ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸತ್ಯ ವಚರಿತ್ರೆ •••••••• ಕಾರ್ಯಗಳೇ ನಡೆಯುತ್ತವೆ. ಈಕಾಲ ಕೆಟ್ಟು ಹೋಯಿತು, ಎಂದೊಬ್ಬಳೂ, ಈ ಕಾಲದಲ್ಲಿ ಬಂದವರು ಅತ್ತೆ ಮಾವಂದಿರನ್ನು ಕಂಡರೆ ಲಕ್ಷ್ಯಮಾಡುತ್ತಾರೆಯೇ ? ಎಂದೊಬ್ಬಳ, ನಮ್ಮ ಕಾಲದಲ್ಲಿ ಹೆಂಗಸರು ತಮ್ಮ ಗಂಡಂದಿರ ಇದಿರಾಗಿ ಹಗಲು ನಿಂತು ಬದುಕುವುದುಂಟೇ? ಎಂದೊಬ್ಬಳ, ನನ್ನಂಥವಳು ಅತ್ತೆಯಾಗಿದ್ದರೆ, ಇಂತಹ ಆಟಗಳನ್ನೆಲ್ಲಾ ಒಂದು ನಿಮಿಷದಲ್ಲಿ ನಿಲ್ಲಿಸಿಬಿಡುತ್ತಿದ್ದೆನು, ಎಂದೊಬ್ಬಳ, ಇದು ಪೂರ್ವಕಾಲವಾಗಿದ್ದರೆ ಇಂತಹ ಅಕಾರ್ಯವನ್ನು ಮಾಡುತ್ತಿದ್ದಾಗಲೇ ಬಾಳೆಯ ಗಿಡವನ್ನು ಕಡಿಯುವಂತೆ ಅವಳನ್ನು ಕಡಿದು ತುಂಡು ತುಂಡುಮಾಡುತ್ತಿದ್ದರು. ಎಂದೊಬ್ಬಳೂ-- ಬೀದಿಬೀದಿಯಲ್ಲಿಯ ಮನೆಮನೆಯಲ್ಲಿಯ, ಕೇರಿಕೇರಿಯ ಹೆಯ, ಹಲವುಬಗೆಯಾಗಿ ಕೈಗಳನ್ನು ತಿರುಗಿಸುತ್ತಾ ತಲೆಯನ್ನು ಅಲ್ಲಾಡಿ ಸುತ್ತಾ ದೀರ್ಘವಾಗಿ ರಾಗ ತೆಗೆದು ದೂರುವುದಕ್ಕೆ ಮೊದಲು ಮಾಡಿದರು. ಅಷ್ಟು ದೊಡ್ಡ ತಪ್ಪು ಮಾಡಿದುದಕ್ಕಾಗಿ ಮನೆಯಲ್ಲಿ ಸತ್ಯವತಿಗೆ ಯಶೋದಮ್ಮನು ಮಾಡುವ ಚೀಮಾರಿಗೂ, ಬೈಗುಳಿಗೂ ಪರಿಮಿತಿಯೇ ಇಲ್ಲ, ಆಹಾ ! ಏನು ಈ ಕಾಲಮಹಿಮೆ, ಈಗ ಗಂಡನೊಂದಿಗೆ ಹಂಡತಿ ಮಾತಾಡಿದುದು ತಪ್ಪಾಯಿತಲ್ಲ ? ನಾವು ಕಂಡಹಾಗೆ ಏಷ್ಕಮಂದಿ ಕೆಟ್ಟ ಹೆಂಗಸರ: ನಾಲ್ಕು ಜನರಲ್ಲಿ ನಿರ್ಭಯ ವಾಗಿ ತಲೆಯೆತ್ತಿಕೊಂಡು ತಿರುಗಾಡುವರು. ಸತ್ಯವತಿಯು ಹಗಲು ಗಂಡನಸಂಗಡ ಮಾತಾಡಿದುದರಿಂದ ತನ್ನ ಓರಗೆಯವರಲ್ಲಿ ತಲೆತಗ್ಗಿಸಿಕೊಳ್ಳದೆ ತಿರುಗಾಡುವುದು ಕಷ್ಟವಾಯಿತೇ ? ಆವೂರಿನವರು ಅವಳಮೇಲೆ ಹೊರಿಸಿದ ಎರಡನೆಯ ತಪ್ಪು ವಿದ್ಯೆ, ಆಕೆಯ ತಾಯ್ತಂದೆಗಳು ವಿದ್ಯಾವಂತರು, ಆದಕಾರಣ ಅವಳನ್ನು ಬಾಲಿಕಾ ಪಾಠಶಾಲೆಗೆ ಕಳುಹಿಸುತ್ತಾ ಅವಕಾಶವಾದಾಗ ಮನೆಯಲ್ಲಿ ತಾವೂ ಪಾಠ ಹೇಳುತ್ತಾ ಓದು ಬರಹಗಳನ್ನು ಚೆನ್ನಾಗಿ ಕಲಿಸಿ ಸಮಯನೋಡಿ, ಕಥೆಗಳ ಮಲವನ್ನೂ, ಲೋಕವಾರ್ತೆಗಳ ಮಲವನ್ನೂ, ಒಳ್ಳೆಯ ನೀತಿಗಳನ್ನೂ, ಅವಳ ಮನಸ್ಸಿಗೆ ನಾಟುವಂತೆ ಬೋಧಿಸಿದ್ದರು. ಆದುದರಿಂದ ಆಕೆ ಸತ್ಯ ಸಹನಾದಿ ಸಕಲ ಸದ್ಗುಣಸಂಪನ್ನೆ ಯಾಗಿ ಸನ್ಮಾರ್ಗವನ್ನು ಬಿಟ್ಟು ನಡೆಯಳು, ಈಗ ಸ್ವಲ್ಪಮಟ್ಟಿಗೆ ಓದಿಕೊಂಡಿರುವವರೂ, ಓದದೆ ಇರುವವರೂ, ಸಾಧಾರಣವಾಗಿ ಮದುವೆಯಾದ ಕೂಡಲೆ ತಮ್ಮ ಹೆಂಡತಿಯರನ್ನು ಪಾಠಶಾಲೆಗೆ ಕಳುಹಿಸಕೂಡದೆಂದು ಮಾವಂದಿರ ಸಂಗಡ ಜಗಳವಾಡುವುದನ್ನು ನೀವೂ ನೋಡಿರಬಹುದು. ಆದರೆ ನಾರಾಯಣ ಮೂರ್ತಿ ಹಾಗೆ ಜಗಳವಾಡದೆ, ತನ್ನ ಹೆಂಡತಿಗೆ ಓದಿಸುವುದಕ್ಕಾಗಿ ಮೂವಂ ದಿರಸ ಭಾವಮೈದಂದಿರನ್ನೂ, ಮತ್ತಷ್ಟು ಪ್ರೋತ್ಸಾಹಪಡಿಸುತ್ತಾ ಯಾರೂ