೩೮ ಸಂತಕವಿ ಚರಿತೆ ವುದರಿಂದ ಖಂಡಿತವಾಗುತ್ತದೆ. ಜಗನ್ನಾಥನು ತನ್ನ ವೃದ್ಧಾಪ್ಯವನ್ನು ಕಾಶಿಯಲ್ಲಿ ಯೋ ಮಧುರೆಯಲ್ಲಿಯೇ ಕಳೆದುದಾಗಿಯೂ ಇವನು ಕ್ರಿ. ಶ. ೧೭ನೆಯ ಶತಮಾ ನದಲ್ಲಿದ್ದವನೆಂಬುದು ಪಂಡಿತರಾಜೋಪಿ ವಾರ್ಧಕ್ಕಾಶ್ಯಾಂ ಮಧುರಾಯಾಂ ವಾಗತ್ವಾಪರಮೇಶ್ವರಾರಾಧನೇನ ವಯಃ ಶೇಷಂ ನೀತರ್ವಾ, ತಸ್ಮಾತ್ ಕ್ರಿಸ್ತಾ ಬೀಯ ಸಪ್ತ ದಶಶತಕ ಮಧ್ಯಭಾಗೇ ಪಂಡಿತರಾಜೊ ಆಸಿದಿತಿಸುವ ಕ್ರಮೇವ ” ಎಂಬುದರಿಂದ ಹೇಳಲಾಗುತ್ತದೆ. ಪಂಡಿತ ರಾಜ ಜಗನ್ನಾಥನ ವಿಚಾರವಾಗಿ ಕಾಲವನ್ನನುರಿಸಿ ಹೇಳಬಂದಿ ರುವ ಅನೇಕ ಕಥೆಗಳ ಸತ್ಯಾಸತ್ಯವಿಚಾರವಿಮರ್ಶನವು ಪ್ರಕೃತ ಆವಶ್ಯಕವೆಂದು ತೋರುವದು. ಪಂಡಿತ ಜಗನ್ನಾಥನ ವಿಚಾರವಾಗಿ ಲೋಕವು ಏನನ್ನು ವದು ? (೧) ಜಗನ್ನಾಥನು ದೇಶಾಟನಕ್ಕಾಗಿ ಹೊರಟು ಜಯಪುರಕ್ಕೆ ಬಂದು ಅಲ್ಲಿ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅಲ್ಲಿ ಪಾಠ ಪ್ರವಚನಗಳನ್ನು ನಡೆಯಿಸುತ್ತಿ ರಲು ಅಲ್ಲಿಗೆ ದಿಲ್ಲಿಯಿಂದ ಬಂದಿದ್ದ ಕಾಜಿಯೊಬ್ಬನು ಹಿಂದೂಮತವು ಪುರಳಿಲ್ಲ ದುದು. ಮಹಮ್ಮದ ಮತವು ಸರ್ವಮತ ಶ್ರೇಷ್ಠವೆಂದು ಹೇಳುವುದನ್ನು ಕೇಳಿ ಜಗ ಸ್ನಾಥನು ಆ ಮತಕ್ಕೆ ಸಂಬಂಧಿಸಿದ ಸಕಲ ಶಾಸ್ತ್ರಂಗಳನ್ನೂ ಕೆಲವು ಕಾಲದಲ್ಲಿ ಕಲಿತು ಅವರೊಡನೆ ವಾದಿಸಿ ವಿಜಯಿಯಾದುದನ್ನು ತಿಳಿದು ರಾಜನು ಜಗನ್ನಾಥ ನನ್ನು ಸತ್ಕರಿಸಿ ತನ್ನ ಸಭಾಸದನನ್ನಾಗಿ ಮಾಡಿಕೊಂಡನು. (೨) (ಲವಂಗಿ' ಎಂಬ ಯವನ ಕನ್ನೆಯು ತನ್ನ ತಂದೆಯ ಆಸ್ಥಾನಕ್ಕೆ ಬಂದ ಪಂಡಿತರಾಜ ಜಗನ್ನಾಥನ ಯೌವನ ಸೌಂದರ್ಯಾತಿಶಯಗಳನ್ನೂ ಅವನ ಪಾಂಡಿ ತ್ಯವನ್ನೂ ಕೇಳಿ ಅವನನ್ನು ನೋಡಲೆಳಸಿ ಅವನನ್ನು ನೋಡುವ ಸುಸಂಧಿಯನ್ನು ಹೇಗೊ ಕಲ್ಪಿಸಿಕೊಂಡು ಸೌಂದರ್ಯಮುಗ್ಧಳಾಗಿರಲು ಒಂದಾನೊಂದುದಿವಸ ರಾಜನು ಜಗನ್ನಾಥನೊಡನೆ ಚದುರಂಗವನ್ನಾಡುತ್ತಿದ್ದಾಗ ತೃಷಾರ್ತನಾದ ರಾಜನು ಸವಿನೀರನ್ನು ತರುವಂತೆ ಅವಂಗಿಗೆ ಹೇಳಿದನು. ಅದರಂತೆ ಸಣ್ಣ ಕುಂಭ ದಲ್ಲಿ ನೀರನ್ನು ತರುತ್ತಿರುವ ಲವಂಗಿಯನ್ನು ನೋಡಿಆನಂದಿಸಿ ಪಂಡಿತವರ! ನೀನು ಲವಂಗಿಯನ್ನು ಬಣ್ಣಿಸೆಂದು ಆಜ್ಞಾಪಿಸಲು ಜಗನ್ನಾಥನು ಬಹು ಸಡಗರದಿಂದ.- ಯವನೀರಮಣಿ ವಿಪದಃ ಶಮನೀ ಕಮನೀಯತಮಾ ನವನೀತಸಮಾ ಉಹಿಊಹಿವಯೋsಮೃತಪೂರ್ಣಮುಖಿ ಸ ಸುಖೀ ಜಗತೀಹ ಯದಂಕಗತಾ || ಯುವನವನೀತಕೊವುಲಿಂಗೀ ಶಯಸಿಯೇ ಯದಿ ಸೀಯತೇ ಕದಿಚಿತ್ ಅವನೀತಲಮೇವ ಸಾಧು ಮನ ನವನೀ ಮಾಘವನೀ ವಿನೋದಹೇತುಃ || ಎಂದೂ,
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.