ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫9 ಸತ್ಯ ವಟೀಚರಿತ್ರೆ ಇಸ್ಪೀಟುಗಳನ್ನು ಆಡಿಕೊಂಡು ಸಾಯಂಕಾಲಕ್ಕೆ ಮನೆಸೇರುತ್ತಾ ದಿನಗಳನ್ನು ಕಳೆ ಯುತ್ತಿದ್ದನು. ಪಾಠಶಾಲೆಗಳಲ್ಲಿ ವಿದ್ಯಾರ್ಥಿಗಳು ಆಡಿದುದೇ ಆಟವಲ್ಲದೆ ಭಯ ವಾಗಲಿ ಅಡ್ಡಿಯಾಗಲಿ ಯಾವುದೂ ಇರಲಿಲ್ಲ, ಏಕೆಂದರೆ ಅನೇಕ ಪಾಠಶಾಲೆ ಗಳಿರುವುದೇ ಇದಕ್ಕೆ ಮೂಲ, ಉಪಾಧ್ಯಾಯರು ಯಾವ ಹುಡುಗನನ್ನು ಗದರಿಸಿ ಕೊಂಡರೂ ಆ ಹುಡುಗನು ಓಡಿಹೋಗಿ ಎಲ್ಲಿ ಬೇರೆ ಪಾಠಶಾಲೆಗೆ ಸೇರಿಕೊಳ್ಳು ವನೋ ಎಂದು ಭಯ ಪಡುತ್ತಾ ವಿದ್ಯಾರ್ಥಿಗಳು ಮತಕ್ಕೆ ಒ೦ದರೂ ಬಾರದಿದ್ದರೂ ಪಾಠಗಳನ್ನು ಓದಿದರೂ ಓದದಿದ್ದರೂ ನೋಡಿದರೂ ನೋಡದಹಲಗೆ ಸುಮ್ಮನಿ ರುತ್ತಾ ಬಾಲಕರ ಚಿತ್ತವೃತ್ತಿಯಂತೆಯೇ ನಡೆಯುತ್ತಿದ್ದರು, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಪಾಠಶಾಲೆಗಳಲ್ಲಿ ಈಗ ಉಪಾಧ್ಯಾಯರ ಕಾವು ಹೋಗಿ ವಿದ್ಯಾರ್ಥಿಗಳ ಕಾಲವು ಬಂದು ಉಪಾಧ್ಯಾಯರಿಗೆ ಬಾಲಕರು ಫೆಯ ಪಡುವುದಕ್ಕೆ ಬದಲಾಗಿ ಬಾಲಕರಿಗೆ ಉಪಾಧ್ಯಾಯರು ಭಯಪಡಬೇಕಾಯಿತು. ಆದುದರಿಂದ ಓದಿನಲ್ಲಿ ಆಸಕ್ತಿಯುಳ್ಳ ಬುದ್ದಿವಂತರು ಕಲವರು ಹೊರತು ಉಳಿದ ವರು ಸ್ವಚ್ಛೆಯಾಗಿ ಒಂದು ಪಾಠಶಾಲೆಯನ್ನು ಬಿಟ್ಟು ಮತ್ತೊಂದು ಪಾಠಶಾಲೆಗೆ ಹೋಗಿ ಒಂದು ವರುಷದೊಳಗಾಗಿ ಪಟ್ಟಣದಲ್ಲಿರುವ ಪಾಠಶಾಲೆಗಳಲ್ಲೆಲ್ಲಾ ತಿರುಗಿ ಎಲ್ಲಿಯೂ ನಾಲ್ಕು ತಿಂಗಳು ಕಾಲೂರಿ ಓದದೆ ಏತಕ್ಕೂ ಕೆಲಸಕ್ಕೆ ಬಾರದೆ ಪಂಡರಾಗಿ ಕೆಟ್ಟು ಹೋಗುತ್ತಿದ್ದರು. ತಾಯಿ ತಂದೆಗಳು ಸಹ ಎಲ್ಲಿ ತಕ್ಕ ಉಪಾ ಧ್ಯಾ ಯರಿರುವರೋ ಎಲ್ಲಿ ವಿದ್ಯೆ ಚೆನ್ನಾಗಿ ಬರುವುದೋ ಎಂದು ವಿಚಾರಿಸುವುದಕ್ಕೆ ಸಮರ್ಥರಾಗದೆ ಹುಡುಗರಿಗೆ ಎಲ್ಲಿಗೆ ಹೋಗುವುದಕ್ಕೆ ಇಷ್ಟ ವೋ ಎಲ್ಲಿ ಮಾಸ ದಕ್ಷಿಣೆ ಕಡಮೆಯೋ ಆ ಪಠಶಾಲೆಗೆ ಅವರನ್ನು ಮನಸ್ಸು ಬಂದಂತೆ ಹೋಗುವ ಹಾಗೆ ಬಿಡುತ್ತಿದ್ದರು. ಹೀಗೆ ತಿರುಗಿ ಕೆಟ್ಟು ಹೋದವರಲ್ಲಿ ನಮ್ಮ ರಾಮಸ್ವಾಮಿ ಯೋಬ್ಬನು. ತಮ್ಮ ತಿಳಿವಳಿಕೆಗೆ ತಕ್ಕ ತರಗತಿಗಳಿಗೆ ಸೇರಿ ಸರಿಯಾಗಿ ಓದಿ ಮುಂದಕ್ಕೆ ಬಾರದೆ ದೊಡ್ಡ ತರಗತಿಗೆ ಸೇರಿ ಕಡೆಗೆ ಯಾವ ಕೆಲಸಕ್ಕೂ ಬಾರದೆ ಕೆಟ್ಟು ಹೋದ ನಮ್ಮ ರಾಮಸ್ವಾಮಿಯಂತಹರು ಈಗಲೀಗ ಲೆಕ್ಕಕ್ಕೆ ಹೆಚ್ಚಾ ಗುತ್ತಾ ಒಂದರು. ಅಣ್ಣನ ಕೈಯಿಂದ ಮರು ರೂಪಾಯಿಗಳನ್ನು ದಂಡವಾಗಿ ಕೊಡಿಸಿ: ಮಧ್ಯ ತರಗತಿಯ ಪರೀಕ್ಷೆಗೆ ಹೋಗಿ ಪ್ರಶ್ನೆ ಪತ್ರಿಕೆಗಳಿಗೆಲ್ಲಾ ಸರಿಯಾದ ಉತ್ತರಗಳನ್ನು ಒರೆದಂತೆ ಬಡಾಯಿ ಹೇಳಿ ಕೊಳ್ಳುತ್ತಿದ್ದರೂ ಪರೀಕ್ಷೆಯಲ್ಲಿ ಕೃತಾರ್ಥರಾದವರ ಹೆಸರು ಬಂದಾಗ ರಾಮಸ್ವಾಮಿಲು ಹೆಸರು ಬರಲಿಲ್ಲ, ತನ್ನ ಉತ್ತರಪತ್ರಿಕೆಗಳನ್ನು ತಿದ್ದಿದ ಪರಿ ಕ್ಷಕರು ಸರಿಯಾಗಿ Jಡದೆ ಅನ್ಯಾಯ ಮಾಡಿ