೩೪ ಸತ್ಯವತಿಚರಿತ್ರೆ •••••••••••••••4, * 'y*** * * * * * ಆಲೋಚಿಸಿಕೊಂಡರು. ಆ ವೈದ್ಯನು ಇಂತಹ ಎಷ್ಟೋಮಂದಿ ರೋಗಿಗಳಿಗೆ ಕಡೆ ಗಾಣಿಸಿದವನು. ಆದುದರಿಂದ ಪರಮರ್ಥವನ್ನು ಅಷ್ಟರೊಳಗಾಗಿಯೇ ಕಂಡು ಹಿಡಿದು ಪ್ರಾಣಹೋದಮೇಲೆ ತನಗೆ ಹಣ ಬಾರದೆಂದು ಯೋಚಿಸಿ ಯಾವುದಾ ದರೂ ಒಂದುನೆವದಿಂದ ಆಗಲೇ ಹಣ ಸುಲಿದು ಕೊಳ್ಳಬೇಕೆಂದು ನಿಷ್ಕರ್ಷೆಮಾಡಿ ಕೊಂಡು ಈ ಹೊತ್ತು ಚಿಂತಾಮಣಮಾತ್ರೆ ಹಾಕದಿದ್ದರೆ ಪ್ರಯೋಜನವಿಲ್ಲ ವೆಂದೂ ತಾನು ಹೇಳಿದಂತೆ ಪಥ್ಯ ನಡೆಯಿಸದೆ ಹಾಳುಮಾಡಿದರೆಂದೂ ಆ ಔಷಧ ತನ್ನ ಹತ್ತಿರ ಎಲ್ಲ ದುದರಿಂದ ಬೇರೊಂದು ನಂಬಿಕೆಯಾದ ಸ್ಥಳದಲ್ಲಿ ಕೊಂಡುಕೊಂಡುಬರುವು ದಕ್ಕೆ ಒಂದು ನಿಮಿಷದೊಳಗಾಗಿ ಹತ್ತು ರೂಪಾಯಿ. ಬೇಕೆಂದೂ ಹೇಳಿದನು. ಆಗ ವೆಂಕಟೇಶನ ಪೆಟ್ಟಿಗೆಯಲ್ಲಿ ಮೂವತ್ತು ರೂಪಾಯಿಗಳಿದ್ದುವು. ಆದರೂ ಅನನು ಹತ್ತಿರ ಒಂದು ಕಾಸೂ ಇಲ್ಲ ವೆಂದು ನಟಿಸಿದನು. ನಾರಾಯಣಮೂರ್ತಿಯ ಹತ್ತಿರ ನಿಜವಾಗಿಯೇ ಒಂದು ಕಾಸೂ ಇರಲಿಲ್ಲ, ಅದರಿಂದ ಆತನು ಏನುಮಾಡುವು ದಕ್ಕೂ ತಿಳಿಯದೆ ಯೋಚಿಸುತ್ತಿದ್ದನು. ಸತ್ಯವತಿ ಅದನ್ನು ತಿಳಿದು ಕಣ್ಣನ್ನೆ ಮಾಡಿ ಗಂಡನನ್ನು ಕಿರುಮನೆಗೆ ಕರೆದು ತನ್ನ ಕೊರಳಲ್ಲಿದ್ದ ಸರದಲ್ಲಿ ನಾಲ್ಕು ಚಿನ್ನದಕಾಸು ಗಳನ್ನು ತೆಗೆದು ಕೈಗೆ ಕೊಟ್ಟು ಇವುಗಳನ್ನು ಮಾರಿ ವೈದ್ಯನಿಗೆ ಕೊಟ್ಟು ಒಳ್ಳೆಯ ಔಷಧ ಹಾಕಿಸಬೇಕೆಂದು ಆತುರದಿಂದ ಹೇಳಿದಳು, ತವರುಮನೆಯವರು ಇಟ್ಟಿ ಹೆಂಡತಿಯ ಒಡವೆಯನ್ನು ಮಾರುವುದಕ್ಕೆ ಮನಸ್ಸಿಲ್ಲದೆ ಆತನು ಸಂಶಯಪಡು ತಿದ್ದನು. - ಸತ್ಯ-ನೀವು ಎಷ್ಟು ಮಾತ್ರವೂ ಸಂದೇಹ ಪಡಬೇಡಿರಿ, ನನ್ನ ಪ್ರಾರ್ಥನೆ ಯನ್ನು ಲಾಲಿಸಿ, ಈ ಕಾಸುಗಳನ್ನು ಯಾರಿಗಾದರೂ ಮಾರಿಬಿಟ್ಟು ಬೇಗ ಔಷಧ ವನ್ನು ಕೊಡಿಸಿ, ಬದುಕಿದ್ದರೆ ಒಡವೆಗಳು ಎಂದಿಗಾದರೂ ಬರುವುವು. ಹೋದ ಪ್ರಾಣ ಪುನಃ ಹಿಂದಿರುಗಿ ಬರಲಾರದು. ನಾರಾ--ನಿವಾರಣವಾಗಿ ನಿನ್ನ ನಗ ಹೋಗುವುದೇ ಹೊರತು ನಮ್ಮ ತಾಯಿಬೇರೆ ಉಳಿಯುವಂತೆ ತೋರುವುದಿಲ್ಲ. ನಾನು ನಿನಗೆ ಯಾವುದೆಂದು ಒಡವೆಯನ್ನೂ ಮಾಡಿಸಿಕೊಡಲಿಲ್ಲ ವಪೈ ? ನಿನಗೆ ನಿನ್ನ ತವರುಮನೆಯವರು ಕೊಟ್ಟ ಒಡವೆಯನ್ನೂ ತೆಗೆದು ಕೊಳ್ಳುವುದಕ್ಕೆ ನನಗೆ ಕೈಯೇ ಬಾರದು. ಸತ್ಯ-ನಾನೇ ಒಡವೆಯನ್ನು ಕೊಡುವಾಗ ನೀವು ಇದನ್ನು ತೆಗೆದುಕೊಳ್ಳು ವುದಕ್ಕೆ ಏಕೆ ಸಂಶಯ ಪಡುವಿರಿ. ? ನೀವು ಕ್ಷೇಮವಾಗಿದ್ದರೆ ನನಗೆ ಒಡವೆಗಳಿಲ್ಲ ದಿದ್ದರೂ ವ್ಯಸನವಿಲ್ಲ, ಪ್ರಾಣವಿರುವವರೆಗೆ ನಾವು ಮಾಡಬೇಕಾದ ಪ್ರಯತ್ನ
- *