ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತ್ಯ ವಚರಿತ್ರೆ YilmyAwely =++++++++++ Pyamathaneela As »+ ho, 44» »ry4, 44 ಯಾರ ಬಾರದುದರಿಂದ ನಿರಾಶನಾಗಿ ಪುನಃ ದಿಂಬಿನಮೇಲೆ ತಲೆಯಿಟ್ಟು ಪುಸ್ತಕ ವನ್ನು ನೆರೆದು ಓದುತ್ತಾ ಓದುವುದಕ್ಕೆ ತೋರದೆ ಮಂಚದಿಂದಿಳಿದು ತಾನೇ ಆಕೆ ಯನ್ನು ಕರೆತರುವೆನೆಂದು ಬಾಗಿಲವರೆಗೆ ಬಂದು ನಾಚಿಕೊಂಡು ಪುನಃ ಹಿಂದಕ್ಕೆ ಹೊಗುತ್ತಾ ಮನೋಭ್ರಾಂತಿಯಿಂದ ಹೊರಳಾಡುತ್ತಿದ್ದನು. ಮನಸ್ಸಿಗೆ ಒಗ್ಗಿದ ಹೆಂಡತಿಯು ಬಹುಕಾಲದವರೆಗೆ ಅಗಲಿದ್ದರೆ ನೂತನ ಸಮಾಗನ ದಿನದಲ್ಲಿ ಪ್ರಿಯನ ಮನಸ್ಸು ಹೀಗಿರುವುದೇನಾಶ್ಚರ್ಯವಲ್ಲ. ಇತ್ತಲಾ ಸತ್ಯವತಿ ಗಂಡನನ್ನು ನೋಡಿ ಒಂದು ಸಾರಿ ಕ್ಷೇಮ ಸಮಾಚಾರ ವನ್ನು ವಿಚಾರಿಸಿಕೊಂಡು ಬರಬೇಕೆಂದು ಎಷ್ಟು ಅಪೇಕ್ಷೆಪಡುತ್ತಿದ್ದರೂ ಅತ್ತೆ ಯಾದ ಯಶೋದಮ್ಮನು ಶಯನಗೃಹದ ಇದಿರಾಗಿಯೇ ಕುಳಿತಿದ್ದುದರಿಂದ ಹೊರಡುವುದಕ್ಕಾಗದೆ ಆಕೆ ಯಾವಾಗ ಎದ್ದು ಹೋಗುವಳೋ ಎಂದು ಕಂಡ ಕಂಡ ದೇವರಿಗೆಲ್ಲಾ ಕೈಮುಗಿದು ಒಂದೊಂದು ಕೆಲಸವನ್ನು ತೀರಿಸಿಕೊಂಡು ಬಂದು ಆಕೆ ಹೊರಟುಹೋದಳೋ ಇಲ್ಲವೋ ಎಂದು ಇಣಿಕಿಣಿಕಿ ನೋಡುತ್ತಾ ಮನೆಯ ಕೆಲಸಗಳನ್ನೆಲ್ಲಾ ಮಾಡಿ ಓರಗಿತ್ತಿಯ ಕಿರು ಮನೆಯಲ್ಲೆಷ್ಟು ಹೊತ್ತಿ ದ್ದರೂ ಅತ್ತೆಯು ಬೇರೆ ಮಲಗುವುದಕ್ಕೆ ಹೊರಡುವಂತೆ ತೋರಲಿಲ್ಲ. ತುತ್ತ ತುದಿಗೆ ತನ್ನ ಪ್ರಾಣಕಾಂತನನ್ನು ನೋಡಬೇಕೆಂಬಭಿಲಾಷೆಯು ನಾಚಿ : ಯನ್ನು ಮನಸ್ಸಿಸಿಂದೋಡಿಸಲಾಗಿ, ಸಾಹಸಮಾಡಿ ಸಿಹಿಸೀದ ತಂಬಿಗೆಯನ್ನು ಕೈಯ್ಯಲ್ಲಿ ಹಿಡಿದು ಕೊಂಡು ಹಜ್ಜೆಯ ಸದ್ದಾಗದಂತೆ ಭಯಪಡುತ್ತಾ ಮೆಲ್ಲಗೆ ಗೋಡೆಯ ಮಗು ಅಲ್ಲಿಯೇ ನಡೆದುಕೊಂಡು ಮಲಗುವ ಮನೆಯನ್ನು ಹೊಕ್ಕಳು. ಮುಶೋ ದಮ್ಮನ ಅದನ್ನು ಓರೆಗಣ್ಣಿನಿಂದ ನೋಡಿ ತಲೆದೂಗುತ್ತಾ ಥಟ್ಟನೆ ಎದ್ದು ಹೋಗಿ ತನ್ನ ಕಿರುಮನೆಯ ಕದವನ್ನು ಮುಚ್ಚಿಕೊಂಡಳು. ಸತ್ಯವತಿಯು ಎಡದ ಕಯ್ಯಲ್ಲಿ ಒಂದು ಕಡ್ಡಿಯನ್ನು ತೆಗೆದುಕೊಂಡುಬಂದು ದೀಪದ ಬತ್ತಿಯನ್ನೆ ತಿ ಪ್ರೇಮವನ್ನು ಚೆಲ್ಲುತ್ತಿರುವ ದೃಷ್ಟಿಯಿಂದ ಬಗ್ಗಿ ನೋಡಿದಳು. ನಾರಾಯಣಮೂರ್ತಿಯ ಕೃಪಾಕಟಾಕ್ಷದಿಂದ ಅವಳ ಮುಖವನ್ನು ನೋಡಿ ನಸುನಕ್ಕನು. ಆಗ ಅವರಿಬ್ಬ ರಿಗೂ ಉಂಟಾದ ಪರಮಾನಂದವನ್ನು ಅವರ ಮಸ್ಸಿನೊಳಗೆ ಹೊಕ್ಕರೆ ತಿಳಿದೀತೇ ಹೊರತು: ಹೇಳಿ ತಿಳಿಸುವುದು ಕಷ್ಟ. ನಾರಾಯಣಮೂರ್ತಿ-(ಆಕೆಯ ಕೈಯ್ಯನ್ನು ಹಿಡಿದುಕೊಂಡು ತನ್ನ ಪಕ್ಕ ದಲ್ಲಿ ಕುಳ್ಳಿರಿಸಿಕೊಂಡು) ಎಷ್ಟು ಹೊತ್ತು ಕಾದಿದ್ದರೂ ಒಳಗೆ ಬರಲಿಲ್ಲ, ನಾನು ಬಂದರೂ ನನ್ನನ್ನು ಮರೆತುಹೋದೆಯಾ.?