ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಸತ್ಯವತಿಚರಿತ್ರೆ ಒಂಭತ್ತನೆಯ ಪ್ರಕರಣ. ಸತ್ಯವತಿಯ ಹೆರಿಗೆಯಾಗುವವರೆಗೆ ಹೇಳಬೇಕಾದ ವಿಶೇಷವೇನೂ ಇಲ್ಲ. ಮಾಖಬಹುಳ ತ್ರಯೋದಶಿಯ ದಿನ ಉದಯವಾದ ಎರಡು ಗಳಿಗೆಗೆ ಸತ್ಯ ವತಿಯ ಸುಖವಾಗಿ ಪುರುಷಶಿಶುವನ್ನು ಪ್ರಸವಿಸಿದಳು. ಆಕೆಯ ತಾರ್ಯಿಂದಗಳು ಪೂರ್ವಾ ಚಾರವನ್ನೇ ನಂಬಿಕೊಂಡಿರುವ ಸತ್ಯ ಕಾಲದವಗಲ್ಲ, ಆದುದರಿಂದ ಅವ ರು ಮಗಳನ್ನು ಲಂಘನವಿರಿಸದೆ ಪ್ರಾಣಕ್ಕೆ ಆಲಸ್ಯವಾಗಿದ್ದ ಕಾರಣ ಅಶಕ್ಕಿಯಂ ಟಾಗದಿರುವುದಕ್ಕಾಗಿ ಹೆತ್ತ ದಿನ ಮೊದಲುಗೊಂಡು ಜಾಗ್ರತೆಯಾಗಿ ಜೀರ್ಣವಾಗು ವ ರವೆ ಮುಂತಾದುವುಗಳಲ್ಲಿ ಪದಾರ್ಥಗಳನ್ನು ಮಾಡಿಹಾಕುತ್ತಾ ಬಂದರು. ಪೂರ್ವದಲ್ಲಿ ಸುಂದರಮ್ಮನ ಹೆರಿಗೆ ಮನೆಯ ಮುಂದಿದ್ದಂತೆ ಈ ಹೆರಿಗೆ ಮನೆಯಲ್ಲಿ ಗಾಳಿಯನ್ನು ಕೆಡಿಸುವ ಅಗ್ಗಿ ೬ ಕೆಯ ಹೊಗೆಯಾಗಲಿ ಬೆಳ್ಳುಳ್ಳಿ ಮೊದಲಾದುವುಗಳ ನಾತವಾಗಲಿ ಯಾವುದೂ ಇರಲಿಲ್ಲ, ಒಳ್ಳೆಯ ಗಾಳಿ ಬರಲೆಂದು ಅವರು ಕದವನ್ನು ಕೊಂಚ ಓರೆಯಾಗಿ ತೆರೆದಿದ್ದರು. ಊರಿನವರು ಗುಂಪುಗುಂಪಾಗಿ ಬಂದುಬಂದು ಮಗುವಿಗೆ ಎಲ್ಲಿ ಗ್ರಹಣ ತಗುಲಿದೆ ಎಂದು ವಿಚಾರಿಸುತ್ತಿದ್ದರು. ಎಲ್ಲಿಯ ಗ್ರಹಣ ತಗುಲಿಲ್ಲ ವೆಂದು ಮಂತ್ರಸಾನಿ ಹೇಳಿದರೂ ಮತ್ತೆ ಯಾರು ಹೇಳಿದರೂ ಅವರು ನಂಬದೆ ನಿಜವಾಗಿ ಮಗುವಿಗೆ ಯಾವುದೋ ಒಂದು ಅಂಗ ಡೊಂಕಾಗಿದೆ ಎಂದು ಕೊಂಡು ಹೋಗುತ್ತಿದ್ದರು, ಆಹಾ ! ಜನರಿಗೆ ಈಗಲೂ ಹೀಗೆ ಮೂಢತ್ವ ವಿರುವುದಲ್ಲ ? ಇತ್ತ ರಾಜಮಹೇಂದ್ರದಲ್ಲಿ ನಾರಾಯಣಮೂರ್ತಿ ರಾತ್ರಿ ಯ ಹಗಲೂ ಕಷ್ಟ ಪಟ್ಟು ಓದಿ ಪುಷ್ಯ ಮಾಸದಲ್ಲಿ ಪರೀಕ್ಷೆಗಾಗಿ ಚೆನ್ನ ಫುರಿಗೆ ಹೋಗುವಾಗ್ಗೆ ಮೊದಲು ಪೆದ್ದಾಪುರಕ್ಕೆ ಹೋಗಿ ಹೆಂಡತಿಯನ್ನು ನೋಡಿ ಅಲ್ಲಿ ಎರಡುದಿನವಿದ್ದು, ಆಮೇಲೆ ಕಾಕಿನಾಡಿಗೆ ಹೋಗಿ ಅಲ್ಲಿಯೇ ಹಡಗು ಹತ್ತಿದನು. ಆತನು ಚೆನ್ನಪಟ್ಟಣದಲ್ಲಿದ್ದ ಹದಿನೇಳುದಿನಗಳೂ ದೇಹವು ಅಲ್ಲಿಯೇ ಇದ್ದರೂ ಪ್ರಾಣ ವೆಲ್ಲಾ ಹೆಂಡತಿಯಮೇಲೆಯೇ ಇದ್ದಿತು. ಅಲ್ಲಿನ ವಿನೋದಗಳನ್ನು ನೋಡುವುದಕ್ಕಾಗಿ ಆತನ ಜತೆಗಾರರೆಲ್ಲಾ ಅಲ್ಲಿಯೇ ಇದ್ದರು. ಆದರೂ ಆತನು ಒಂದು ನಿಮಿಷವೂ ಅಲ್ಲಿ ನಿಲ್ಲದೆ ಪರೀಕ್ಷೆಯಾದ ಕೂಡಲೆ ಬಂದ ಮೊದಲನೆಯ ಹೊಗೆಬಂಡಿಯ ಮೇಲೆಯೇ ಪುನಃ ಹಿಂದಿರುಗಿ ಪೆದ್ದಾಪುರಕ್ಕೆ ಬಂದನು, ಆಗಿ ರಾಜಮಹೇಂದ್ರದ ಪಾಠಶಾಲಾಧಿಕಾರಿಯೊಬ್ಬನು ಆತನಿಗೆ ನಾಲ್ವತ್ತು ರೂಪಾಯಸ ಸಂಬಳವಳ್ಳ ಪ್ರಧಾನತಾ ಧ್ಯಾಯನ ಕೇಸವನ್ನು ಕೊಡುತ್ತೇನೆ, ನೀನು ಒರ