ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತ್ಯವತಿಚರಿತ್ರೆ. ಒಂದು ಕಾಸನ್ನೂ ಕಳುಹಿಸುತ್ತಿರಲಿಲ್ಲ, ಅವರು ವೆಂಕಟೇಶನ ಮದುವೆಯಲ್ಲಿ ಸಮಾ ರಾಧನೆಗಳಿಗಾಗಿಯ ಉಡುಗೊರೆಗಳಿಗಾಗಿಯ ಮಾನ್ಯವನ್ನು ಆಧಾರಮಾಡಿ ಸಾಲತಂದಿದ್ದರು. ಆ ಸಾಲವಿನ್ನೂ ತೀರದೆ ಬಡ್ಡಿ ಬೆಳೆಯುತ್ತಿದ್ದಿತು. ಆದುದ ರಿಂದ ಅವರು ಜೀವಿಸುವುದೇ ದುರ್ಘಟವಾಗಿದ್ದಿತು. ಇದನ್ನೆಲ್ಲ ಮಾವನು ಕೇಳಿ ನಾರಾಯಣ ಮೂರ್ತಿಯ ಸಾಲವನ್ನು ತೀರಿಸಿ ಪ್ರತಿ ತಿಂಗಳೂ ನಾಲ್ಕು ರೂಪಾಯಿ ಕಳುಹಿಸತೊಡಗಿದನು, ಈಗ ನಾರಾಯಣಮೂರ್ತಿಗೆ ಪ್ರಥಮ ಶಾಸ್ತ್ರ ಪರೀಕ್ಷೆ ಆಯಿತು. ಬಿ. ಎ ತರಗತಿಯಲ್ಲಿ ಓದುತ್ತಾನೆ. ಎಫ್. ಎ ಪರೀಕ್ಷೆ ಕೊಟ್ಟ ದಿನದಿಂದ ಆತನಿಗೆ ವಿದ್ಯಾರ್ಥಿ ವೇತನವಲ್ಲದೆ ತಿಂಗಳಿಗೆ ಇಪ್ಪತ್ತು ರೂಪಾಯಿಗಳ ಮನಿಯಾರ್ಡರೂ ಬರುವುದು, ಒಂದು ವರ್ಷದ ಕೆಳಗೆ ಸತ್ಯವತಿಯು ಪುಷ್ಪವತಿ ಯಾಗಲು ರಾಘವಯ್ಯನು ಭಾರ್ಯಾಭರ್ತರನ್ನೊಡಗೂಡಿಸಿ ಸತ್ಯವತಿಯನ್ನು ಅತ್ತಿಯ ಮನೆಗೆ ಕಳುಹಿಸಿಕೊಟ್ಟನು. ಈಗ ಜನವರಿಯ ವಿಶ್ರಾಂತಿದಿನಗಳು ಸಮೀಪಿಸಿದುದರಿಂದ ತಾನು ಊರಿಗೆ ಬರುವೆನೆಂದು ನಾರಾಯಣ ಮೂರ್ತಿ ತಂದೆಗೆ ಕಾಗದಬರೆದನು. ಆದಕಾರಣವೇ ಪ್ರತಿನಿತ್ಯವೂ ಸತ್ಯವತಿ ಆತನ ಆಗಮನವನ್ನೇ ಇದಿರುನೋಡುತ್ತಿರುವುದು, ಎಲ್‌ ಸ್ತ್ರೀಯರೇ ! ನೀವು ಈ ಚರಿತ್ರೆಯನ್ನು ಓದಿ ದರೆ ಆ ಸತ್ಯವತಿಯ ಗುಣಾತಿಶಯಗಳು ತಿಳಿದು ನಿಮಗೆ ಆಕೆಯಲ್ಲಿ ಅನುರಾಗ ಹೆಚ್ಚಿ ಸಂಸಾರದಲ್ಲಿ ಎಲ್ಲರೊಳಗೂ ಇರುವ ಸ್ವಭಾವ ಲಕ್ಷಣಾದಿಗಳು ವ್ಯಕ್ತವಾಗಿ ಯಾರನ್ನು ಹೇಗೆ ಕಾಣಬೇಕೋ ಅದನ್ನು ನೀವೇ ಆಲೋಚಿಸಿಕೊಳ್ಳುವಿರಿ. -may ಎರಡನೆಯ ಪ್ರಕರಣ ಹಗಲು ಎರಡು ಗಂಟೆಯ ಸಮಯದಲ್ಲಿ ಹೊರಟ ಹಡಗನ್ನು ಶಿರಸ್ತೆದಾ ರರು ಏರಿದುದರಿಂದ ಹಡಗು ರಾಜಮಹೇಂದ್ರದಿಂದ ಹೊರಟು ಬೊಬ್ಬರುಲಂಕೆ ಯೆಂಬ ಗ್ರಾಮಕ್ಕೆ ಎರಡು ಹರದಾರಿಯ ದೂರದಲ್ಲಿ ಒಂದು ಚಿಕ್ಕ ಗ್ರಾಮದ ಹತ್ತಿರ ಡೀವಿಗೆ ಕಚ್ಚುವ ಹೊತ್ತಿಗೆ ಬಂದಿತು, ಅವರು ಅಲ್ಲಿ ಹಡಗನ್ನು ನಿಲ್ಲಿಸಿ ಊಟಕ್ಕಾಗಿ ಹೊರಟು ದಿವ್ಯವಾದ ಭಕ್ಷ್ಯಭೋಜ್ಯಗಳನ್ನು ಉಂಡು ತಾಂಬೂಲ ಹಾಕಿಕೊಂಡು ಸಂಗೀತವನ್ನು ಕೇಳಿ ಮೆಲ್ಲಗೆ ಹಡಗುಹತ್ತುವು ದಕ್ಕೆ ಬರುವಾಗ್ಯ ರಾತ್ರಿ ಹತ್ತು ಗಂಟೆಯಾಯಿತು, ಇಷ್ಟರೊಳಗೆ ಹಡಗಿನ