ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ರಿ ಸತ್ಯವತಿಚರಿತ್ರೆ ನಿ ಮರ್ತಿಯು ತನ್ನ ಕೆಲಸವನ್ನು ಬಿಟ್ಟು ಬಿಟ್ಟು ರಾತ್ರಿಯೂ ಹಗಲೂ ಹೆಂಡತಿಯ ಮಂಚದ ಹತ್ತಿರವೇ ಇದ್ದು ನಿದ್ರಾಹಾರಗಳಿಲ್ಲದೆ ರಾತ್ರಿ ಎರಡು ಜಾವದ ವೇಳೆ ಯಲ್ಲಾದರೂ ವೈದ್ಯನ ಮನೆಗೆ ಓಡಿಹೋಗುತ್ತಾ ವೈದ್ಯನು ಯಾವ ಪಥ್ಯದ ವಸ್ತುವು ಆಗಬೇಕೆಂದರೂ ಅವುಗಳಿಗಾಗಿ ಆಗಲೇ ಹೋಗಿ ತರುತ್ತಿದ್ದನು. ಈಗ ಸತ್ಯವತಿಯ ಹತ್ತಿರ ಕಾದಿರುವುದಕ್ಕಾಗಲಿ ಪಥ್ಯಪಾನಗಳನ್ನು ಒದಗಿಸುವುದ ಕ್ಯಾಗಲಿ ವೈದ್ಯನ ಹತ್ತಿರ ಔಷಧಗಳನ್ನು ತರುವುದಕ್ಕಾಗಲಿ ಪರಿಚಾರಕರಿಗೆ ಕಾಮವಿಲ್ಲ. ಪಟ್ಟಣದಲ್ಲಿ ಆಕೆಯ ಗುರುತನ್ನು ಕಂಡಿರುವವರೊಳಗೆ ಆಕೆಯ ಮೇಲೆ ಪ್ರೀತಿಯಿಲ್ಲದವರು ಒಬ್ಬರೂ ಇಲ್ಲವಾದುದರಿಂದ ಎಷ್ಟೋ ಮಂದಿ ರಾತ್ರಿಯ ಹಗಲೂ ಗುಂಪಗುಂಪಾಗಿ ಬಂದು ಸತ್ಯವತಿಯ ಸ್ಥಿತಿಯನ್ನು ನೋಡಿ ಕಣ್ಣೀರು ಸುರಿಸುತ್ತಾ ಆಕೆಗೆ ಬೇಕಾದುದನ್ನು ತರುವುದಕ್ಕೆ ಸಿದ್ದರಾಗಿದ್ದರು. ಸತ್ಯವತಿಯು ತನಗೆ ಜ್ಞಾನ ಬಂದಾಗ ಕಣ್ಣೀರನ್ನು ಒರಸಿಕೊಳ್ಳುತ್ತಾ ನಿಂತು ಕೊಂಡಿದ್ದ ಗಂಡನ ಮುಖವನ್ನು ನೋಡಿ- ವ್ಯಸನವನ್ನು ಬಿಟ್ಟು ನ್ಯಾಯ ಸಭೆಗೆ ಹೋಗಿ ಕೆಲಸವನ್ನು ನೋಡಿಕೊಳ್ಳಬೇಕೆಂದೂ ತನಗೆ ಪ್ರಾಣ ಭಯವೇನೂ ಇಲ್ಲ ವೆಂದೂ ಸೀತೆಯನ್ನು ನೋಡಿ.- ಊಟಕ್ಕೆ ಹೋಗೆಂದೂ, ಮಹಾಲಕ್ಷ್ಮಿಯನ್ನು ಅಳಬೇಡವೆಂದೂ, ಪರಿಚಾರಕರನ್ನು ನೋಡಿ-ಅಳುವುದನ್ನು ಬಿಟ್ಟು ಹೋಗಿ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಿರೆಂದೂ, ನೆರೆಹೊರೆಯವರನ್ನು ನೋಡಿ-ನನಗೊ ಸ್ಕರ ನಿಮಗೆಲ್ಲರಿಗೂ ಶ್ರಮವೆಂದೂ ಕೆಲವು ಸಮಯಗಳಲ್ಲಿ ಸನ್ನೆಗಳಿಂದಲೂ ಕೆಲವು ವೇಳೆ ಹೀನಸ್ವರದಿಂದ ಹೇಳುತ್ತಿದ್ದಳು. ಆಕೆಯ ಬಾಯಿಂದ ಆ ಮಾತುಗಳು ಬರುವಾಗ ಎಲ್ಲರಿಗೂ ಎದೆಯೊಡೆದು ಹೋಗಿ ದುಃಖವು ಒಳಗಿನಿಂದ ಉಕ್ಕಿ ಬರ ಲಾಗಿ ಬಹುಪ್ರಯಾಸದಿಂದ ಕೈಕಾಲಾಡದಿರಲು ಬಿಟ್ಟು ಹೋಗುವುದಕ್ಕೆ ಬದ್ದಿ ಯುಂಟಾಗದೆ ಚಿತ್ರ ಪ್ರತಿಮೆಗಳಂತೆ ನಿಂತು ಕಣ್ಣೀರು ಬಿಡುತ್ತಿದ್ದರು, ಕೆಲವು ದಿನ ಗಳು ಹೀಗಿದ್ದ ಬಳಿಕ ದೈವಾನುಗ್ರಹದಿಂದ ರೋಗವು ಗುಣಮುಖಕ್ಕೆ ಬರಲಾಗಿ ಎಲ್ಲರಿಗೂ ಸ್ವಲ್ಪ ಆಸೆಹುಟ್ಟಿ ಮುಖದಲ್ಲಿ ಸಂತೋಷವೂ ಕಾಣಬರುತ್ತಿದ್ದಿತು. ಆದರೆ ಆಕೆ ನಡುಮನೆಗೆ ಬಂದು ಮೆಲ್ಲಗೆ ತಿರುಗಾಡುವಾಗ್ಯ ಮೂರುತಿಂಗಳ ಮೇಲಾಯಿತು. ಆಗ ಎಳೆಗೂಸಿಗೆ ಹಾಲೆರೆದು ಸಾಕುವುದೂ ಹೊಚ್ಚಲು ಮಗುವನ್ನು ತಾಯಿಯ ಹತ್ತಿರ ಅಳದ ಹಾಗೆ ಸಮಾಧಾನಪಡಿಸಿ ಕಂಗೆಡದಂತೆ ಮಾಡುವುದೂ ಅವಳ ರೋಗಕ್ಕಿಂತಲೂ ಹೆಚ್ಚಾಗಿದ್ದುವು, ಅದುವರೆಗೆ ವೈದ್ಯನು ಆಕೆಗೆ ನೀರನ್ನು ಎರೆಯಿಸಲಿಲ್ಲ, ಆ ಮೂರುತಿಂಗಳಲ್ಲಿಯ ನಾರಾ