೧೬. ಸತ್ಯವತಿಚರಿತ್ರೆ VM\# / \ \\ \ \ # \ \ # " !
- * * \# ,,
- /\n\ \ \r\\ry/VM \ \+ *
ಇಂಗ್ಲಿಷ್ ವೈದ್ಯವು ನಮ್ಮವರಿಗೆ ಎಂದಿಗೂ ಕೆಲಸಕ್ಕೆ ಬಾರದು. ಶಸ್ತ್ರ ವೈದ್ಯ ವೊಂದು ಹೊರತು ಬೇರೇನೂ ಅವರಿಗೆ ತಿಳಿಯದು. ನಾರಾ--ನಾಲ್ಕು ದಿನಗಳವರೆಗೆ ಪಥ್ಯಕ್ಕೆ ಹಾಕದಿದ್ದರೂ ಚಿಂತೆಯಿಲ್ಲ. ಆಮೇಲೆಯೇ ನಾನು ಹೊರಡುತ್ತೇನೆ. ಅನ್ನದ ವಿಷಯವನ್ನು ಹೇಳಿದರೆ ಹೆಂಗಸರು ಕೇಳಲಾರರು, ಹೆರಿಗೆ ಮನೆಗೆ ಗಾಳಿಯಾದರೆ ಬರುವಂತೆ ಕದ ತೆರೆದಿರುವಂತೆ ಹೇಳು. - ವೆಂ-ಬಾಣಂತಿಯರಿಗೆ ಗಾಳಿ ಎಷ್ಟು ಮಾತ್ರಕ್ಕೂ ಕೂಡದು, ಹೆರಿಗೆ ಮನೆ ಯಾವಾಗಲೂ ಕತ್ತಲೆಯಾಗಿರಬೇಕು. ಕದ ತೆರೆದರೆ ಪಿಶಾಚಿ ಬಂದು ಶಿಶುವಿನ ಕೊರಲನ್ನು ಮುರಿದು ಹಾಕುವುದು, ಹತ್ತು ದಿನ ಕಳೆಯುವ ತನಕ ಬಹು ಜಾಗ. ರೂಕರಾಗಿ ನೋಡಿಕೊಳ್ಳಬೇಕು ನಮ್ಮಮ್ಮನು ಎಷ್ಟೋ ಹೆತ್ತವಳು, ಅವಳಿಗಿಂತ ನಾವು ಬುದ್ಧಿವಂತರೇ ? ಎಂದು ಮಾತಾಡುತ್ತಾ ಇಬ್ಬರೂ ಸ್ವಲ್ಪ ಹೊತ್ತಿನೊಳಗೆ ಮನೆ ಸೇರಿದರು ಸೂಲಗಿತ್ತಿ ಕೈಕಾಲು ತೊಳೆದುಕೊಂಡು ತಾನು ಉಟ್ಟು ಕೊಂಡು ಒಂದಿದ್ದ ಸೀರೆಯನ್ನು ಬಿಚ್ಚಿ, ಮನೆಯವರು ಕೊಟ್ಟ ಸೀರೆಯನ್ನು ಉಟ್ಟು ಕೊಂಡು ಹೆರಿಗೆ ಮನೆಗೆ ಹೋಗಿ, ತಂದಿದ್ದ ನಾರುಬೇರುಗಳಲ್ಲಿ ಒಂದನ್ನು ಸುಂದರ ಮನ ಎದೆಗೆ ಕಟ್ಟಿಸಿ, ಚೆಂಬಿನಲ್ಲಿ ನೀರು ತರಿಸಿ ಮಂತ್ರಿಸಿ, ಕೊಟ್ಟು ಕಳುಹಿಸಿ ದಳು. ಅದನ್ನು ಕುಡಿಸುವುದಕ್ಕಿಂತ ಮುಂಚೆಯೇ ಶೀರ್ಷೋದಯವಾಯಿತು. ಆಮೇಲೆ ಒಂದು ನಿಮಿಷದೊಳಗಾಗಿಯೇ ಪುರುಷಶಿಶು ಜನಿಸಿತು, ಒಳಗಿದ್ದವರು ಆ ಸುದ್ದಿಯನ್ನು ಕೂಗಿ ಹೇಳಿದೊಡನೆಯೇ ವೆಂಕಟೇಶನು ಸಂತೋಷದಿಂದ ನೆರೆ ಮನೆಯ ಜೋಯಿಸನನ್ನು ನೋಡುವುದಕ್ಕೆ ಓಡಿಹೋಗಿ, ಈ ಸಂಗತಿಯನ್ನು ತಿಳಿ ಸಿದನು. ಆತನು ನಿದ್ದೆಗಣ್ಣುಗಳನ್ನು ಹೊಸಗಿ ಕೊಳ್ಳುತ್ತಾ ಎದ್ದು ಬಂದು, ನಕ್ಷತ್ರ ಗಳನ್ನು ನೋಡಿ ಕಾಲವನ್ನು ಕಂಡುಹಿಡಿದು, ನಾಳೆ ಜನ್ಮ ಪತ್ರಿಕೆಯನ್ನು ಬರೆದು ಕೊಡುವೆನು ಎಂದ ಹೇಳಿದನು. ಇತ್ತಲಾ ಸೂಲುಗಿತ್ತಿ-ಹೊಕ್ಕಳು ಕೊಯ್ದಾಗ ಒಂದು ರೂಪಾಯಿಯನ್ನೂ ಮೊರದಲ್ಲಿ ಮಲಗಿಸಿದಾಗ ಎರಡು ಪಡಿ ಅಕ್ಕಿಯನ್ನೂ ವಸೆ ನೀರಿಗೆ ಮರು ದುಡ್ಡು ಗಳನ್ನೂ ತೆಗೆದುಕೊಂಡು ಪದ್ಧತಿಯ ಹೆಸರು ಹೇಳಿ ಏಳೆಂಟು ರೂಪಾಯಿಗಳ ತನಕ ಸೆಳೆದಳು. ಮೂರು ದಿವಸದ ತನಕ ಮಗು ಬಾಣಂತಿಯರು ಸುಖವಾಗಿಯೇ ಇರುವಂತೆ ಕಾಣುತ್ತಿದ್ದರು. ಹೆರಿಗೆಯ ಮನೆ ಸತ್ಯವತಿಯ ಶಯನ ಗೃಹಕ್ಕೆ ಸೇರಿದ ಮಹಡಿ, ಅದಕ್ಕೆ ಚಾವಡಿಗೆ ಹೋಗುವ ಬಾಗಿಲೊಂದು, ದೊಡ್ಡಿಗೆ ಹೋಗುವ ಬಾಗಿಲೆಂದು, ಆದರೆ ದೊಡ್ಡಿಗೆ ಹೋಗುವ