ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತ್ಯವತಿಚರಿತ್ರೆ Ahhhhr\\r/AAA #r\ \\r\r\ \ n # * * * * * An A** ** #೧n h” N #\r\nh hhhhhhh ವಿಷಯಗಳೇ ಕಾಣಬರುವುವೇ ಹೊರತು ಯಾವ ಇಂದ್ರಜಾಲವೂ ಕಾಣದು. ವಿರುದ್ಧ ಗಳಾದ ಕಲ್ಪಿತ ಕಥೆಗಳನ್ನು ಕೇಳಿ ನಲಿದಿರುವ ನಿಮ್ಮ ಕಿವಿಗಳಿಗೆ ಈ ಸತ್ಯಚ ರಿತ್ರೆಯ ಇಂಪಾಗಿ ತೋರಿದರೆ ಇದನ್ನು ಓದಿ ಆನಂದಪಡುವುದಕ್ಕೂ, ಇದರಲ್ಲಿ ಬಣ್ಣ ಸಿರುವ ಯೋಗ್ಯರ ನಡವಳಿಗಳನ್ನು ಅನುಸರಿಸುವುದಕ್ಕೂ ನಿಮಗೆ ಬೇಕಾದಷ್ಟು ಸ್ಮಾ ತಂತ್ರ್ಯವುಂಟಾಗುವುದು. ಸತ್ಯವತಿಯು ನಾರಾಯಣಮೂರ್ತಿಯ ಹೆಂಡತಿ, ಮು೦ ಗೊಂಡಾಗ್ರಹಾರದಲ್ಲಿ ವಾಸಮಾಡುವ ಲಕ್ಷ್ಮಿನಾರಾಯಣ ಎಂಬುವನ ಎರಡನೆಯ ಸೊಸೆ. ಆ ಅಗ್ರಹಾರವು ಕೋನಸೀಮೆಯ ಅಮಲಾಪುರದ ಸಮೀಪದಲ್ಲಿದೆ. ಲಕ್ಷ್ಮಿನಾರಾಯಣನು ಪರಮಸಾಧು, ಆ ಗ್ರಾಮದಲ್ಲಿ ಆತನು ವಾಸಮಾಡು ಶಾನೆಂಬುದೇ ಒಬ್ಬರಿಗೂ ತಿಳಿಯದು. ಕಾಣದ ಗ್ರಾಮಗಳಲ್ಲಿ ಯ ಆತನ ಹೆಂಡ ತಿಯ ಹೆಸರನ್ನು ತಿಳಿಯದವರು ಒಬ್ಬರೂ ಇಲ್ಲ, ನೀರು ಮೊಗೆಯುವದಕ್ಕೆ ಬಂದಿದ್ದ ಶೂದ್ರಿತಿಯರೆಲ್ಲರೂ ತಮ್ಮ ಮೇಲೆ ನೀರುಹಾರಿದರೆ ಅವಳು ಜಗಳವಾಡಿ ಯಾಳೆಂದು ಕೈಗಳನ್ನು ಮೇಲೆತ್ತಿಕೊಂಡು ಹೋಗಿ ದೂರದಲ್ಲಿ ನಿಲ್ಲುವರು, ಈಜಾ ಡುತ್ತಿದ್ದ ಹುಡುಗರು ಅವಳು ಮಡಿನೀರಿಗಾಗಿ ಕೆರೆಗೆ ಬಂದರೆ ದೂರದಲ್ಲಿ ನೋಡಿ ದರೂ ಭಯಪಟ್ಟು ಓಡಿಹೋಗುವರು, ಆ ಗ್ರಾಮದಲ್ಲಿ ಎಳೆಮಕ್ಕಳು ಚಂಡಿ ಹಿಡಿದು ಅಳುತ್ತಿದ್ದರೆ • ಜೋಕೆ, ಅಳಬೇಡ ! ಯಶೋದಮ್ಮನವರು ಬರುತ್ತಾರೆ, ಅವರಿಗೆ ನಿನ್ನನ್ನು ಕೊಟ್ಟು ಬಿಡುತ್ತೇನೆ, ಹಿಡಿದುಕೊಂಡು ಹೋಗುತ್ತಾರೆ' ಎಂದು ಅವರ ತಾಯ್ತಂದೆಗಳು ಹೆದರಿಸುವುದುಂಟು. ಆಕೆಯ ಪ್ರಸಿದ್ದಿಯಿಂದ ಗ್ರಾಮವಾಸಿ ಗಳೆಲ್ಲ ರೂ ಆತನನ್ನು ಯಶೋದಮ್ಮನ ಗಂಡನೆಂದು ಕರೆಯುತ್ತಿದ್ದರೇ ಹೊರತು ಯಾರೂ ಹೆಸರು ಹಿಡಿದು ಕರೆಯುತ್ತಿರಲಿಲ್ಲ. ಆತನಿಗೆ ನಾಲ್ಕು ಮಂದಿ ಕುಮಾರರು, ದೊಡ್ಡ ವನ ಹೆಸರು ವೆಂಕಟೇಶ, ಎರಡನೆಯವನ ಹೆಸರು ನಾರಾಯಣಮೂರ್ತಿ ಯೆಂಬುದು ನಿಮಗೆ ತಿಳಿದೇ ಇದೆ. ಮರನೆಯವನು ರಾಮಸ್ವಾಮಿ, ನಾಲ್ಕನೆ ಯವನು ಸುಬ್ರಹ್ಮಣ್ಯ, ಇವರು ನಾಲ್ಕು ಮಂದಿಯಲ್ಲದೆ ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಹಿರಿಯವಳು ಸಾವಿತ್ರಿ, ಕಿರಿಯವಳು ಸೀತೆ, ಈಗ ವೆಂಕಟೇಶನಿಗೆ ಇಪ್ಪ ತೇಳು ವರ್ಷ, ಅವನು ದೇಶ ಪದ್ಧತಿಯಂತೆ ಬಾಲ್ಯದಲ್ಲಿಯೇ ಕಾಳಿದಾಸ ಮಹಾ ಕವಿಯಿಂದ ವಿರಚಿತವಾದ ಶಾಕುಂತಲ, ವಿಕ್ರಮೋರ್ವಶೀಯ, ಮಾಳವಿಕಾ ಮಿತ್ರ ಎಂಬ ಮೂರು ನಾಟಕಗಳನ್ನೂ ಓದಿದನು, ಆದರೆ ಕಾವ್ಯ ಪಾಠದಲ್ಲಿ ಅವ ನಿಗೆ ಆಸಕ್ತಿಯಿಲ್ಲದುದರಿಂದಲೂ ಗುರು ಸೇವೆಗಾಗಿಯೇ ಬಹುಕಾಲ ಬೇಕಾಗಿ ದ್ದುದರಿಂದಲೂ ಅವನಿಗೆ ಸಂಸ್ಕೃತ ವಿದ್ಯೆ ಹತ್ತಲಿಲ್ಲ. ಸ್ವಲ್ಪ ಮಟ್ಟಿಗೆ ಲೆಕ್ಕಾಚಾರ