ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಸತ್ಯವಚರಿತ್ರೆ

  • YYY YYYY \ry W V\ W V \ \" 1 # 1 \' * * * * * * * * * * * * \#
  1. V , \ ** * \ # YY + # \ # » / 4 Y\ //v/
  2. V & A

ದಕ್ಕೆ ಸ್ವಲ್ಪ ಸಂಶಯಪಡುತ್ತಿದ್ದಳು, ಗಂಡನು ತನ್ನ ಪಕ್ಷವನ್ನು ಅವಲಂಬಿಸಿರುವು ದರಿಂದ ಅವಳು ನಿರ್ಭಯವಾಗಿ ಅತ್ತೆಯೊಂದು ಸಲ ಬಯ್ದರೆ ತಾನು ಹತ್ತು ಸಲ ಬಯ್ಯುತ್ತಾ ಗಂಡನನ್ನು ಹೊಡೆದು ಬೀದಿಯಲ್ಲಿ ಅತ್ತಳು. ; ಎಂಬ ಆಂಧ್ರ ಭಾಷೆಯ ಗಾದೆಯಂತೆ ಗಂಡನು ಮನೆಗೆ ಬರುವ ಹೊತ್ತಿನಲ್ಲಿ ಇದ್ದುದನ್ನ ಇಲ್ಲ ದುದನ್ನೂ ಕಲ್ಪಿಸಿಕೊಂಡು ಬಿರುಮುಸುಕಿಟ್ಟು ಕೊಂಡು ಮಲಗಿ ಅಳುತ್ತಿದ್ದಳು. ಆತನೂ ತನ್ನ ಹೆಂಡತಿಯನ್ನು ಹಿಂದೆ ಕರೆದುಕೊಂಡು ಬಂದು ತಾಯಿಯ ಸಂಗ ಡಲೇ ಜಗಳವಾಡುತ್ತಿದ್ದನು. ಆಗಾಗ್ಗೆ ಈ ಕಲಹದಲ್ಲಿ ಸಾವಿತ್ರಿಯ ಶಾಯಿಯ ಪಕ್ಷವನ್ನೇ ವಹಿಸುತ್ತಿದ್ದಳು, ಕೆಲವು ರಾತ್ರಿಗಳಲ್ಲಿ ನೆರೆಹೊರೆಯವರಿಗೆ ನಿದ್ರೆಯೇ ಇಲ್ಲಲಕ್ಷ್ಮಿನಾರಾಯಣಯ್ಯನು ಯಾರನ್ನು ಸಮಾಧಾನಪಡಿಸುವುದಕ್ಕೂ ಕೈಲಾಗದವನಾದುದರಿಂದ ಯಾರ ಗೊಡವೆಗೂ ಹೋಗುತ್ತಿರಲಿಲ್ಲ. ಸದ್ಯಃ ಈ ಜಗಳ ತನ್ನ ಕಿವಿಗೆ ಬೀಳದಿದ್ದರೆ ಸಾಕೆಂದು ಆತನು ಸಾಧ್ಯವಾದ ಮಟ್ಟಿಗೂ ಮನೆ ಯಲ್ಲಿ ನಿಲ್ಲದೆ ಅನ್ನ ಬಾಯಿಗೆ ಬಿದ್ದೊಡನೆಯೇ ಕಾಲಿಗೆ ಬುದ್ದಿ ಹೇಳುತ್ತಿದ್ದನು. ಆಗ ರಾಮಸ್ವಾಮಿ ಅಮಲಾಪುರದ ಉಪಾಧ್ಯಾಯನ ಸಂಗಡ ಜಗಳವಾಡಿ ಕೊಂಡು ರಾಜಮಹೇಂದ್ರಕ್ಕೆ ಹೋಗಿ ಅಲ್ಲಿನ ಪಾಠಶಾಲೆಯಲ್ಲಿ ನಾಲ್ಕನೆಯ ತರ ಗತಿಗೆ ಸೇರಿದನು. ಆದರೆ ಅದು ಅವನಿಗೆ ತಕ್ಕುದಾಗಿರಲಿಲ್ಲ, ಅಲ್ಲಿ ಅಣ್ಣನ ಹತ್ತಿರವೇ ಇದ್ದನು. ಆಗ ರಾಜಮಹೇಂದ್ರದ ಚಿಕ್ಕ ಚಿಕ್ಕ ಸ್ಕೂಲುಗಳಲ್ಲಿ ಸರಿ ಯಾಗಿ ವಿಚಾರಣೆಮಾಡುವ ಅಧಿಕಾರಿಗಳು ಒಬ್ಬರೂ ಇರಲಿಲ್ಲ. ಅದರಿಂದ ಉಪಾಧ್ಯಾಯರು ತಾವು ಸೇರಿಸಿಕೊಳ್ಳುವ ತರಗತಿಗೆ ಹುಡುಗರು ತಕ್ಕ ವರೇ ತಕ್ಕ ವರಲ್ಲವೇ ಎಂದು ವಿಚಾರಿಸದೆ ಯಾರು ಯಾವ ತರಗತಿಗೆ ಸೇರಬೇಕೆಂದು ಬಂದರೂ ಅವರನ್ನು ಅದೇತರಗತಿಗೆ ಸೇರಿಸಿಕೊಳ್ಳುತ್ತಿದ್ದರು. ಹೀಗೆ ದಿನವಹಿ ಮನೆಯಲ್ಲಿ ಜಗಳ ಹತ್ತುತ್ತಾ ಇದ್ದುದರಿಂದ ಸುಬ್ರಹ್ಮಣ್ಯನು ಅಮಲಾಪುರಕ್ಕೆ ಹೋಗಿ ಕ್ರೈಸ್ತ ಪಾಠಶಾಲೆಗೆ ಸೇರಿ ಓದಿಕೊಳ್ಳತೊಡಗಿದನು. ಸತ್ಯವತಿ ತನ್ನ ಸಾಹಸ ವನ್ನೆಲ್ಲಾ ವೆಚ್ಚಮಾಡಿ ಯಶೋದಮ್ಮನ ಕಾಲು ಕಟ್ಟಿ ಕೊಂಡು ಬೇಡಿಕೊಳ್ಳು ತಿದ್ದಳು, ಸುಂದರಮ್ಮನನ್ನು ಮಾತಾಡಬೇಡವೆಂದು ಪ್ರಾರ್ಥಿಸುತ್ತಿದ್ದಳು. ಅವರು ಕೆಟ್ಟ ಮಾತಾಡಿದರೂ ತಲೆತಗ್ಗಿಸಿ ಸಹಿಸುತ್ತಿದ್ದಳು. ಹೇಗಾದರೂ ಕಲಹವನ್ನು ನಿರ್ಮಲಮಾಡಬೇಕೆಂಬುದೇ ಆಕೆಯ ಉದ್ದೇಶ ಆದರೆ, ಮರ್ಖರಾದವರ ಒಳಿ ಯಲ್ಲಿ ಆಕೆಯ ಒಳ್ಳೆಯ ಮಾತುಗಳಿಂದ ಎನುತಾನೆ ಪ್ರಯೋಜನವಾದೀತು ? ಮೇಲಣ ಲೋಕದಿಂದ ಬ್ರಹ್ಮನೇ ಇಳಿದು ಬಂದು ಬೋಧಿಸಿದರೂ ಮರ್ಖರನ್ನು ಸಮಾಧಾನಪಡಿಸಲಾರನೆಂಬ ಮಾತು ವ್ಯರ್ಥವಾದೀತೇ ?