಕಲಾನಾಟಕಾ (೪) ಕುವಲಯಾಶ್ವಚರಿತ (೫) ಪ್ರಶಸ್ತಿರತ್ನಾವಳಿ (೬) ನೃಸಿಂಹವಿಜಯ ಸಾಹಿತ್ಯದರ್ಪಣವು ಸರ್ವಾಲಂಕಾರಗ್ರಂಥಗಳಿಗೆಲ್ಲಾ ಉತ್ತಮ ಪ್ರಮಾಣ ಗ್ರಂಥವಾಗಿದ್ದು ಸಾಹಿತ್ಯ ಜಿಜ್ಞಾಸುಗಳಿಗೆ ಅಂತ್ಯ೦ತೋಪಯುಕ್ತವಾಗಿದೆ. ಇದಕ್ಕೆ ಶ್ರೀರಾಮಚರಣತಕ್ಕವಾಗಿಶಭಟ್ಟಾಚಾರ ಕೃತ 'ವಿಕೃತಿ'ಯು ಇರುವುದು, ರಾಘವವಿಲಾಸವು ಹೆಸರಿಗೆ ತಕ್ಕಂತೆ ರಾಮಚರಿತೆಯನ್ನು ಹೇಳುವುದು, ಕುವಲಯಾ ಶ್ವಚರಿತವೆಂಬುದು ಪ್ರಾಕೃತದಲ್ಲಿ ಬರೆಯಲ್ಪಟ್ಟಿದೆ. ಪ್ರಶಸ್ತಿರತ್ನಾವಳಿಯಲ್ಲಿಂ೬ ಪ್ರಶಸ್ತಿ ಗಳಿದ್ದು (1Panegyrics) ಬೇರೆಬೇರೆ ಭಾಷೆಯಲ್ಲಿ ಬರೆಯಲ್ಪಟ್ಟಿರುವುದು. ನೃಸಿಂಹ ವಿಜಯದಲ್ಲಿ ಹಿರಣ್ಯಕಶಿಪುವಿನ ವಧೆಯು ವರ್ಣಿತವಾಗಿರುವದು. ಶೈಲಿಯು ಸರಳವಾಗಿಯೂ ಮೃಧುಮಧುರವಾಗಿ ನವರಸಂಗಳಿಂದ ಕೂಡಿ ಹೇಳುವು ದಕ್ಕೆ ಸೊಂಪಾಗಿಯೂ ಕೇಳುವುದಕ್ಕೆ ಇಂಪಾಗಿಯೂ ಇರುವುದು, ರಾಘವ ಎಲಾಸದಲ್ಲಿನ ಕರುಣರಸೋದಾಹರಣೆಗಾಗಿ ಹೇಳಲ್ಪಟ್ಟಿರುವ ಅನೇಕ ಶ್ಲೋಕ ಗಳಲ್ಲಿ ಒಂದನ್ನು ಇಲ್ಲಿ ಕೊಟ್ಟಿದೆ. ವಿಪಿನೇಕ ಜಟಾನಿಬಂಧನಂ ವಚೇದಂ ಮನೋಹರವಪುಃ ಅನಯೋರ್ಘಟನಾವಿಧೇಸ್ಸು ಟೆಂ ನನುಖಡೇನಶಿರೀಷಕರ್ತನಂ || ಚಂದ್ರಕಲಾನಾಟಕದಲ್ಲಿನ ವಿಚಾರದ ಹೇಳಿಕೆಯು ಹೀಗಿರುವುದು:- ತಾರುಣ್ಯಸ್ಯ ವಿಲಾಸಸ್ಸ ಮಧಿಕ ಲಾವಣ್ಯ ಸಂಪದೋಹಾಸಃ ಧರಣೀ ತಲಸ ಭರಣಂ ಯುವಜನಮನಸೋಮಶೀಕರಣಂ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.