ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪ್ರಕರಣ ರ್೨

  • +1 \ # * * * * * * * * * *

1 • • 1 # * * 1 * * * * * * * * * * * ಒಬ್ಬರಿಗೊಬ್ಬರಿಗೆ ಸರಿಬೀಳದುದರಿಂದ ಒಬ್ಬರೂ ಮನಸ್ಸಿಟ್ಟು ಕೆಲಸಮಾಡದೆ ತಟ ಸ್ಥರಾಗಿ ಸುಮ್ಮನಿರುತ್ತಾ ಬಂದರು. ಸತ್ಯವತಿಯೊಬ್ಬಳೂ ಸ್ವಲ್ಪಮಟ್ಟಿಗೆ ಸಾವಿ ತ್ರಿಯ, ಕೆಲಸಕಾರ್ಯಗಳಲ್ಲಿ ಬಹಳ ಆಸ್ಥೆಯಿಂದ ಓಡಾಡುತ್ತಿದ್ದರು. .ನಾರಾ ಯಣಮೂರ್ತಿ ತಾಯಿಯ ಮುಖದಿಂದ ಮನೆಯ ಸ್ಥಿತಿಯನ್ನೆಲ್ಲಾ ವಿಚಾರಿಸಿ ಕೇಳಿ ವ್ಯಸನಪಟ್ಟು ಅಣ್ಣನ ಸಂಗಡ ಮಾತಾಡಿ ಎಲ್ಲರನ್ನೂ ಮೊದಲಿನಂತೆ ಸೇರಿಸ ಬೇಕೆಂದು ಪ್ರಯತ್ನಿಸಿದನು. ಆದರೆ ಕಾರ್ಯಸಿದ್ಧಿಯಾಗಲಿಲ್ಲ. ವೆಂಕಟೇಶನು ತಾನೊಬ್ಬನೇ ಸಂಪಾದಿಸುವವನೆಂದೂ ಕೆಲಸಕ್ಕೆ ಬಂದವನೆಂದೂ ಮದುವೆಯ ನಿಮಿ ತವಾಗಿ ಇರುವ ಮನ್ಯಗಳನ್ನು ಸಹ ಆಧಾರಮಾಡುವುದರಿಂದ ಇನ್ನು ಮೇಲೆ ಒಂದು ಕಾಸೂ ಬರುವುದಕ್ಕೆ ಮಾರ್ಗವಿಲ್ಲದೆ ಮುಂದೆ ಗೃಹಕೃತ್ಯವೆಲ್ಲಾ ತನ್ನ ಮೇಲೆ ಬೀಳುವುದೆಂದೂ ಯೋಚಿಸಿ ತಾನು ಹೇಗಾದರೂ ತಪ್ಪಿಸಿಕೊಂಡು ಬೇರೆ ಹೋಗಿ ಒಕ್ಕಲುತನ ಮಾಡಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿದ್ದನು. ಆದರೆ ಆ ಸಂಗತಿ ಯನ್ನು ಯಾರಸಂಗಡಲೂ ಹೇಳಲಿಲ್ಲ, ಹೆಂಗಸರ ಜಗಳ ಮುಂತಾದುವುಗಳನ್ನು ಹೇಳಿ, ಇನ್ನು ಮೇಲೆ ಒಂದಿಗಿರುವುದು ಸರಿಬೀಳದೆಂದು ಬಾಯಿ ಬಿಟ್ಟು ಹೇಳಿದನು. ಅಷ್ಟರಲ್ಲಿ ಮದುವೆಯ ಕಾಲವು ಒದಗಿದುದರಿಂದ ಒಳಗಿದ್ದ ದ್ವೇಷವನ್ನು ನುಂಗಿ, ನಾಲ್ಕು ಮಂದಿ ಏನಾಡಿಕೊಳ್ಳುವರೋ ಎಂದೆಲ್ಲ ರೂ ಮೇಲೆ ಒಂದಾಗಿ ಕಲೆತಿದ್ದರು. ವಿವಾಹಗಳು ಯಥಾವಿಧಿಯಾಗಿಯೇ ನಡೆದುವು. ಯಾವಭಾಗದಲ್ಲಿಯೂ ಇಲ್ಲಿ ಹೇಳತಕ್ಕಷ್ಟು ವಿಶೇಷವೇನೂ ಕಾಣಬರುವದಿಲ್ಲ, ಮದುವೆಗೆ ಬಂದಿದ್ದವರು ಆಕ್ಷೇ ಪಿಸದಿದ್ದರೂ ಬೀಗರಸಂಗಡ ಉಡುಗೆರೆಯ ನಿಮಿತ್ತವಾಗಿ ಬಂದಿದ್ದ ಒಬ್ಬ ದೂರದ ನಂಟನು ತನಗೆ ಮೊದಲು ಮಣೆಹಾಕಲಿಲ್ಲ ವೆಂದೂ ವಿಶೇಷ ಗೌರವವನ್ನು ತೋರಿ ಸಲಿಲ್ಲ ವೆಂದೂ ಆಕ್ಷೇಪಿಸಿ ಒಂದುದಿನ ಊಟಕ್ಕೆ ಏಳದೆ ಮದುವೆಯವರನ್ನೆಲ್ಲಾ ಮರು ಜಾವದವರೆಗೂ ಒಣಗಿಸಿದುದೊಂದೇ ವಿಶೇಷ, ಆ ದಿನ ನಾರಾಯಣ ಮೂರ್ತಿ ಸಾಹಸಮಾಡಿ ಮದುವೆಯವರಿಗೆಲ್ಲಾ ಬೋಧಿಸಿ ಅವನನ್ನು ಬಿಟ್ಟುಬಿಟ್ಟೆ ಊಟಮಾಡುವಂತೆ ಮಾಡದೆ ಇದ್ದರೆ ಮತ್ತೆ ಕೆಲವು ವಿಶೇಷಗಳು ಹುಟ್ಟುತ್ತಿದ್ದುವು. ಹಾಗೆ ಮಾಡಿದುದರಿಂದ ಮರುದಿನ ಆ ನೆಂಟನೇ ಮುಂದಾಗಿ ಭೋಜನಕ್ಕೆ ಬಂದು ಕುಳಿತುಕೊಂಡನು, ಅದರಿಂದ ಯಾವ ವಿಶೇಷಗಳಿಗೂ ಅವಕಾಶವಿಲ್ಲದಂತಾ ಯಿತು. ಪುರುಷರಲ್ಲಿ ನಾರಾಯಣಮೂರ್ತಿಯ, ಸ್ತ್ರೀಯರಲ್ಲಿ ಸತ್ಯವತಿಯ, ಮಾಡಿದ ಆದರಣೆಯಿಂದ ಯಾವಭಾಗದಲ್ಲಿಯ ಕೊರತೆಯಿಲ್ಲದೆ ಎಲ್ಲರೂ ಸಂ ತೋಷಪಟ್ಟರು. ಸುಂದರಮ್ಮನು ಭೋಜನಕಾಲಗಳಲ್ಲಿ ಮಾತ್ರ ಬಂದು ಇವು ಇಲ್ಲ