ಶಕ] ರತ್ನಾಕರ ೨೩ (೨) ಯಂ. ಕೃಷ್ಣಮಾಚಾರ್ಯರವರು ರತ್ನಾಕರನ ಹರವಿಜಯದ ವಿಚಾರ ವಾಗಿ ಬರೆಯುವಾಗ ಜಯಾಪೀಡನ ಆಳಿಕೆಯು ಕ್ರಿ. ಶ ೭೭೯-೮೧೩ರ ವರೆಗೆಂದು ಬರೆದಿರುವರು. (೩) ಕವಿಯು ( ಬಾಲಬ್ರಹಸ್ಪತ್ಯಪರನಾಮಾ ಚಿಪ್ಪಟಜಯಾಪಿಡಮಹಿ ಪತಿರ್ನವವಶತಕಪ್ರಾರಂಭ ಏವ ಕಾಶ್ಮೀರದೇಶಂ ಶಶಾಸ” ಎಂದು ಹೇಳಿರುವುದ ರಿಂದ ಕವಿಯು ಕ್ರಿ. ಶ. ೯ನೆಯ ಶತಮಾನದ ಪೂರ್ವಾರ್ಧದವನೆಂಬುದು ಸ್ಪಷ. ವಾಗುವುದು. (೪) ಪ್ರೊ. ಮ್ಯಾಕಡಾನಲ್ಲರವರು ಕಲ್ಲಣಪಂಡಿತನ ಅಭಿಪ್ರಾಯವನ್ನು ಅನುಮೋದಿಸಿ ರತ್ನಾಕರನು ಕ್ರಿ. ಶ. ೯ನೆಯ ಶತಮಾನದವನೆಂದು ಹೇಳಿ ರುವರು $ ಹೀಗೆ ನವವಶತಕ ಪೂರ್ವಾರ್ಧವೆಂಬ ಗ್ರಂಥಕಾರನ ಹೇಳಿಕೆಯೂ ಉತ್ತರಾ ರ್ಧವೆಂಬ ಕಲ್ಯಣಾದಿ ಚಾರಿತ್ರಕರ ಅಭಿಪ್ರಾಯವೂ ಭಿನ್ನವಿಸಿರುವುವು. ಇವುಗ ಳೆಲ್ಲವನ್ನೂ ಸಮದೃಷ್ಟಿಯಿಂದ ವಿವೇಚಿಸುವವರಿಗೆ ಈ ಕೆಳಗಿನ ವಿಷಯಗಳು ಸಮರ್ಥಿತವಾಗುವುವು. (೧) ಕ್ರಿ. ಶ. ೭೫೫ ೭೮೬ರ ವರೆಗೆ ಕಾಶ್ಮೀರದಲ್ಲಿ ಆಳಿದ ಜಯಾಸಿಡ ನಿಗೂ ಕ್ರಿ. ಶ. ೮೫೫-೮೮೪ರ ವರೆಗೆ ಕಾಶ್ಮೀರದಲ್ಲಿ ಆಳಿದ ಅವಂತಿವರ್ಮ ನಿಗೂ ಇರುವ ಒಂದು ನೂರುವರ್ಷಗಳ ಅಂತರಕಾಲದಲ್ಲಿ ಆಳಿಹೋದ ರಾಜರು ಗಳಲ್ಲಿ ಮುಖ್ಯನಾಗಿಯೂ, ಮೊದಲನೆಯವನಾಗಿಯೂ ಕ್ರಿ. ಶ. ೯ನೆಯ ಶತಮಾನ ಪ್ರಾರಂಭದ ಕೆಲವು ವರ್ಷಗಳ ವರೆಗೆ ಎಂದರೆ ಕ್ರಿ. ಶ. ೮೧೩ರ ವರೆಗೆ ಆಳಿದ ಚಿಪ್ಪಟಜಯಾಪೀಡನ ಆಶ್ರಯದಲ್ಲಿ ರತ್ನಾಕರನಿದ್ದಿರಬೇಕೆಂದು ಬೋಧೆಯಾಗು ವುದು. , (೨) ಯಂ, ಕೃಷ್ಣಮಾಚಾರ್ಯರವರು ಹೇಳುವ ಜಯಾಪೀಡನೇ ಚಿಪ್ಪಟ ಜಯಾಪೀಡನಾಗಿರಬೇಕೆಂದೂ ಕ್ರಿ. ಶ ೭೭೯ರಿಂದ ಕ್ರಿ. ಶ. ೭೮೬ರ ವರೆಗೆ ೭ ವರ್ಷಗಳು ಚಿಪ್ಪಟಜಯಾಪೀಡನು ಯುವರಾಜಪದವಿಯನ್ನಲಂಕರಿಸಿದ್ದಿರಬೆ? ಕಂದೂ ಚಿಪ್ಪಟಜಯಾಪೀಡನ ಕಾಲವು ಕ್ರಿ. ಶ. ೭೭೯-೮೧೩ರವರೆಗೆಂದೂ ಬೋಧೆಯಾಗುವುದು. ↑ History of Classical Sanskrit Literature P, 40. & ಹರವಿಜಯದ ಆಮುಖ ಪುಟ ೧ $ History of Sanskrit Literature P, 330.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.